ರಾಜಕೀಯ, ಕ್ರೀಡೆ ಮೊದಲಾದ ಕ್ಷೇತ್ರಗಳಿಗೂ ಚಿತ್ರರಂಗಕ್ಕೂ ಎಲ್ಲಿಲ್ಲದ ನಂಟು. ರಾಜಕಾರಣಿಗಳು, ಕ್ರಿಕೆಟರ್ಗಳು ಬಾಲಿವುಡ್ ನಾಯಕಿಯರ ಜೊತೆ ಸುತ್ತಾಟ ನಡೆಸಿದ ಉದಾಹರಣೆ ಇದೆ. ಕೆಲವರು ವಿವಾಹ ಕೂಡ ಆಗಿದ್ದಾರೆ. ಈಗ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Parineeti Chopra) ಅವರು ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರೂ ಪದೇಪದೇ ಒಟ್ಟಾಗಿ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದು ಈ ಸುದ್ದಿ ಹುಟ್ಟಿಕೊಳ್ಳಲು ಕಾರಣ.
ಪರಿಣೀತಿ ಚೋಪ್ರಾ ಅವರು ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ಯಶಸ್ಸು ಸಿಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ಹೆಸರು ರಾಜಕಾರಣಿಯ ಜೊತೆ ತಳಕು ಹಾಕಿಕೊಂಡಿದೆ. ಈ ವಿಚಾರದ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಬುಧವಾರ ಗುರುಗ್ರಾಮದ ಹೋಟೆಲ್ ಒಂದರಲ್ಲಿ ಪರಿಣೀತಿ ಹಾಗೂ ರಾಘವ್ ರಾತ್ರಿ ಊಟ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಮುಂಬೈನ ಬಾಂದ್ರಾದ ಹೋಟೆಲ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಇಬ್ಬರೂ ಒಟ್ಟಾಗಿ ಊಟ ಮಾಡಲು ಸೇರಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಈ ಫೋಟೋಗಳನ್ನು ಕ್ಲಿಕ್ಕಿಸಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇಬ್ಬರೂ ಮ್ಯಾಚಿಂಗ್ ಶರ್ಟ್ ಧರಿಸಿದ್ದರು ಅನ್ನೋದು ವಿಶೇಷ.
ಇದನ್ನೂ ಓದಿ: RRR: ‘ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ..’; ‘ಆರ್ಆರ್ಆರ್’ ಆಫರ್ ರಿಜೆಕ್ಟ್ ಮಾಡಿದ್ದ 5 ಸ್ಟಾರ್ ನಟಿಯರು ಇವರೇ!
ಸದ್ಯ ಇವರ ರಿಲೇಶನ್ಶಿಪ್ ಬಗ್ಗೆ ಅನೇಕ ಅಂತೆಕಂತೆಗಳು ಹರಿದಾಡುತ್ತಿವೆ. ಕೆಲವು ವರದಿಗಳು ಇವರು ಫ್ರೆಂಡ್ಸ್ ಅಷ್ಟೇ ಎಂದು ಹೇಳುತ್ತಿವೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪರಿಣೀತಿ ಹಾಗೂ ರಾಘವ್ ಅಧ್ಯಯನ ನಡೆಸಿದ್ದರು. ಇಬ್ಬರೂ ಒಟ್ಟಾಗಿ ಓದಿದ್ದರಿಂದ ಇವರ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದೆ. ಈ ಕಾರಣಕ್ಕೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಭೇಟಿಯನ್ನು ಅನೇಕರು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಪರಿಣೀತಿ ರಾಜಕೀಯ ಸೇರುತ್ತಾರೆ ಎಂಬ ವದಂತಿಯನ್ನೂ ಹರಿಬಿಡಲಾಗಿದೆ. ಈ ಎಲ್ಲಾ ಅಂತೆ-ಕಂತೆಗಳಿಗೆ ಪರಿಣೀತಿ ಅವರೇ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್ ಎಂದವರಿಗೆ ನಟಿಯ ತಿರುಗೇಟು
ಪರಿಣೀತಿ ಚೋಪ್ರಾ ಅವರ ಕೈಯಲ್ಲಿ ಎರಡು ಸಿನಿಮಾ ಇದೆ. ‘ಚಂಕಿಲಾ’ ಹಾಗೂ ‘ಕ್ಯಾಪ್ಸೂಲ್ ಗಿಲ್’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಎರಡೂ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ಅವರ ಯಾವ ಸಿನಿಮಾಗಳೂ ಗೆಲುವು ಕಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:21 am, Fri, 24 March 23