AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ತಂಗಿ ಎಂಗೇಜ್​ಮೆಂಟ್​ಗೆ ಬಂದ ಪ್ರಿಯಾಂಕಾ ಚೋಪ್ರಾ; ವಿಮಾನ ನಿಲ್ದಾಣದಲ್ಲಿ ಆಗಿದ್ದೇ ಬೇರೆ

ಯಾವುದೇ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಫ್ಯಾನ್ಸ್ ಮುಗಿಬೀಳುತ್ತಾರೆ. ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಹೀಗೆ ಇರುವುದಿಲ್ಲ.

Priyanka Chopra: ತಂಗಿ ಎಂಗೇಜ್​ಮೆಂಟ್​ಗೆ ಬಂದ ಪ್ರಿಯಾಂಕಾ ಚೋಪ್ರಾ; ವಿಮಾನ ನಿಲ್ದಾಣದಲ್ಲಿ ಆಗಿದ್ದೇ ಬೇರೆ
ಪ್ರಿಯಾಂಕಾ
Follow us
ರಾಜೇಶ್ ದುಗ್ಗುಮನೆ
|

Updated on: May 13, 2023 | 12:31 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸಹೋದರಿ ಪರಿಣೀತಿ ಚೋಪ್ರಾ ಅವರ ನಿಶ್ಚಿತಾರ್ಥ ಇಂದು (ಏಪ್ರಿಲ್ 13) ನಡೆಯುತ್ತಿದೆ. ದೆಹಲಿಯಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಸಹೋದರಿಯ ಎಂಗೇಜ್​ಮೆಂಟ್​ಗೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ನ್ಯೂಯಾರ್ಕ್​ನಿಂದ ಆಗಮಿಸಿದ್ದಾರೆ. ಅವರಿಗೆ ವಿಮಾನ ನಿಲ್ದಾಣದಲ್ಲಿ ಸಿಟ್ಟು ಬರುವಂತಹ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಯಾವುದೇ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಫ್ಯಾನ್ಸ್ ಮುಗಿಬೀಳುತ್ತಾರೆ. ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಹೀಗೆ ಇರುವುದಿಲ್ಲ. ಕೆಲವೊಮ್ಮೆ ಸೆಲೆಬ್ರಿಟಿಗಳು ತಮ್ಮದೇ ಚಿಂತೆಯಲ್ಲಿ ಇರುತ್ತಾರೆ. ಈ ಸಂದರ್ಭದಲ್ಲೂ ಅಭಿಮಾನಿಗಳು ಬಂದು ಸೆಲೆಬ್ರಿಟಿಗಳ ಬಳಿ ಸೆಲ್ಫಿ ಕೇಳಿದರೆ ಅವರು ಸಿಟ್ಟಾಗುತ್ತಾರೆ. ಈಗ ಪ್ರಿಯಾಂಕಾ ಚೋಪ್ರಾ ಅವರಿಗೂ ಹಾಗೆಯೇ ಆಗಿದೆ.

ಇಂದು (ಮೇ 13) ಪರಿಣೀತಿ ಚೋಪ್ರಾ ಹಾಗೂ ಆಪ್ ನಾಯಕ ರಾಘವ್ ಚಡ್ಡಾ ಎಂಗೇಜ್​ಮೆಂಟ್ ನಡೆಯಲಿದೆ. ದೆಹಲಿಯಲ್ಲಿರುವ ಪರಿಣೀತಿ ಚೋಪ್ರಾ ಮನೆಯಲ್ಲೇ ಈ ಕಾರ್ಯಕ್ರಮ ನೆರವೇರುತ್ತಿದೆ. ಇದಕ್ಕಾಗಿ ಪ್ರಿಯಾಂಕಾ ದೆಹಲಿಗೆ ಬಂದಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಇಳಿದು ಬರುವಾಗ ಕೆಲವರು ಪ್ರಿಯಾಂಕಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದಾರೆ. ಇದು ಪ್ರಿಯಾಂಕಾಗೆ ಸಿಟ್ಟು ತರಿಸಿದೆ.

ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ‘ನಟಿಗೆ ಸ್ವಾತಂತ್ರ್ಯ ನೀಡಿ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಈ ರೀತಿ ಮಾಡೋದು ಸರಿ ಅಲ್ಲ’ ಎಂದು ಅನೇಕರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Priyanka Chopra: ‘ಮಗಳಿಗಾಗಿ ಕೆಲಸ ತೊರೆದು, ದೇಶ ಬಿಟ್ಟುಹೋಗಲು ಸಿದ್ಧ’: ಪ್ರಿಯಾಂಕಾ ಚೋಪ್ರಾ ಜೋನಸ್​

ರಾಜಕೀಯಕ್ಕೂ ಬಣ್ಣದ ಲೋಕಕ್ಕೂ ಉತ್ತಮ ನಂಟಿದೆ. ಅನೇಕರು ಸಿನಿಮಾದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಈಗ ಪರಿಣೀತಿ ಅವರು ರಾಜಕಾರಣಿಯನ್ನೇ ಮದುವೆ ಆಗುತ್ತಿದ್ದಾರೆ. ಆಪ್​ ನಾಯಕ ರಾಘವ್ ಜೊತೆ ಅವರು ಅಕ್ಟೋಬರ್​ನಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಅದಕ್ಕೂ ಮೊದಲು ಇವರು ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. 150ಕ್ಕೂ ಅಧಿಕ ಮಂದಿ ನಿಶ್ಚಿತಾರ್ಥದಲ್ಲಿ ಭಾಗಿ ಆಗುತ್ತಿದ್ದಾರೆ. ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ