Poonam Pandey Death: ಪೂನಂ ಪಾಂಡೆ ನಿಧನ; ಜೈ ಶ್ರೀರಾಮ್​ ಎಂದು ಭಕ್ತಿ ಮೆರೆದಿದ್ದ ನಟಿ ಈಗ ನೆನಪು ಮಾತ್ರ

|

Updated on: Feb 02, 2024 | 1:09 PM

ಕ್ಯಾನ್ಸರ್​ಗೆ ನಟಿ ಪೂನಂ ಪಾಂಡೆ ಬಲಿ ಆಗಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರು ರಿಯಾಲಿಟಿ ಶೋಗಳ ಮೂಲಕವೂ ಫೇಮಸ್​ ಆಗಿದ್ದರು. ಶ್ರೀರಾಮನ ಬಗ್ಗೆ ಅವರು ಅಪಾರ ಭಕ್ತಿ ಹೊಂದಿದ್ದರು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ದಿನ ಪೂನಂ ಪಾಂಡೆ ಅವರು ಅನೇಕರಿಗೆ ರಾಮನ ಚಿಕ್ಕ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಕ್ಷಣವನ್ನು ಅಭಿಮಾನಿಗಳು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ.

Poonam Pandey Death: ಪೂನಂ ಪಾಂಡೆ ನಿಧನ; ಜೈ ಶ್ರೀರಾಮ್​ ಎಂದು ಭಕ್ತಿ ಮೆರೆದಿದ್ದ ನಟಿ ಈಗ ನೆನಪು ಮಾತ್ರ
ಪೂನಂ ಪಾಂಡೆ
Follow us on

ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದ ಪೂನಂ ಪಾಂಡೆ (Poonam Pandey) ಅವರು ಈಗ ನೆನಪು ಮಾತ್ರ. 32ನೇ ವಯಸ್ಸಿಗೆ ಅವರು ಕ್ಯಾನ್ಸರ್​ನಿಂದ ನಿಧನರಾಗಿದ್ದಾರೆ. ಶುಕ್ರವಾರ (ಫೆಬ್ರವರಿ 2) ಬೆಳಗ್ಗೆಯೇ ಅವರ ಅಭಿಮಾನಿಗಳಿಗೆ ನೋವಿನ ಸುದ್ದಿ ಕೇಳಿಬಂದಿದೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದ ಪೂನಂ ಪಾಂಡೆ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ (Poonam Pandey Death) ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಯಾವಾಗಲೂ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಿದ್ದ ಪೂನಂ ಪಾಂಡೆ ಅವರು ರಾಮನ (Lord Shree Ram) ಭಕ್ತೆ ಕೂಡ ಆಗಿದ್ದರು ಎಂಬುದು ವಿಶೇಷ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದ್ದನ್ನು ಅವರು ಸಂಭ್ರಮಿಸಿದ್ದರು. ಆದರೆ ಈಗ ಅವರು ಇಹಲೋಹ ತ್ಯಜಿಸಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತ್ತು. ಅಂದು ಪೂನಂ ಪಾಂಡೆ ಅವರು ತಮ್ಮ ಮನೆಯಲ್ಲಿ ರಾಮನ ಧ್ವಜ ಹಾರಿಸಿ ಖುಷಿಪಟ್ಟಿದ್ದರು. ‘ಜೈ ಶ್ರೀರಾಮ್​’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದರು. ಮನೆಯಲ್ಲಿ ಪೂಜೆ ಮಾಡಿ, ಆ ಸಂದರ್ಭದ ಫೋಟೋವನ್ನು ಕೂಡ ಅವರು ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: Poonam Pandey: 3 ದಿನದ ಹಿಂದೆ ಆರಾಮಾಗಿದ್ದ ಪೂನಂ ಪಾಂಡೆ ಕ್ಯಾನ್ಸರ್​ನಿಂದ ನಿಧನ ಎಂದರೆ ನಂಬೋದು ಹೇಗೆ?

ರಾಮ ಮಂದಿರದ ಬಗ್ಗೆ ಪೂನಂ ಪಾಂಡೆ ಅವರು ಮಾತನಾಡಿದ್ದರು. ‘ವನವಾಸ ಮುಗಿಸಿದ ಶ್ರೀರಾಮನು ಈಗ ಮನೆಗೆ ವಾಪಸ್​ ಬಂದಂತೆ ಆಗಿದೆ. ಆ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಶ್ರೀರಾಮನಿಗೆ ಸ್ವಾಗತ ಕೋರಲಾಗುತ್ತಿದೆ’ ಎಂದು ಅವರು ಹೇಳಿದ್ದರು. ಅಂದು ಅವರು ಅನೇಕರಿಗೆ ಶ್ರೀರಾಮನ ಚಿಕ್ಕ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ, ಶುಭ ಕೋರಿದ್ದರು.

ರಾಮನ ಕುರಿತು ಪೂನಂ ಪಾಂಡೆ ಮಾತನಾಡಿದ್ದ ವಿಡಿಯೋ:

ಚಿತ್ರೀಕರಣಕ್ಕೆ ತಡವಾಗಿದ್ದರೂ ಕೂಡ ಅವರು ಸಮಯ ಮಾಡಿಕೊಂಡು ಶ್ರೀರಾಮನ ಬಗ್ಗೆ ಮಾತನಾಡಿದ್ದರು. ಅವರ ಭಕ್ತಿಯನ್ನು ಕಂಡು ಅಭಿಮಾನಿಗಳು ಭೇಷ್​ ಎಂದಿದ್ದರು. ಅದಾಗಿ ಕೆಲವೇ ದಿನಗಳು ಕಳೆಯುವುದರೊಳಗೆ ಪೂನಂ ಪಾಂಡೆ ಇನ್ನಿಲ್ಲ ಎಂಬ ಸುದ್ದಿ ಕೇಳಿಬಂದಿರುವುದು ಶಾಕಿಂಗ್​ ಸಂಗತಿ.

ಪೂನಂ ಪಾಂಡೆ ಇನ್​ಸ್ಟಾಗ್ರಾಮ್​ ಪೋಸ್ಟ್​:

ಕ್ಯಾನ್ಸರ್​ಗೆ ಪೂನಂ ಪಾಂಡೆ ಬಲಿ ಆಗಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರು ರಿಯಾಲಿಟಿ ಶೋಗಳ ಮೂಲಕ ಫೇಮಸ್​ ಆಗಿದ್ದರು. ಬೋಲ್ಡ್​ ಅವತಾರದಲ್ಲಿ ಅವರು ಪಡ್ಡೆಗಳ ಕಣ್ಣು ಕುಕ್ಕುತ್ತಿದ್ದರು. ಸದಾ ಕಾಲ ಹಾಟ್​ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 12 ಲಕ್ಷ ಜನರು ಫಾಲೋ ಮಾಡುತ್ತಿದ್ದರು. ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಅಭಿಮಾನಿಗಳಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ