Shah Rukh Khan: ಶಾರುಖ್ ಖಾನ್ ಬದುಕಿದ್ದಾಗಲೇ ಅಂತಿಮ ವಿಧಿವಿಧಾನ ಮಾಡಿದ ಅಯೋಧ್ಯೆ ಸ್ವಾಮೀಜಿ
ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಹಾಡಿನ ವಿವಾದದ ಕುರಿತು ಮಾತನಾಡುವಾಗ ಶಾರುಖ್ ಖಾನ್ ವಿರುದ್ಧ ಗುಡುಗಿದ್ದರು. ಈಗ ಅವರು ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿದ್ದಾರೆ. ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ.

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ (Besharam Rang ) ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರಿಂದ ಈ ಹಾಡಿಗೆ ವಿವಾದ ಅಂಟಿಕೊಂಡಿತು. ಸಿನಿಮಾ ಬ್ಯಾನ್ ಮಾಡಬೇಕು ಎಂದು ಅನೇಕರು ಬೊಬ್ಬೆಹೊಡೆದುಕೊಂಡಿದ್ದಾರೆ. ಅಯೋಧ್ಯೆಯ ಪರಮಹಂಸ ಸ್ವಾಮೀಜಿ ಅವರು ಇತ್ತೀಚೆಗೆ ಈ ಹಾಡಿನ ವಿವಾದಕ್ಕೆ ಸಂಬಂಧಿಸಿ ಶಾರುಖ್ ಖಾನ್ ಅವರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ್ದರು. ಈಗ ಶಾರುಖ್ ಬದುಕಿದ್ದಾಗಲೇ ಅವರ ಅಂತಿಮ ವಿಧಿ-ವಿಧಾನಗಳನ್ನು ಭೋಪಾಲ್ನಲ್ಲಿ ಮಾಡಿ ಮುಗಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಹಾಡಿನ ವಿವಾದದ ಕುರಿತು ಮಾತನಾಡುವಾಗ ಶಾರುಖ್ ಖಾನ್ ವಿರುದ್ಧ ಗುಡುಗಿದ್ದರು. ಈಗ ಅವರು ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿದ್ದಾರೆ. ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ. ಹಿಂದೂಗಳ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಮಾಡುವಾಗ ಮಡಿಕೆಯನ್ನು ಒಡೆದು ಹಾಕುತ್ತಾರೆ. ಅದನ್ನೇ ಪರಮಹಂಸ ಆಚಾರ್ಯ ಅವರು ಕೂಡ ಮಾಡಿದ್ದಾರೆ. ಈ ಮೂಲಕ ಶಾರುಖ್ ಅವರ ಅಂತಿಮ ವಿಧಿವಿಧಾನ ಮಾಡಿರುವುದಾಗಿ ಅವರು ಹೇಳಿದ್ದಾರೆ.
Pathan Movie Controversy : Jagadguru Paramhans Acharya Maharaja performs last rites of Shah Rukh Khan.#Pathaan #BesharamRang #ShahRukhKhan? #BoycottPathaan pic.twitter.com/nlV9qrYqU1
— Hate Detector ? (@HateDetectors) December 27, 2022
ಈ ಮೊದಲು ನೀಡಿದ ಹೇಳಿಕೆ ಏನು?
‘ನಮ್ಮ ಸನಾತನ ಧರ್ಮದ ಜನರು ಈ ವಿಚಾರದ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಜಿಹಾದಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ನಾನು ಅವರನ್ನು ಜೀವಂತವಾಗಿ ಸುಡುತ್ತೇನೆ. ಪಠಾಣ್ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆದರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂಕಿ ಇಡುತ್ತೇನೆ’ ಎಂದು ಪರಮಹಂಸ ಆಚಾರ್ಯ ಹೇಳಿದ್ದರು.
ಇದನ್ನೂ ಓದಿ: Pathaan: ಬೇಷರಂ ರಂಗ್ ವಿವಾದದ ಮಧ್ಯೆ ಶಾರುಖ್ ಖಾನ್ ಟ್ವೀಟ್: ಪಠಾಣ್ ಕೂಡ ದೇಶಭಕ್ತಿ ಸಾರುವ ಚಿತ್ರ ಎಂದ ಬಾದ್‌ಷಾ
ಏನಿದು ವಿವಾದ?
ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಸಾಂಗ್ ಬಿಡುಗಡೆ ಆಗಿತ್ತು. ಈ ಸಾಲಿನ ಅರ್ಥ ನಾಚಿಕೆ ಇಲ್ಲದ ಬಣ್ಣ ಎಂದು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಹಾಕಿದ್ದೇ ವಿವಾದ ಏಳಲು ಮುಖ್ಯ ಕಾರಣ ಆಗಿತ್ತು. ಈ ಸಿನಿಮಾನ ಬ್ಯಾನ್ ಮಾಡುವಂತೆ ಅನೇಕರು ಆಗ್ರಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Thu, 29 December 22








