ಭಾರತದ ಕನಸು; ದೆಹಲಿ ‘ರಾಮಾಯಣ’ ಈವೆಂಟ್​​ನಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಯಶ್

'ರಾಮಾಯಣ' ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್ ಯಶ್, ಚಿತ್ರಕ್ಕೆ ಸಹ ನಿರ್ಮಾಪಕನಾಗಿಯೂ ಕೈಜೋಡಿಸಿದ್ದಾರೆ. 4 ಸಾವಿರ ಕೋಟಿ ರೂಪಾಯಿ ಬಂಡವಾಳದೊಂದಿಗೆ ಭಾರತದ ಅತ್ಯಂತ ದುಬಾರಿ ಸಿನಿಮಾವಾಗಿ ಮೂಡಿಬರುತ್ತಿರುವ ಈ ಚಿತ್ರದ ವಿಶೇಷ ಕಾರ್ಯಕ್ರಮ ದೆಹಲಿಯಲ್ಲಿ ನಡೆದಿದ್ದು, ಯಶ್ ತಮ್ಮ ಪಾತ್ರ ಹಾಗೂ ಚಿತ್ರದ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಭಾರತದ ಕನಸು; ದೆಹಲಿ ‘ರಾಮಾಯಣ’ ಈವೆಂಟ್​​ನಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಯಶ್
ಯಶ್
Edited By:

Updated on: Jul 30, 2026 | 10:07 AM

ಮುಖ್ಯಾಂಶಗಳು

  • 'ರಾಮಾಯಣ'ದಲ್ಲಿ ರಾವಣನಾದ ಯಶ್
  • ನಟನೆಯ ಜೊತೆಗೆ ಸಹ ನಿರ್ಮಾಪಕನ ಜವಾಬ್ದಾರಿ!
  • ಸಾಯಿ ಪಲ್ಲವಿ ನಟನೆಗೆ ಮೆಚ್ಚುಗೆ

‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಂದು ರಿಲೀಸ್ ಆಗಲಿದೆ. ಜುಲೈ 24ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಅದಕ್ಕೂ ಒಂದು ವಾರ ಮೊದಲು ಅಂದರೆ ಇಂದು (ಜುಲೈ 18) ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮ ನಡೆದಿದೆ. ‘ಪ್ರಥಮ ಸಂಕಲ್ಪ’ ಅನ್ನೋದು ಈ ಕಾರ್ಯಕ್ರಮದ ಹೆಸರಾಗಿತ್ತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ‘ರಾಮಾಯಣ’ ಸಿನಿಮಾ ಕಲಾವಿದರು ಕೂಡ ಬಂದಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಕೂಡ ಆಗಮಿಸಿದ್ದರು. ಅವರು ತಮ್ಮ ಪಾತ್ರದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ವಿವರಿಸಿದರು.

ಯಶ್​​ಗೆ ನಿರ್ಮಾಪಕ ನಿತೇಶ್​ ತಿವಾರಿ ಧನ್ಯವಾದ ಹೇಳಿದರು. ‘ರಾಮಾಯಣವನ್ನು ಇಲ್ಲಿಯವರೆಗೆ ತರೋಕೆ ಯಶ್ ಅವರು ಸಹ ನಿರ್ಮಾಪಕನಾಗಿ, ಗೆಳೆಯನಾಗಿ ಸಹಾಯ ಮಾಡಿದ್ದಾರೆ’ ಎಂದರು ನಿತೇಶ್.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

‘ಎಲ್ಲರಿಗೂ ನಮಸ್ಕಾರ’ ಎಂದು ಯಶ್ ಕನ್ನಡದಲ್ಲಿ ಮಾತು ಆರಂಭಿಸಿದರು. ಆ ಬಳಿಕ ಎಲ್ಲಾ ಭಾಷೆಯಲ್ಲಿ ನಮಸ್ಕಾರ ಹೇಳಿದರು. ‘ಇದು ನಿಜಕ್ಕೂ ಒಂದೊಳ್ಳೆಯ ಪ್ರಾಜೆಕ್ಟ್. ನಮಿತ್ ಮಲ್ಹೋತ್ರಾ ಅವರಿಗೆ ಇದರ ಕ್ರೆಡಿಟ್ ಹೋಗಬೇಕು.ಅವರು ನನಗೆ ಅವಕಾಶ ಕೊಟ್ಟರು. ಹಿಂದಿ ಕಲಿಯಲು ಕೂಡ ಅವಕಾಶ ಸಿಕ್ಕಿತು’ ಎಂದರು ಯಶ್.

YouTube video player
‘ಇದು ಭಾರತದ ಕನಸು. ನಮ್ಮ ಕಥೆಯನ್ನು ವಿದೇಶದ ಪ್ರೇಕ್ಷಕರ ಎದುರು ಇಡಬೇಕು ಎಂಬುದು ಎಲ್ಲರ ಕನಸು. ರಣಬೀರ್ ಕಪೂರ್ ಅವರು ನೀವು ನಿಜಕ್ಕೂ ಗ್ರೇಟ್, ಅವರು ಈ ಪಾತ್ರಕ್ಕೆ ಎಷ್ಟು ಶರಣಾಗಿದ್ದರು ಎಂಬುದು ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ಸಾಯಿ ಕೂಡ ಫ್ಯಾಬುಲಸ್ ನಟಿ’ ಎಂದರು ಯಶ್.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ನಮಿತ್ ಮಲ್ಹೋತ್ರ ಅವರು ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ (ಎರಡು ಪಾರ್ಟ್​ ಸೇರಿ) ಬಂಡವಾಳ ಹೂಡಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಆಗಿದೆ.

ಮತ್ತಷ್ಟು ಕನ್ನಡ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Sat, 18 July 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us