AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ‘ಪಠಾಣ್​’ ಚಿತ್ರಕ್ಕೆ ಸೆನ್ಸಾರ್​ ಸಂಕಷ್ಟ; ಹಲವು ಬದಲಾವಣೆ ಮಾಡುವಂತೆ ಅಧಿಕಾರಿಗಳಿಂದ ಸೂಚನೆ

Censor Board | Pathaan Movie: ‘ಪಠಾಣ್​’ ಸಿನಿಮಾದಲ್ಲಿನ ಬಹುತೇಕ ದೃಶ್ಯಗಳಿಗೆ ಸೆನ್ಸಾರ್​ ಮಂಡಳಿಯಲ್ಲಿ ತಕರಾರು ವ್ಯಕ್ತವಾಗಿದೆ. ಸಾಕಷ್ಟು ಬದಲಾವಣೆ ಮಾಡಿ, ಪುನಃ ಸೆನ್ಸಾರ್​ಗೆ ಕಳಿಸಲು ಸೂಚಿಸಲಾಗಿದೆ.

Shah Rukh Khan: ‘ಪಠಾಣ್​’ ಚಿತ್ರಕ್ಕೆ ಸೆನ್ಸಾರ್​ ಸಂಕಷ್ಟ; ಹಲವು ಬದಲಾವಣೆ ಮಾಡುವಂತೆ ಅಧಿಕಾರಿಗಳಿಂದ ಸೂಚನೆ
ಶಾರುಖ್ ಖಾನ್
TV9 Web
| Edited By: |

Updated on:Dec 29, 2022 | 6:08 PM

Share

ಶಾರುಖ್​ ಖಾನ್​ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸಿನಿಮಾಗೆ ಒಂದು ವರ್ಗದ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅನೇಕ ಹಿಂದೂಪರ ಸಂಘಟನೆಗಳು ಈ ಚಿತ್ರದ ‘ಬೇಷರಂ ರಂಗ್​..’ ಹಾಡಿಗೆ ಆಕ್ಷೇಪ ಎತ್ತಿವೆ. ಅದರ ಬೆನ್ನಲ್ಲೇ ಸೆನ್ಸಾರ್​ ಪ್ರಮಾಣ ಪತ್ರ ಪಡೆಯುವುದು ಕಷ್ಟವಾಗಿದೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ಸೆನ್ಸಾರ್​ ಮಂಡಳಿ (Censor Board) ಸದಸ್ಯರು ವೀಕ್ಷಿಸಿದ್ದಾರೆ. ವಿವಾದದ ಕೇಂದ್ರ ಬಿಂದು ಆಗಿರುವ ‘ಬೇಷರಂ ರಂಗ್​..’ ಹಾಡಿನ ಜೊತೆಗೆ ಅನೇಕ ದೃಶ್ಯಗಳಲ್ಲಿ ಬದಲಾವಣೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ವರದಿ ಆಗಿದೆ. ಇದರಿಂದ ‘ಪಠಾಣ್​’ (Pathaan Movie) ಚಿತ್ರತಂಡಕ್ಕೆ ತಲೆ ನೋವು ಶುರುವಾಗಿದೆ.

‘ಪಠಾಣ್​’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಕೇಸರಿ ಬಣ್ಣದ ಬಿಕಿನಿ ಧರಿಸಿ ‘ಬೇಷರಂ ರಂಗ್​..’ ಎಂದು ಹಾಡಿದ್ದನ್ನು ಅನೇಕರು ವಿರೋಧಿಸಿದ್ದಾರೆ. ಅಲ್ಲದೇ, ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಸರಿಯಿಲ್ಲ ಎಂದು ಕೂಡ ಕೆಲವರಿಂದ ತಕರಾರು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೆನ್ಸಾರ್​ ಮಂಡಳಿಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲವು ಸೂಚನೆಗಳನ್ನು ಚಿತ್ರತಂಡಕ್ಕೆ ನೀಡಿದ್ದಾರೆ.

ಇದನ್ನೂ ಓದಿ: Boycott Pathaan: ‘ಪಠಾಣ್​’ ಸಿನಿಮಾ ಬಹಿಷ್ಕಾರಕ್ಕೆ ಅಭಿಯಾನ ಶುರು; ಶಾರುಖ್​ ಚಿತ್ರಕ್ಕೆ ಸೋಲಿನ ಭಯ

ಇದನ್ನೂ ಓದಿ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Image
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Image
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಬಹಳ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಹಾಡುಗಳೇ ಸಾಕ್ಷಿ ಒದಗಿಸಿವೆ. ಇದೇ ಕಾರಣದಿಂದ ಸಿನಿಮಾದಲ್ಲಿನ ಬಹುತೇಕ ದೃಶ್ಯಗಳಿಗೆ ಸೆನ್ಸಾರ್​ ಮಂಡಳಿಯಲ್ಲಿ ತಕರಾರು ವ್ಯಕ್ತವಾಗಿರಬಹುದು. ಹಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿಕೊಂಡು, ಪುನಃ ಸೆನ್ಸಾರ್​ಗೆ ಕಳಿಸಲು ಸೂಚಿಸಲಾಗಿದೆ. ಇದು ಶಾರುಖ್​ ಖಾನ್​ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಇದನ್ನೂ ಓದಿ: ‘ಪಠಾಣ್​’ ಚಿತ್ರದ ಎರಡನೇ ಹಾಡಲ್ಲೂ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

‘ಪಠಾಣ್​’ ಸಿನಿಮಾ 2023ರ ಜನವರಿ 25ರಂದು ಬಿಡುಗಡೆ ಆಗಲಿದೆ. ಒಂದು ವೇಳೆ ಸೆನ್ಸಾರ್​ ಪ್ರಮಾಣಪತ್ರ ಸಿಗುವುದು ತಡವಾದರೆ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ ಆಗಲಿದೆ. ಹಾಗೇನಾದರೂ ಆದರೆ ಶಾರುಖ್​ ಖಾನ್​ ಸಿನಿಮಾಗೆ ತೀವ್ರ ಹಿನ್ನಡೆ ಆದಂತೆ ಆಗಲಿದೆ. ಆ ರೀತಿ ಆಗದಿರಲಿ ಎಂದು ಫ್ಯಾನ್ಸ್​ ಪ್ರಾರ್ಥಿಸುತ್ತಿದ್ದಾರೆ.

ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಬಿಗ್​ ಬಜೆಟ್​ನಲ್ಲಿ ಸಿನಿಮಾ ಮೂಡಿಬಂದಿದೆ. ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೊತೆಯಲ್ಲಿ ಜಾನ್​ ಅಬ್ರಾಹಂ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ. ಹಲವು ದೇಶಗಳಲ್ಲಿ ಈ ಸಿನಿಮಾದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಇದು ಶಾರುಖ್​ ಖಾನ್​ ಅವರ ಕಮ್​ಬ್ಯಾಕ್​ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:08 pm, Thu, 29 December 22

Follow Us
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ