Shah Rukh Khan: ಶಾರುಖ್ ಖಾನ್ ಬದುಕಿದ್ದಾಗಲೇ ಅಂತಿಮ ವಿಧಿವಿಧಾನ ಮಾಡಿದ ಅಯೋಧ್ಯೆ ಸ್ವಾಮೀಜಿ

ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಹಾಡಿನ ವಿವಾದದ ಕುರಿತು ಮಾತನಾಡುವಾಗ ಶಾರುಖ್ ಖಾನ್ ವಿರುದ್ಧ ಗುಡುಗಿದ್ದರು. ಈಗ ಅವರು ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿದ್ದಾರೆ. ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ.

Shah Rukh Khan: ಶಾರುಖ್ ಖಾನ್ ಬದುಕಿದ್ದಾಗಲೇ ಅಂತಿಮ ವಿಧಿವಿಧಾನ ಮಾಡಿದ ಅಯೋಧ್ಯೆ ಸ್ವಾಮೀಜಿ
ಶಾರುಖ್​
Edited By:

Updated on: Dec 29, 2022 | 12:01 PM

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಚಿತ್ರದ ‘ಬೇಷರಂ ರಂಗ್​’ (Besharam Rang ) ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರಿಂದ ಈ ಹಾಡಿಗೆ ವಿವಾದ ಅಂಟಿಕೊಂಡಿತು. ಸಿನಿಮಾ ಬ್ಯಾನ್ ಮಾಡಬೇಕು ಎಂದು ಅನೇಕರು ಬೊಬ್ಬೆಹೊಡೆದುಕೊಂಡಿದ್ದಾರೆ.  ಅಯೋಧ್ಯೆಯ ಪರಮಹಂಸ ಸ್ವಾಮೀಜಿ ಅವರು ಇತ್ತೀಚೆಗೆ ಈ ಹಾಡಿನ ವಿವಾದಕ್ಕೆ ಸಂಬಂಧಿಸಿ ಶಾರುಖ್ ಖಾನ್ ಅವರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ್ದರು. ಈಗ ಶಾರುಖ್ ಬದುಕಿದ್ದಾಗಲೇ ಅವರ ಅಂತಿಮ ವಿಧಿ-ವಿಧಾನಗಳನ್ನು ಭೋಪಾಲ್​ನಲ್ಲಿ ಮಾಡಿ ಮುಗಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಹಾಡಿನ ವಿವಾದದ ಕುರಿತು ಮಾತನಾಡುವಾಗ ಶಾರುಖ್ ಖಾನ್ ವಿರುದ್ಧ ಗುಡುಗಿದ್ದರು. ಈಗ ಅವರು ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿದ್ದಾರೆ. ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ. ಹಿಂದೂಗಳ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಮಾಡುವಾಗ ಮಡಿಕೆಯನ್ನು ಒಡೆದು ಹಾಕುತ್ತಾರೆ. ಅದನ್ನೇ ಪರಮಹಂಸ ಆಚಾರ್ಯ ಅವರು ಕೂಡ ಮಾಡಿದ್ದಾರೆ. ಈ ಮೂಲಕ ಶಾರುಖ್ ಅವರ ಅಂತಿಮ ವಿಧಿವಿಧಾನ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ
ಹಲವು ತಿಂಗಳ ಬಳಿಕ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ಗೆ ಫುಲ್ ರಿಲೀಫ್
ಆರ್ಯನ್​ ಖಾನ್​ ಕೇಸ್​ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಂಡ ಶಾರುಖ್ ಪತ್ನಿ ಗೌರಿ ಖಾನ್​, ಪುತ್ರಿ ಸುಹಾನಾ
ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?
ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ

ಈ ಮೊದಲು ನೀಡಿದ ಹೇಳಿಕೆ ಏನು?

‘ನಮ್ಮ ಸನಾತನ ಧರ್ಮದ ಜನರು ಈ ವಿಚಾರದ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಜಿಹಾದಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ನಾನು ಅವರನ್ನು ಜೀವಂತವಾಗಿ ಸುಡುತ್ತೇನೆ. ಪಠಾಣ್ ಚಿತ್ರ ಥಿಯೇಟರ್​ನಲ್ಲಿ ರಿಲೀಸ್ ಆದರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂಕಿ ಇಡುತ್ತೇನೆ’ ಎಂದು ಪರಮಹಂಸ ಆಚಾರ್ಯ ಹೇಳಿದ್ದರು.

ಇದನ್ನೂ ಓದಿ: Pathaan: ಬೇಷರಂ​ ರಂಗ್ ವಿವಾದದ ಮಧ್ಯೆ ಶಾರುಖ್​ ಖಾನ್ ಟ್ವೀಟ್​: ಪಠಾಣ್ ಕೂಡ ದೇಶಭಕ್ತಿ ಸಾರುವ ಚಿತ್ರ ಎಂದ ಬಾದ್‌ಷಾ

ಏನಿದು ವಿವಾದ?

ಶಾರುಖ್ ಖಾನ್ ನಟನೆಯ ‘ಪಠಾಣ್​’ ಚಿತ್ರದ ‘ಬೇಷರಂ ರಂಗ್​..’ ಸಾಂಗ್ ಬಿಡುಗಡೆ ಆಗಿತ್ತು. ಈ ಸಾಲಿನ ಅರ್ಥ ನಾಚಿಕೆ ಇಲ್ಲದ ಬಣ್ಣ ಎಂದು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಹಾಕಿದ್ದೇ ವಿವಾದ ಏಳಲು ಮುಖ್ಯ ಕಾರಣ ಆಗಿತ್ತು. ಈ ಸಿನಿಮಾನ ಬ್ಯಾನ್ ಮಾಡುವಂತೆ ಅನೇಕರು ಆಗ್ರಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:55 am, Thu, 29 December 22