ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕನ್ನಡ ಸಿನಿಮಾ ನಟಿ ಹೆಸರು ಪ್ರಸ್ತಾಪ; ಅಸಲಿಯತ್ತು ಏನು?

Raj Kundra Case: ಸುದೀಪ್​ ನಾಯಕತ್ವದ ‘ನಮ್ಮಣ್ಣ’, ರವಿಚಂದ್ರನ್​ ಹಾಗೂ ಶಿವರಾಜ್​ಕುಮಾರ್​ ನಟನೆಯ ‘ಕೋದಂಡರಾಮ’ ಮುಂತಾದ ಸಿನಿಮಾಗಳಲ್ಲಿ ಫ್ಲೋರಾ ಸೈನಿ ಅಭಿನಯಿಸಿದ್ದಾರೆ. ಅವರ ಹೆಸರು ನೀಲಿ ಚಿತ್ರಗಳ ದಂಧೆಯ ವಿಷಯದಲ್ಲಿ ಪ್ರಸ್ತಾಪ ಆಗಲು ಕಾರಣ ಕೂಡ ಇದೆ.

ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕನ್ನಡ ಸಿನಿಮಾ ನಟಿ ಹೆಸರು ಪ್ರಸ್ತಾಪ; ಅಸಲಿಯತ್ತು ಏನು?
ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕನ್ನಡ ಸಿನಿಮಾ ನಟಿ ಹೆಸರು ಪ್ರಸ್ತಾಪ; ಅಸಲಿಯತ್ತು ಏನು?
Edited By:

Updated on: Jul 27, 2021 | 10:42 AM

ಉದ್ಯಮಿ ರಾಜ್​ ಕುಂದ್ರಾ ಅವರು ತೊಡಗಿಕೊಂಡಿದ್ದಾರೆ ಎನ್ನಲಾದ ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಅನೇಕರ ಹೆಸರು ಕೇಳಿಬರುತ್ತಿದೆ. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರು ಎಂಬ ಆರೋಪ ಇದೆ. ಹಾಗಾಗಿ ಅವರನ್ನು ಮುಂಬೈ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಈ ನಡುವೆ ಹಲವು ನಟಿಯರ ಮೇಲೆ ಅನುಮಾನ ಮೂಡಿವಂತಾಗಿದೆ. ಅಚ್ಚರಿ ಎಂದರೆ, ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿರುವ ಫ್ಲೋರಾ ಸೈನಿ ಹೆಸರನ್ನು ಕೂಡ ಈಗ ಎಳೆದು ತರಲಾಗಿದೆ.

ಸುದೀಪ್​ ನಾಯಕತ್ವದ ‘ನಮ್ಮಣ್ಣ’, ರವಿಚಂದ್ರನ್​ ಹಾಗೂ ಶಿವರಾಜ್​ಕುಮಾರ್​ ನಟನೆಯ ‘ಕೋದಂಡರಾಮ’ ಮುಂತಾದ ಸಿನಿಮಾಗಳಲ್ಲಿ ಫ್ಲೋರಾ ಸೈನಿ (ಆಶಾ ಸೈನಿ) ಅಭಿನಯಿಸಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಪಂಜಾಬಿ ಸಿನಿಮಾ ಪ್ರೇಕ್ಷಕರಿಗೂ ಅವರು ಪರಿಚಿತ. ಅವರ ಹೆಸರು ನೀಲಿ ಚಿತ್ರಗಳ ದಂಧೆಯ ವಿಷಯದಲ್ಲಿ ಪ್ರಸ್ತಾಪ ಆಗಲು ಕಾರಣವಾಗಿರುವುದು ರಾಜ್​ ಕುಂದ್ರಾ ಮತ್ತು ಉಮೇಶ್​ ಕಾಮತ್​ ಎಂಬುವವರ ನಡುವೆ ನಡೆದ ವಾಟ್ಸ್​ಆ್ಯಪ್​ ಚಾಟ್​!

ರಾಜ್​ ಕುಂದ್ರಾ ಮತ್ತು ಉಮೇಶ್​ ಕಾಮತ್ ವಿನಿಮಯ ಮಾಡಿಕೊಂಡಿರುವ ಮೆಸೇಜ್​ಗಳಲ್ಲಿ ಫ್ಲೋರಾ ಸೈನಿ ಬಗ್ಗೆ ಚರ್ಚೆ ಮಾಡಲಾಗಿತ್ತು. ಹಾಗಾಗಿ ಫ್ಲೋರಾ ಕೂಡ ಇವರ ಗ್ಯಾಂಗ್​ನಲ್ಲಿ ಇರಬಹುದು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಅದಕ್ಕೆ ಫ್ಲೋರಾ ಸ್ಪಷ್ಟನೆ ನೀಡಿದ್ದಾರೆ. ‘ನಾನು ಸುಮ್ಮನೆ ಮೌನವಾಗಿದ್ದರೆ, ನಾನು ಏನೋ ಮುಚ್ಚಿಡುತ್ತಿದ್ದೇನೆ ಎಂದು ಜನರು ಊಹಿಸುತ್ತಾರೆ. ಇಬ್ಬರು ವ್ಯಕ್ತಿಗಳು ಅವರ ಚಾಟ್​ನಲ್ಲಿ ನನ್ನ ಬಗ್ಗೆ ಚರ್ಚೆ ಮಾಡುತ್ತಾರೆ ಎಂದರೆ ಅವರ ಕೃತ್ಯದಲ್ಲಿ ನಾನೂ ಭಾಗಿ ಆಗಿದ್ದೇನೆ ಎಂದರ್ಥವಲ್ಲ’ ಎಂದು ಫ್ಲೋರಾ ಸೈನಿ ಹೇಳಿದ್ದಾರೆ.

‘ನಾನು ಯಾವುದೇ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವಳಲ್ಲ. ಹಾಗಾಗಿ ನನ್ನ ಹೆಸರನ್ನು ಇದರಲ್ಲಿ ಎಳೆದು ತರಲಾಗಿದೆ. ಇದರಿಂದ ನನ್ನ ಹೆಸರು ಕೆಡಿಸಲು ಸಾಧ್ಯವಿಲ್ಲ. ರಾಜ್​ ಕುಂದ್ರಾ ಅಥವಾ ಅವರ ಕಡೆಯವರು ನನ್ನನ್ನು ಯಾವತ್ತೂ ಭೇಟಿ ಆಗಿಲ್ಲ. ಒಂದು ವೇಳೆ ಅವರು ನನಗೆ ಆಫರ್​ ನೀಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಈ ರೀತಿಯ ಹೊಸ ಪ್ಲಾಟ್​ಫಾರ್ಮ್​ಗಳಲ್ಲಿ ನಾನು ನಟಿಸುತ್ತಿಲ್ಲ’ ಎಂದು ಫ್ಲೋರಾ ಸೈನಿ ಹೇಳಿದ್ದಾರೆ.

ಇದನ್ನೂ ಓದಿ:

ಅಶ್ಲೀಲ ಸಿನಿಮಾ ದಂಧೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ಈ ಸುಂದರಿಯರಿಗೆ ಏನು ಸಂಬಂಧ?

ನೀಲಿ ಚಿತ್ರ ದಂಧೆಯ ಆರೋಪಿ ರಾಜ್​ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್​

Published On - 8:10 am, Tue, 27 July 21