ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ್ದರು. ಸದ್ಯ, ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಈ ಪ್ರಕರಣ ಶಿಲ್ಪಾ ಕುಟುಂಬಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಆರಂಭದಲ್ಲಿ ಶಿಲ್ಪಾ ಸೋಶಿಯಲ್ ಮೀಡಿಯಾದಿಂದ ಕೆಲ ದಿನ ದೂರ ಉಳಿದಿದ್ದರು. ನಂತರ ಅವರು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಪತಿ ಜತೆ ಅವರು ಎಂದಿಗೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ವಿಚ್ಛೇದನ (Divorce) ಪಡೆಯುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಶಿಲ್ಪಾ ಸುಳ್ಳು ಮಾಡಿದ್ದಾರೆ. ಪತಿ ರಾಜ್ ಕುಂದ್ರಾ ಜತೆಗೆ ಅವರು ಇದೇ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಬ್ರೇಕ್ ಹಾಕಿದ್ದಾರೆ. ರಾಜ್ ಕುಂದ್ರಾ ಅವರನ್ನು ಶಿಲ್ಪಾ ಕ್ಷಮಿಸಿದರಾ ಎನ್ನುವ ಪ್ರಶ್ನೆ ಮೂಡಿದೆ.
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಇತ್ತೀಚೆಗೆ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಶಿಲ್ಪಾ-ರಾಜ್ ಮಕ್ಕಳು ಈಗಿನ್ನೂ ಸಣ್ಣವರು. ಮುಂದೆ ಅವರ ಭವಿಷ್ಯ ಉತ್ತಮವಾಗಿರಬೇಕು ಎಂದಾದರೆ, ಪತಿಯಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆ ಶಿಲ್ಪಾಗೆ ಎದುರಾಗಿದೆ ಎಂದು ವರದಿ ಆಗಿತ್ತು. ಆದರೆ, ಈಗ ಅದು ಸುಳ್ಳಾಗಿದೆ. ಶಿಲ್ಪಾ ಅವರು ಪತಿ ರಾಜ್ ಕುಂದ್ರಾ ಜತೆ ಹಿಮಾಚಲ ಪ್ರದೇಶದ ಧರ್ಮಶಾಲಾದ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ಫೋಟೋ, ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜ್ ಕುಂದ್ರಾ ಅವರನ್ನು ಜುಲೈ 19ರಂದು ಬಂಧಿಸಲಾಗಿತ್ತು. ರಾಜ್ ಕುಂದ್ರಾ ವಿರುದ್ಧ ಮಾಡೆಲ್, ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪ ಮಾಡಿದ್ದರು. ಸಿನಿಮಾ ಆಫರ್ ಕೊಡುವುದಾಗಿ ನಂಬಿಸಿ ರಾಜ್ ಕುಂದ್ರಾ ಮೋಸ ಮಾಡಿದ್ದರು. ತಮ್ಮನ್ನು ಬೆತ್ತಲೆಯಾಗಿ ಚಿತ್ರೀಕರಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು. ಈ ಆರೋಪದಿಂದ ರಾಜ್ಗೆ ಮತ್ತಷ್ಟು ತೊಂದರೆ ಎದುರಾಗಿತ್ತು. ಸೆಪ್ಟೆಂಬರ್ನಲ್ಲಿ ಅವರಿಗೆ ಜಾಮೀನು ಸಿಕ್ಕಿತ್ತು. ಇದಾದ ನಂತರ ಅವರು ಮನೆಯಿಂದ ಹೊರಗೆ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ: ‘ನನಗೆ 75 ಕೋಟಿ ರೂಪಾಯಿ ನೀಡಿ’; ಶಿಲ್ಪಾ ಶೆಟ್ಟಿಗೆ ಶೆರ್ಲಿನ್ ಕಡೆಯಿಂದ ಬಂತು ಹೊಸ ಆಗ್ರಹ
Shilpa Shetty: ಸಾಮಾಜಿಕ ಜಾಲತಾಣಗಳಿಂದ ರಾಜ್ ಕುಂದ್ರಾ ಹೊರ ನಡೆದ ಬೆನ್ನಲ್ಲೇ ಕುತೂಹಲ ಹುಟ್ಟಿಸಿದ ಶಿಲ್ಪಾ ಪೋಸ್ಟ್
Published On - 7:43 pm, Tue, 9 November 21