‘ನನಗೆ 75 ಕೋಟಿ ರೂಪಾಯಿ ನೀಡಿ’; ಶಿಲ್ಪಾ ಶೆಟ್ಟಿಗೆ ಶೆರ್ಲಿನ್ ಕಡೆಯಿಂದ ಬಂತು ಹೊಸ ಆಗ್ರಹ

ಶಿಲ್ಪಾ ಹಾಗೂ ರಾಜ್​ ಕುಂದ್ರಾ ಅವರಿಂದ ನನಗೆ ಮಾನಸಿಕವಾಗಿ ಹಿಂಸೆ ಆಗಿದೆ. ಇದಕ್ಕೆ ಪರಿಹಾರವಾಗಿ ಅವರು 75 ಕೋಟಿ ರೂಪಾಯಿ ನೀಡಬೇಕು ಎಂದು ಶೆರ್ಲಿನ್​ ಆಗ್ರಹಿಸಿದ್ದಾರೆ.

‘ನನಗೆ 75 ಕೋಟಿ ರೂಪಾಯಿ ನೀಡಿ’; ಶಿಲ್ಪಾ ಶೆಟ್ಟಿಗೆ ಶೆರ್ಲಿನ್ ಕಡೆಯಿಂದ ಬಂತು ಹೊಸ ಆಗ್ರಹ
ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 28, 2021 | 7:38 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಹಲವು ದಿನಗಳ ಕಾಲ ಜೈಲಿನಲ್ಲಿ ಕಳೆದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಈ ಮಧ್ಯೆ ನಟಿ ಶೆರ್ಲಿನ್​ ಚೋಪ್ರಾ ನಾನಾ ರೀತಿಯ ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ತಮ್ಮನ್ನು ರಾಜ್​ ಕುಂದ್ರಾ ಅವರು ಮೋಸದಿಂದ ಅಶ್ಲೀಲ ಸಿನಿಮಾ ದಂಧೆಗೆ ಎಳೆದುತಂದರು ಎಂದು ಶೆರ್ಲಿನ್​ ಚೋಪ್ರಾ ಹೇಳಿಕೊಂಡಿದ್ದಿದೆ. ಈಗ ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ ಅವರು 75 ಕೋಟಿ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ರಾಜ್​ ಕುಂದ್ರಾ ತಮಗೆ ಮೋಸ ಮಾಡಿದ್ದಾರೆ ಎಂದು ಶೆರ್ಲಿನ್​ ಹೇಳಿಕೊಂಡಿದ್ದರು. ‘ಮೊದಲಿಗೆ ನಾನು ಅವರ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನಟಿಸಲು ಶುರುಮಾಡಿದೆ. ಆರಂಭದಲ್ಲಿ ಗ್ಲಾಮರಸ್​ ವಿಡಿಯೋ, ನಂತರ ಬೋಲ್ಡ್​ ವಿಡಿಯೋ, ಬಳಿಕ ಅರೆ ನಗ್ನ ವಿಡಿಯೋ ಮಾಡಿದೆ. ಕೊನೆಗೆ ಸಂಪೂರ್ಣ ನಗ್ನವಾಗಿ ನಟಿಸಬೇಕಾಯಿತು. ಇದನ್ನು ಎಲ್ಲರೂ ಮಾಡುತ್ತಾರೆ. ಹಾಗಾಗಿ ಇದರಲ್ಲಿ ತಪ್ಪೇನೂ ಇಲ್ಲ ಅಂತ ನನ್ನನ್ನು ನಂಬಿಸಲಾಗಿತ್ತು’ ಎಂದು ಶೆರ್ಲಿನ್​ ಚೋಪ್ರಾ ಆರೋಪಿಸಿದ್ದರು. ಇದರಿಂದ ಮಾನ ಹಾನಿ ಆಗಿದೆ ಎಂದು ಶಿಲ್ಪಾ ಶೆಟ್ಟಿ ಕೋರ್ಟ್​ ಮೆಟ್ಟಿಲೆರಿದ್ದರು. ಅಲ್ಲದೆ, 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಗ ಶೆರ್ಲಿನ್​ ಸರದಿ.

ಶಿಲ್ಪಾ ಹಾಗೂ ರಾಜ್​ ಕುಂದ್ರಾ ಅವರಿಂದ ನನಗೆ ಮಾನಸಿಕವಾಗಿ ಹಿಂಸೆ ಆಗಿದೆ. ಇದಕ್ಕೆ ಪರಿಹಾರವಾಗಿ ಅವರು 75 ಕೋಟಿ ರೂಪಾಯಿ ನೀಡಬೇಕು ಎಂದು ಶೆರ್ಲಿನ್​ ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಅವರು ದಂಪತಿಗೆ ನೋಟಿಸ್ ಕೂಡ ನೀಡಿದ್ದಾರೆ.

ಸ್ಟಾರ್​ ನಟರ ಪತ್ನಿಯರು ಕೂಡ ಡ್ರಗ್ಸ್​ ಸೇವಿಸುತ್ತಾರೆ ಎಂದು ನಟಿ ಶೆರ್ಲಿನ್​ ಚೋಪ್ರಾ ಬಹಳ ಹಿಂದೆಯೇ ಹೇಳಿದ್ದರು. ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದ ಬಳಿಕ ಬಾಲಿವುಡ್​ನಲ್ಲಿರುವ ಡ್ರಗ್ಸ್​ ಜಾಲದ ಬಗ್ಗೆ ತನಿಖೆ ಆರಂಭ ಆಯಿತು. ಆಗ ನೀಡಿದ ಸಂದರ್ಶನದಲ್ಲಿ ಶೆರ್ಲಿನ್​ ಚೋಪ್ರಾ ಅವರು ಕೆಲವು ಶಾಕಿಂಗ್​ ಮಾಹಿತಿ ಹಂಚಿಕೊಂಡಿದ್ದರು. ಶಾರುಖ್​ ಖಾನ್​ ನೀಡಿದ್ದ ಪಾರ್ಟಿಯಲ್ಲಿ ನಶೆ ತುಂಬಿ ತುಳುಕುತ್ತಿತ್ತು ಎಂಬ ವಿಚಾರವನ್ನು ಅವರು ಬಾಯಿ ಬಿಟ್ಟಿದ್ದರು.

ಇದನ್ನೂ ಓದಿ: ‘ಅಶ್ಲೀಲ ಸಿನಿಮಾ ಜಗತ್ತಿನಿಂದ ಹೊರಬನ್ನಿ, ನಿಮಗೆ ಜನ ನಮಸ್ಕಾರ ಮಾಡ್ತಾರೆ’; ಶಿಲ್ಪಾ ಶೆಟ್ಟಿಗೆ ಕುಟುಕಿದ ಶೆರ್ಲಿನ್​ ಚೋಪ್ರಾ

‘ಶಾರುಖ್​ ನೀಡ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ ನಟರ ಪತ್ನಿಯರು ಶೌಚಾಲಯಕ್ಕೆ ತೆರಳಿ ಡ್ರಗ್ಸ್​ ಸೇವಿಸಿದ್ರು’; ಶೆರ್ಲಿನ್​ ಚೋಪ್ರಾ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ