ಬಾಲಿವುಡ್ (Bollywood) ನಟ ರಣ್ವೀರ್ ಸಿಂಗ್ (Ranveer Singh) ತಮ್ಮ ಬಿಡು-ಬೀಸು ವ್ಯಕ್ತಿತ್ವಕ್ಕೆ ಜನಪ್ರಿಯರು. ಚಿತ್ರ ವಿಚಿತ್ರ ಬಟ್ಟೆಗಳನ್ನು ಹಾಕಿಕೊಳ್ಳುವುದು, ಚಿತ್ರ ವಿಚಿತ್ರವಾಗಿ ಆಡುವುದು ಇದ್ಯಾವುದಕ್ಕೂ ಅವರು ಮುಜುಗರ ಪಟ್ಟುಕೊಳ್ಳುವುದಿಲ್ಲ. ಕಳೆದ ವರ್ಷ ಬಟ್ಟೆ ತೊಡತೆ ಬೆತ್ತಲೆಯಾಗಿಯೂ ಫೋಸ್ ಕೊಟ್ಟಿದ್ದರು ರಣ್ವೀರ್ ಸಿಂಗ್. ರಣ್ವೀರ್ ಕ್ಯಾಮೆರ ಮುಂದೆ ಮಾತ್ರವಲ್ಲ, ಕ್ಯಾಮೆರಾ ಇಲ್ಲದಿದ್ದಾಗಲೂ ಹಾಗೆಯೇ ಇರುತ್ತಾರಂತೆ. ಈ ಬಗ್ಗೆ ನಟಿ ಪರಿಣೀತಿ ಚೋಪ್ರಾ (Parineeti Chopra) ಮಾತನಾಡಿದ್ದಾರೆ.
ರಣ್ವೀರ್ ಸಿಂಗ್ ಹಾಗೂ ಪರಿಣೀತಿ ಚೋಪ್ರಾ ‘ಲೇಡೀಸ್ ವರ್ಸಸ್ ರಿಕಿ ಬೇಲ್’, ‘ಕಿಲ್ ದಿಲ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಪರಿಣೀತಿ ಚೋಪ್ರಾ, ರಣ್ವೀರ್ ಸಿಂಗ್ ಕ್ಯಾರಾವ್ಯಾನ್ಗೆ ಹೋಗುವುದೆಂದರೆ ನನಗೆ ಭಯವಾಗುತ್ತಿತ್ತು, ರಣ್ವೀರ್ ನಾಚಿಕೆ ಇಲ್ಲದೆ ವರ್ತಿಸುತ್ತಾನೆ’ ಎಂದಿದ್ದಾರೆ.
ಅವನ ಕ್ಯಾರಾವ್ಯಾನ್ಗೆ ಹೋದರೆ ಆತ ಪ್ಯಾಂಟ್ ಹಾಕಿಕೊಳ್ಳದೆ ಅಂಡರ್ವೇರ್ನಲ್ಲೇ ಇರುತ್ತಿದ್ದ, ನಾನು ಕ್ಯಾರಾವ್ಯಾನ್ಗೆ ಹೋದರೆ ಹಾಗೆಯೇ ನನ್ನ ಪಕ್ಕ ಬಂದು ಕುಳಿತುಕೊಳ್ಳುತ್ತಿದ್ದ ನನಗೆ ಬಹಳ ಮುಜುಗರ ಆಗುತ್ತಿತ್ತು, ಆದರೆ ರಣ್ವೀರ್ಗೆ ಅದು ಏನೂ ಅನ್ನಿಸುತ್ತಿರಲ್ಲ ಆತ ಆರಾಮವಾಗಿ ಇರುತ್ತಿದ್ದ. ಅವನಿಗೆ ನಾಚಿಕೆ, ಮುಜುಗರ ಏನೂ ಆಗುತ್ತಿರಲಿಲ್ಲ’ ಎಂದಿದ್ದರು.
ಇದನ್ನೂ ಓದಿ:‘ಹನುಮ್ಯಾನ್’ ನಿರ್ದೇಶಕನ ‘ರಾಕ್ಷಸ್’ ಸಿನಿಮಾದಿಂದ ಹೊರಬಂದ ರಣ್ವೀರ್ ಸಿಂಗ್
‘ನಾನು ಯಾರದ್ದಾದರೂ ಕ್ಯಾರಾವ್ಯಾನ್ ಅಥವಾ ಮೇಕಪ್ ರೂಂಗೆ ಹೋಗಬೇಕೆಂದರೆ ಬಾಗಿಲು ತಟ್ಟಿ ಹೋಗುತ್ತೇನೆ. ಆದರೆ ರಣ್ವೀರ್ ಸಿಂಗ್ ಕ್ಯಾರಾವ್ಯಾನ್ಗೆ ಹೋಗಬೇಕೆಂದರೆ ಅದರ ಅವಶ್ಯಕತೆ ಇರುವುದಿಲ್ಲ. ಒಂದೋ ಅವನು ನಿದ್ದೆ ಮಾಡುತ್ತಿರುತ್ತಾನೆ ಇಲ್ಲವೇ ಮಲಗಿರುತ್ತಾನೆ. ಎರಡರಲ್ಲಿ ಒಂದಷ್ಟೆ ಆಗಿರಲು ಸಾಧ್ಯ, ಆದರೆ ಅವನ ಕ್ಯಾರಾವ್ಯಾನ್ಗೆ ಹೋಗಲು ಇರುವ ದೊಡ್ಡ ಅಡ್ಡಿಯೆಂದರೆ ಆತ ಬಟ್ಟೆ ಹಾಕಿದ್ದಾನೆಯೋ ಇಲ್ಲವೋ ಎಂಬ ಅನುಮಾನ ಇರುತ್ತದೆ. ಕ್ಯಾರಾವ್ಯಾನ್ ಒಳಗೆ ಹೋದ ಕೆಲವರು ಬಟ್ಟೆ ಇಲ್ಲದ ನಗ್ನ ರಣ್ವೀರ್ ಸಿಂಗ್ ಅನ್ನು ನೋಡಿದ್ದಿದೆ’ ಎಂದಿದ್ದರು ಪರಿಣೀತಿ ಚೋಪ್ರಾ.
ಬಟ್ಟೆ ಇಲ್ಲದೆ ಓಡಾಡುವುದು, ಕೇವಲ ಅಂಡರ್ವೇರ್ ಧರಿಸಿ ಓಡಾಡುವುದು ರಣ್ವೀರ್ ಸಿಂಗ್ಗೆ ತೀರ ಸಾಮಾನ್ಯ. ಹಲವು ಬಾರಿ ಸೆಟ್ಗಳಲ್ಲಿ ರಣ್ವೀರ್ ಸಿಂಗ್ ಹೀಗೆ ಮಾಡಿದ್ದಿದೆಯಂತೆ. ಆದರೆ ಅವರಿಗೆ ಅದು ಮುಜುಗರ ಎನಿಸುವುದಿಲ್ಲ ಎಂದು ಇನ್ನೂ ಕೆಲವು ನಟ-ನಟಿಯರು ಹಿಂದೆ ಹೇಳಿದ್ದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Sun, 26 May 24