AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್ ಕೊಟ್ಟಿರುವ ಕೊಡುಗೆ ಏನು?

Yash and Radhika Pandith: ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಎಲ್ಲ ಪ್ರಮುಖ ತಾರೆಯರು, ತಂತ್ರಜ್ಞರು ಭಾಗಿ ಆಗಿದ್ದರು. ಪ್ರತಿಯೊಬ್ಬರೂ ಸಹ ಇತರೆ ಕಲಾವಿದರು, ತಂತ್ರಜ್ಞರು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಪರಸ್ಪರ ಕೊಂಡಾಡಿದರು. ಇದರ ಜೊತೆಗೆ ನಟಿ ರಾಧಿಕಾ ಪಂಡಿತ್ ನೀಡಿರುವ ಕೊಡುಗೆಯನ್ನೂ ಸಹ ಹಲವರು ಮೆಚ್ಚಿಕೊಂಡರು. ‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್​​ ನೀಡಿರುವ ಕೊಡುಗೆಯೇನು?

‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್ ಕೊಟ್ಟಿರುವ ಕೊಡುಗೆ ಏನು?
Radhika Yash
ಮಂಜುನಾಥ ಸಿ.
|

Updated on: Aug 09, 2026 | 9:36 AM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಟ್ರೈಲರ್ ನಿನ್ನೆಯಷ್ಟೆ ರಿಲೀಸ್ ಆಗಿದೆ.
  • ಟ್ರೈಲರ್ ಇವೆಂಟ್​​ನಲ್ಲಿ ಯಶ್ ಪತ್ನಿಯನ್ನು ಸಾಕಷ್ಟು ಜನ ಕೊಂಡಾಡಿದರು.
  • ಅಷ್ಟಕ್ಕೂ ರಾಧಿಕಾ ಪಂಡಿತ್, ಟಾಕ್ಸಿಕ್ ಸಿನಿಮಾಕ್ಕೆ ಕೊಟ್ಟಿರುವ ಕೊಡುಗೆಯೇನು?

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ನಿನ್ನೆ (ಆಗಸ್ಟ್ 8) ಬಿಡುಗಡೆ ಆಗಿದೆ. ಬೆಂಗಳೂರಿನ ಎಎಂಬಿ ಮಾಲ್​​​ನಲ್ಲಿ ನಿನ್ನೆ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಎಲ್ಲ ಪ್ರಮುಖ ತಾರೆಯರು, ತಂತ್ರಜ್ಞರು ಭಾಗಿ ಆಗಿದ್ದರು. ಪ್ರತಿಯೊಬ್ಬರೂ ಸಹ ಇತರೆ ಕಲಾವಿದರು, ತಂತ್ರಜ್ಞರು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಪರಸ್ಪರ ಕೊಂಡಾಡಿದರು. ಇದರ ಜೊತೆಗೆ ನಟಿ ರಾಧಿಕಾ ಪಂಡಿತ್ ನೀಡಿರುವ ಕೊಡುಗೆಯನ್ನೂ ಸಹ ಹಲವರು ಮೆಚ್ಚಿಕೊಂಡರು. ‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್​​ ನೀಡಿರುವ ಕೊಡುಗೆಯೇನು?

ನಿರ್ಮಾಪಕ ಕೆವಿಎನ್ ವೆಂಕಟ್ ಅವರು ಮೊದಲು ರಾಧಿಕಾ ಪಂಡಿತ್ ಅವರಿಗೆ ಧನ್ಯವಾದ ಹೇಳಿದರು. ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿಯೇ ಅಂತೆ ವೆಂಕಟ್ ಅವರು ಮೊದಲ ಬಾರಿಗೆ ಯಶ್ ಅವರನ್ನು ಭೇಟಿ ಆಗಿದ್ದು. ಆ ನಂತರ ನಟಿ ನಯನತಾರಾ, ರುಕ್ಮಿಣಿ ವಸಂತ್, ನಿರ್ದೇಶಕಿ ಗೀತು ಮೋಹನ್​​ದಾಸ್ ಕೊನೆಗೆ ನಟ ಯಶ್ ಸಹ ರಾಧಿಕಾ ಪಂಡಿತ್ ಅವರಿಗೆ ವಿಶೇಷವಾದ ಧನ್ಯವಾದ ಹೇಳಿದರು. ಇದಕ್ಕೆ ಕಾರಣವೂ ಇದೆ.

‘ಟಾಕ್ಸಿಕ್’ ಸಿನಿಮಾದ ಪ್ರೀ ಪ್ರೊಡಕ್ಷನ್, ಚಿತ್ರೀಕರಣ ಎಲ್ಲವೂ ಸೇರಿ ಸುಮಾರು ನಾಲ್ಕೂವರೆ ವರ್ಷ ಹಿಡಿದೆ. ಇಷ್ಟೂ ಅವಧಿಯಲ್ಲಿ ಯಶ್, ಪ್ರತಿಯೊಂದು ವಿಭಾಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಾಲ್ಕೂವರೆ ವರ್ಷದಲ್ಲಿ ಯಶ್, ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆದಿರವುದು ಬಹು ಕಡಿಮೆಯಂತೆ. ಪತಿಯನ್ನು ಹೀಗೆ ಒಂದು ಸಿನಿಮಾಕ್ಕಾಗಿ ಬಿಟ್ಟುಕೊಡುವುದು ಸಾಮಾನ್ಯ ಕೊಡುಗೆಯಲ್ಲ ಎಂಬ ಕಾರಣಕ್ಕೆ ಚಿತ್ರತಂಡದ ಹಲವರು ರಾಧಿಕಾ ಪಂಡಿತ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದರು.

ಇದನ್ನೂ ಓದಿಯಶ್​ ‘ಟಾಕ್ಸಿಕ್’ ಟ್ರೇಲರ್​ ನೋಡಿ ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ

ನಯನತಾರಾ ಅಂತೂ ರಾಧಿಕಾ ಅವರ ತ್ಯಾಗವನ್ನು ಕೊಂಡಾಡಿದರು. ಗೀತೂ ಮೋಹನ್​​ದಾಸ್ ಸಹ ರಾಧಿಕಾ ಅವರ ತ್ಯಾಗವನ್ನು, ಸಹಿಷ್ಣುತೆಯನ್ನು ಹೊಗಳಿದರು. ಕೊನೆಯಲ್ಲಿ ಮಾತನಾಡಿದ ನಟ ಯಶ್ ಸಹ ಪತ್ನಿಯನ್ನು ಕೊಂಡಾಡಿದರು. ‘ನನ್ನಂಥಹ ವ್ಯಕ್ತಿಯ ಜೊತೆಗೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ. ನನ್ನೊಟ್ಟಿಗೆ ಸ್ನೇಹವೇ ಕಷ್ಟ, ನನ್ನೊಟ್ಟಿಗೆ ಗುರುತಿಸಿಕೊಳ್ಳುವುದು ಸಹ ಎಷ್ಟೋ ಜನರಿಗೆ ಕಷ್ಟ ಅಂಥಹುದರಲ್ಲಿ ನನ್ನೊಂದಿಗೆ ಅನುಕಾಲ ಇರುವುದು ಸಾಮಾನ್ಯವಾದ ಸ್ಟ್ರೆಸ್ ಅಲ್ಲ, ಆದರೆ ರಾಧಿಕಾ ಅದನ್ನು ಮಾಡುತ್ತಿದ್ದಾರೆ’ ಎಂದರು ಯಶ್.

ನನ್ನ ಪ್ರತಿ ಸಿನಿಮಾಕ್ಕೂ ನಾನು ನೂರರಷ್ಟು ಶ್ರಮ ಹಾಕುತ್ತೇನೆ. ಆದರೆ ಈ ಸಿನಿಮಾದ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಪ್ರತಿದಿನವೂ ಹೋರಾಟದಂತೆ ಇರುತ್ತಿತ್ತು. ನಾನು ಬಹಳಷ್ಟು ಸಮಯವನ್ನು ಇದಕ್ಕಾಗಿ ಕೊಡಬೇಕಿತ್ತು. ನ್ನ ಗೈರು ಹಾಜರಿಯಲ್ಲಿ ಅವರು ಎಲ್ಲವನ್ನೂ ಮ್ಯಾನೇಜ್ ಮಾಡಿದ್ದಾರೆ. ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ನಂಬಿಕೆ ಏನೆಂದರೆ ಯಾರ ತ್ಯಾಗವೂ ವ್ಯರ್ಥ ಆಗುವುದಿಲ್ಲ. ಎಲ್ಲದರ ಪ್ರತಿಫಲ ಸಿಕ್ಕೆ ಸಿಗುತ್ತದೆ. ಕೆಲಸ, ಸಂಬಂಧ ಯಾವುದೇ ಆಗಿರಲಿ, ಪ್ರಾಮಾಣಿಕವಾಗಿರಬೇಕು, ಸತ್ಯವಂತರಾಗಿರಬೇಕು ಅಷ್ಟೆ’ ಎಂದು ಪತ್ನಿಯನ್ನು ಕೊಂಡಾಡಿದರು ನಟ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ