‘ಭಗತ್​ ಸಿಂಗ್​ಗೆ ಗಲ್ಲು ಶಿಕ್ಷೆ ಆಗ್ಬೇಕು ಅಂತ ಗಾಂಧಿ ಬಯಸಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ’: ಕಂಗನಾ

Kangana Ranaut: ‘ಗಾಂಧಿ ಎಂದಿಗೂ ಭಗತ್​ ಸಿಂಗ್​ ಮತ್ತು ನೇತಾಜಿಗೆ ಬೆಂಬಲ ನೀಡಲಿಲ್ಲ. ಭಗತ್​ ಸಿಂಗ್​ ಅವರನ್ನು ನೇಣಿಗೆ ಹಾಕಬೇಕು ಅಂತ ಗಾಂಧಿ ಬಯಸಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ’ ಎಂದು ಕಂಗನಾ ರಣಾವತ್​ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಭಗತ್​ ಸಿಂಗ್​ಗೆ ಗಲ್ಲು ಶಿಕ್ಷೆ ಆಗ್ಬೇಕು ಅಂತ ಗಾಂಧಿ ಬಯಸಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ’: ಕಂಗನಾ
ಕಂಗನಾ ರಣಾವತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 24, 2021 | 5:37 PM

ನಟಿ ಕಂಗನಾ ರಣಾವತ್​ (Kangana Ranaut) ಅವರು ಭಾರಿ ವಿವಾದಕ್ಕೆ ಕಾರಣ ಆಗುವಂತಹ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ‘1948ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಮೋದಿ ಗೆದ್ದ ಬಳಿಕ’ ಎಂದಿದ್ದ ಕಂಗನಾ ಮಾತಿಗೆ (Kangana Ranaut Statement) ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಆ ಮಾತನ್ನು ಕಂಗನಾ ಈಗ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ (Mahatma Gandhi) ಬಗ್ಗೆ ಕಟು ಟೀಕೆಯನ್ನು ಮುಂದುವರಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಲವು ಪೋಸ್ಟ್​ಗಳನ್ನು ಅವರು ಮಾಡಿಕೊಂಡಿದ್ದಾರೆ. ಅವು ಕೂಡ ಮತ್ತೆ ವಿವಾದದ ಬೆಂಕಿ ಹೊತ್ತಿಸುವ ಮುನ್ಸೂಚನೆ ನೀಡಿವೆ. 1940ರ ಸಮಯದ ಒಂದು ನ್ಯೂಸ್​ ಪೇಪರ್​ ತುಣುಕನ್ನು ಕಂಗನಾ ಶೇರ್​ ಮಾಡಿಕೊಂಡಿದ್ದಾರೆ. ‘ನೇತಾಜಿಯನ್ನು ಹಿಡಿದುಕೊಡಲು ಒಪ್ಪಿದ ಗಾಂಧಿ ಮತ್ತು ಇತರರು’ ಎಂಬ ಸುದ್ದಿ ಅದರಲ್ಲಿದೆ. ‘ನೀವು ಗಾಂಧಿ ಅಭಿಮಾನಿ ಆಗಬೇಕು ಅಥವಾ ನೇತಾಜಿ ಬೆಂಬಲಿಗರಾಗಬೇಕು. ಎರಡೂ ಆಗಲು ಸಾಧ್ಯವಿಲ್ಲ. ಆಯ್ಕೆ ಮಾಡಿ ಮತ್ತು ನಿರ್ಧರಿಸಿ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

‘ದೇಶಕ್ಕಾಗಿ ಹೋರಾಡಿದವರನ್ನು ಹಿಡಿದುಕೊಡಲಾಯ್ತು. ಹೋರಾಡುವ ಬಿಸಿ ರಕ್ತ ಇಲ್ಲದವರು ಅಂಥ ಕೆಲಸ ಮಾಡಿದರು. ಅವರು ಅಧಿಕಾರದ ದಾಹ ಇಟ್ಟುಕೊಂಡ ಕುತಂತ್ರಿಗಳಾಗಿದ್ದರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡಿ, ಅದರಿಂದ ಸ್ವಾತಂತ್ರ್ಯ ಸಿಗತ್ತೆ ಎಂದು ಅವರೇ ನಮಗೆ ಹೇಳಿಕೊಟ್ಟಿದ್ದು. ಆ ರೀತಿ ಪಡೆಯುವುದು ಭಿಕ್ಷೆಯೇ ಹೊರತು, ಸ್ವಾತಂತ್ರ್ಯವಲ್ಲ. ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಿ’ ಎಂದು ಕಂಗನಾ ಸ್ಟೋರಿ ಪೋಸ್ಟ್​ ಮಾಡಿದ್ದಾರೆ.

‘ಗಾಂಧಿ ಎಂದಿಗೂ ಭಗತ್​ ಸಿಂಗ್​ ಮತ್ತು ನೇತಾಜಿಗೆ ಬೆಂಬಲ ನೀಡಲಿಲ್ಲ. ಭಗತ್​ ಸಿಂಗ್​ ಅವರನ್ನು ನೇಣಿಗೆ ಹಾಕಬೇಕು ಅಂತ ಗಾಂಧಿ ಬಯಸಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ. ಹಾಗಾಗಿ ನೀವು ಯಾರಿಗೆ ಬೆಂಬಲ ನೀಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಕಂಗನಾ ಅವರು ಗಾಂಧಿ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಸದ್ಯ ಅವರ ಹೇಳಿಕೆಗಳಿಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ. ದೇಶಾದ್ಯಂತ ಅನೇಕರು ಕಂಗನಾ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ‘1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಮೋದಿ ಗೆದ್ದ ಬಳಿಕ’ ಎಂದು ತಾವು ಹೇಳಿದ ಮಾತು ತಪ್ಪಾದರೆ ಪದ್ಮಶ್ರೀ ಪ್ರಶಸ್ತಿ ವಾಪಸ್​ ಕೊಡುವುದಾಗಿ ಕಂಗನಾ ಹೇಳಿದ್ದರು.

ಇದನ್ನೂ ಓದಿ:

1947ರ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆಯಂತೆ: ನಟಿ ಕಂಗನಾ ರನೌತ್ ಹೇಳಿಕೆಗೆ ಹಿರಿಯ ನಟ ವಿಕ್ರಮ್ ಗೋಖಲೆ ಬೆಂಬಲ

ಸ್ವಾತಂತ್ರ್ಯ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಂಗನಾ; ಈ ವಿಷಯ ಜ್ಞಾನೋದಯ ಮಾಡಿಸಿದರೆ ಪದ್ಮಶ್ರೀ ಮರಳಿಸುತ್ತಾರಂತೆ!

Published On - 3:46 pm, Wed, 17 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ