ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಾಯಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜಿನ್ ಗುಡ್ಎನಾಫ್ (Gene Goodenough) ಅವಳಿ- ಜವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಕ್ಕಳಿಗೆ ಜೈ ಜಿಂಟಾ ಗುಡ್ಎನಾಫ್ (Jai Zinta Goodenough) ಹಾಗೂ ಜಿಯಾ ಜಿಂಟಾ ಗುಡ್ಎನಾಫ್ (Gia Zinta Goodenough) ಎಂದು ನಾಮಕರಣ ಮಾಡಲಾಗಿದೆ. ಈ ಕುರಿತಂತೆ ಬರೆದುಕೊಂಡಿರುವ ಪ್ರೀತಿ ಜಿಂಟಾ, ‘‘ಎಲ್ಲರಿಗೂ ನಮಸ್ಕಾರ, ಎಲ್ಲರೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಬಹಳ ಪ್ರೀತಿಯಿಂದ ನಾವು ಜೈ ಜಿಂಟಾ ಗುಡ್ಎನಾಫ್ ಹಾಗೂ ಜಿಯಾ ಜಿಂಟಾ ಗುಡ್ಎನಾಫ್ರನ್ನು ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ’’ ಎಂದು ಬರೆದಿದ್ದಾರೆ.
ಪ್ರೀತಿ ಜಿಂಟಾ ಹಂಚಿಕೊಂಡ ಪೋಸ್ಟ್:
Hi everyone, I wanted to share our amazing news with all of you today. Gene & I are overjoyed & our hearts are filled with so much gratitude & with so much love as we welcome our twins Jai Zinta Goodenough & Gia Zinta Goodenough into our family. pic.twitter.com/wknLAJd1bL
— Preity G Zinta (@realpreityzinta) November 18, 2021
ಜೀವನದ ಹೊಸ ಪಯಣದ ಕುರಿತಂತೆ ಸಂತಸ ಹಂಚಿಕೊಂಡಿರುವ ಪ್ರೀತಿ, ‘‘ಈ ಹೊಸ ಪಯಣಕ್ಕೆ ಬಹಳ ಕಾತರದಿಂದ ಕಾಯುತ್ತಿದ್ದೇವೆ. ಮಕ್ಕಳನ್ನು ಪಡೆಯಲು ನೆರವಾದ ವೈದ್ಯರು, ನರ್ಸ್ ಮತ್ತು ಬಾಡಿಗೆ ತಾಯಿಗೆ (Surrogate) ತುಂಬು ಹೃದಯದ ಕೃತಜ್ಞತೆಗಳು’’ ಎಂದು ತಿಳಿಸಿದ್ದಾರೆ.
ಪೋಷಕರಾಗಲು ನೆರವಾದವರಿಗೆ ಧನ್ಯವಾದ ಸಲ್ಲಿಸಿದ ಪ್ರೀತಿ ಜಿಂಟಾ ದಂಪತಿ:
We are very excited about this new phase in our lives. A heartfelt thank you to the doctors, nurses and to our surrogate for being part of this incredible journey. Loads of love and light – Gene, Preity, Jai & Gia ??? #gratitude #family #twins #ting
— Preity G Zinta (@realpreityzinta) November 18, 2021
ಪ್ರೀತಿ ಜಿಂಟಾ ಬಾಲಿವುಡ್ಗೆ ಕಾಲಿಟ್ಟು ಈ ವರ್ಷದ ಆಗಸ್ಟ್ಗೆ 23 ವರ್ಷಗಳು ಸಂದಿವೆ. ಜಿನ್ ಗುಡ್ಎನಾಫ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ನಂತರ ಪ್ರೀತಿ ಬೆಳ್ಳಿತೆರೆಯಿಂದ ದೂರ ಉಳಿದಿದ್ಧಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುವ ಅವರು, ತಮ್ಮ ಕುಟುಂಬದ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳೊಂದಿಗೆ ಸತತ ಸಂಪರ್ಕದಲ್ಲಿರುತ್ತಾರೆ.
ಇದನ್ನೂ ಓದಿ:
Shyam Singha Roy Teaser: ಶ್ಯಾಮ್ ಸಿಂಗಾ ರಾಯ್ ಟೀಸರ್ ರಿಲೀಸ್; ನಾನಿ, ಸಾಯಿ ಪಲ್ಲವಿ ನಟನೆಗೆ ಫ್ಯಾನ್ಸ್ ಫಿದಾ
Published On - 1:40 pm, Thu, 18 November 21