‘ಲಂಚವನ್ನು ನಾನು ಸ್ವೀಕರಿಸುವುದೂ ಇಲ್ಲ, ಕೊಡುವುದೂ ಇಲ್ಲ’; ವೈರಲ್​ ಆಯ್ತು ರಾಜ್​ ಕುಂದ್ರಾ ಹಳೆಯ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Jul 23, 2021 | 8:32 PM

ಬಂಧನಕ್ಕೂ ಮೊದಲು ರಾಜ್​ ಕುಂದ್ರಾ ಮುಂಬೈ ಪೊಲೀಸ್​ ಅಪರಾಧ ಇಲಾಖೆ ಜತೆ ಸಂಭಾಷಣೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಅವರು ತಮ್ಮನ್ನು ಬಂಧಿಸದಿದ್ದರೆ 25 ಲಕ್ಷ ರೂಪಾಯಿ ಲಂಚ ಕೊಡುವುದಾಗಿ ಹೇಳಿಕೊಂಡಿದ್ದರು.

‘ಲಂಚವನ್ನು ನಾನು ಸ್ವೀಕರಿಸುವುದೂ ಇಲ್ಲ, ಕೊಡುವುದೂ ಇಲ್ಲ’; ವೈರಲ್​ ಆಯ್ತು ರಾಜ್​ ಕುಂದ್ರಾ ಹಳೆಯ ವಿಡಿಯೋ
ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಂಪತಿಗೆ ಶಾಕ್​; ದೊಡ್ಡ ಮೊತ್ತದ ದಂಡ ವಿಧಿಸಿದ ಸೆಬಿ
Follow us on

ಅಶ್ಲೀಲ ವಿಡಿಯೋ ನಿರ್ಮಾಣದ​ ಆರೋಪದ ಮೇಲೆ ಉದ್ಯಮಿ ರಾಜ್​ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್​ ಆದೇಶದಂತೆ ಜುಲೈ 27ರವರೆಗೆ ಅವರು ಪೊಲೀಸ್​ ಕಸ್ಟಡಿಯಲ್ಲಿರೋದು ಅನಿವಾರ್ಯವಾಗಿದೆ. ಈ ಮಧ್ಯೆ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಬಂಧನಕ್ಕೂ ಮೊದಲು ರಾಜ್​ ಕುಂದ್ರಾ ಮುಂಬೈ ಪೊಲೀಸ್​ ಅಪರಾಧ ಇಲಾಖೆ ಜತೆ ಸಂಭಾಷಣೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಅವರು ತಮ್ಮನ್ನು ಬಂಧಿಸದಿದ್ದರೆ 25 ಲಕ್ಷ ರೂಪಾಯಿ ಲಂಚ ಕೊಡುವುದಾಗಿ ಹೇಳಿಕೊಂಡಿದ್ದರು. ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ಬಂದಿದೆ. ಈ ಮೂಲಕ ರಾಜ್​ ಕುಂದ್ರಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ವಿಚಿತ್ರ ಎಂದರೆ ರಾಜ್​ ಕುಂದ್ರಾ ಲಂಚ ನೀಡುವುದು ಹಾಗೂ ತೆಗೆದುಕೊಳ್ಳುವುದನ್ನು ವಿರೋಧಿಸಿದ್ದರು! ಈ ವಿಡಿಯೋ ಈಗ ವೈರಲ್​ ಆಗಿದೆ.

‘ನಾನು ಹುಟ್ಟಿ ಬೆಳೆದಿದ್ದು ಇಂಗ್ಲೆಡ್​ನಲ್ಲಿ. ನನ್ನ ಮಟ್ಟಿಗೆ, ಇಂಗ್ಲೆಂಡ್‌ನಲ್ಲಿನ ಉದ್ಯಮಗಳು ಹೆಚ್ಚು ಸುಲಭ. ಉದ್ಯಮದಿಂದ ನಾನು ಸಾಕಷ್ಟು ಹಣ ಸಂಪಾದಿಸಿದೆ. ಆದರೆ, ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿತು. ನಾನು ಇಂದು ನನ್ನ ವ್ಯವಹಾರವನ್ನು ಮೊಬೈಲ್ ಫೋನ್‌ನಿಂದ ನಡೆಸಬಲ್ಲೆ. ಮೊಬೈಲ್​ ಅತ್ಯುತ್ತಮ ಸಾಧನ ಮತ್ತು ಅದನ್ನು ಸರಿಯಾಗಿ ಬಳಸಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ನಾನು ಭಾರತದಲ್ಲಿದ್ದೇನೆ. ನನ್ನ ದೊಡ್ಡ ವೈಫಲ್ಯಗಳನ್ನು ನಾನು ನೋಡಿದ್ದೇನೆ. ಇದು ಆಗೋಕೆ ಕಾರಣ ತಿಳುವಳಿಕೆಯ ಕೊರತೆ. ಕೆಲಸ ಆಗಬೆಕು ಎಂದರೆ ಮೊದಲು ನೀವು ಜನರನ್ನು ತಿಳಿದುಕೊಳ್ಳಬೇಕು. ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳೋದು ನನಗೆ ಇಷ್ಟವಿಲ್ಲ. ನಾನು ಈ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು ಕಾಯ್ದುಕೊಂಡಿದ್ದೇನೆ. ಯಾರಾದರೂ ನನ್ನ ಬಳಿಯಲ್ಲಿ ಅಂಥ ಪ್ರಯತ್ನ ಮಾಡಿದರೆ ನಾನು ಖಡಾಖಂಡಿತವಾಗಿ ಆಗುವುದಿಲ್ಲ ಎನ್ನುತ್ತೇನೆ’ ಎಂದಿದ್ದರು ರಾಜ್​ ಕುಂದ್ರಾ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಮೇಲೆ ಕಣ್ಣಿಟ್ಟಿದ್ದ ನೀಲಿ ಚಿತ್ರಗಳ ಆರೋಪಿ ರಾಜ್​ ಕುಂದ್ರಾ

ರಾಜ್​ ಕುಂದ್ರಾ ನಡೆಸುತ್ತಿದ್ದ ದಂಧೆ ಬಗ್ಗೆ ಶಿಲ್ಪಾ ಶೆಟ್ಟಿಗೆ ಇತ್ತು ಮಾಹಿತಿ? ಪೊಲೀಸರಿಂದ ವಿಚಾರಣೆ