3000 ಕೋಟಿ ಗಳಿಸಲಿದೆ ‘ರಾಮಾಯಣ’, ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ

ಈ ವರೆಗೆ ಕೇವಲ 10 ಸಿನಿಮಾಗಳಷ್ಟೆ 1000 ಕೋಟಿ ಗಳಿಕೆ ಮಾಡಿವೆ. ಅದರಲ್ಲೂ ಎಂಟು ಸಿನಿಮಾಗಳು ಈ ಪಟ್ಟಿಗೆ ಸೇರಿರುವುದು 2022ರ ಬಳಿಕವಷ್ಟೆ. ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ದಂಗಲ್’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ 2016 ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಸುಮಾರು 2000 ಕೋಟಿ ಹಣ ಗಳಿಕೆ ಮಾಡಿತ್ತು. ಆದರೆ ಇದೀಗ ಆ ಎಲ್ಲ ದಾಖಲೆಗಳನ್ನು ‘ರಾಮಾಯಣ’ ಸಿನಿಮಾ ಮುರಿಯಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ.

3000 ಕೋಟಿ ಗಳಿಸಲಿದೆ ‘ರಾಮಾಯಣ’, ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ
ರಾಮಾಯಣ

Updated on: Nov 05, 2026 | 11:06 AM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಕಲೆಕ್ಷನ್ ಪ್ರಿಡಿಕ್ಷನ್
  • ಮೊದಲ ದಿನ 200 ಕೋಟಿ ಗಳಿಸಲಿದೆ ಸಿನಿಮಾ
  • ‘ರಾಮಾಯಣ’ ಸಿನಿಮಾದ ಗಳಿಕೆ ದಾಖಲೆ

ಭಾರತೀಯ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ 1000 ಕೋಟಿ ಗಳಿಸುವುದು ಅಪರೂಪದ ಸಾಧನೆ. ಈ ವರೆಗೆ ಕೇವಲ 10 ಸಿನಿಮಾಗಳಷ್ಟೆ ಈ ದಾಖಲೆ ಮಾಡಿವೆ. ಅದರಲ್ಲೂ ಎಂಟು ಸಿನಿಮಾಗಳು ಈ ಪಟ್ಟಿಗೆ ಸೇರಿರುವುದು 2022ರ ಬಳಿಕವಷ್ಟೆ. ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ದಂಗಲ್’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ 2016 ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಸುಮಾರು 2000 ಕೋಟಿ ಹಣ ಗಳಿಕೆ ಮಾಡಿತ್ತು. ಆದರೆ ಇದೀಗ ಆ ಎಲ್ಲ ದಾಖಲೆಗಳನ್ನು ‘ರಾಮಾಯಣ’ ಸಿನಿಮಾ ಮುರಿಯಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ.

‘ರಾಮಾಯಣ’ ಇಂದು (ನವೆಂಬರ್ 05) ರಿಲೀಸ್ ಆಗಿದ್ದು, ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾದ ಪ್ರೀಮಿಯರ್ ಶೋಗಳು ನಿನ್ನೆಯೇ ಹಲವೆಡೆ ಪ್ರದರ್ಶಿಸಲಾಗಿದ್ದು, ಇಂದು ಬೆಳಿಗಿನ ಶೋಗಳು ಸಹ ಮುಗಿದಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಭಾರತದ ಎಲ್ಲ ಭಾಗಗಳಿಂದಲೂ ‘ರಾಮಾಯಣ’ ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳೇ ವ್ಯಕ್ತವಾಗುತ್ತಿವೆ. ಹಾಗಾಗಿ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅದ್ಧೂರಿ ಪ್ರದರ್ಶನ ಕಾಣುವುದು ಖಾತ್ರಿ ಎನ್ನಲಾಗುತ್ತಿದೆ.

Loading...

‘ರಾಮಾಯಣ’ ಸಿನಿಮಾವು ಮೊದಲ ದಿನವೇ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 200 ಕೋಟಿ ಗಳಿಕೆ ಮಾಡಲಿದೆ ಎಂಬ ಅಂದಾಜು ಹಾಕಲಾಗಿದೆ. ಆ ಮೂಲಕ ಭಾರತದ ಈ ವರೆಗಿನ ಎಲ್ಲ ದಾಖಲೆಗಳನ್ನು ಈ ಸಿನಿಮಾ ಮುರಿದು ಮೂಲೆಗುಂಪು ಮಾಡಲಿದೆ. ಅದರ ಜೊತೆಗೆ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಕುರಿತು ಸಹ ಈಗಾಗಲೇ ಲೆಕ್ಕಾಚಾರ ಆರಂಭವಾಗಿದ್ದು, ಈ ಸಿನಿಮಾ ಭಾರತದ ಈ ವರೆಗಿನ ಎಲ್ಲ ಬಾಕ್ಸ್ ಆಫೀಸ್​ ದಾಖಲೆಗಳನ್ನು ಮುರಿದು 2000 ದಿಂದ 3000 ಕೋಟಿ ಗಳಿಕೆ ಮಾಡಲಿದೆ ಎಂದು ಕೆಲವು ಬಾಕ್ಸ್ ಆಫೀಸ್ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಗೆ ಸೂಪರ್ ರೇಟಿಂಗ್ಸ್; ಟೀಕಾಕಾರರ ಬಾಯಿ ಮುಚ್ಚಿಸಿದ ದೃಶ್ಯವೈಭವ

‘ರಾಮಾಯಣ’ ಸಿನಿಮಾದ ಎರಡು ಭಾಗಗಳಿಗೆ ಸುಮಾರು 2000 ಕೋಟಿ ರೂಪಾಯಿ ಮೀಸಲಿಡಲಾಗಿದೆ ಆ ಮೂಲಕ ಈ ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್​ ಸಿನಿಮಾ ಎನಿಸಿಕೊಂಡಿದೆ. ಆದರೆ ಸಿನಿಮಾದ ಮೊದಲ ಭಾಗದಲ್ಲಿಯೇ ಸಿನಿಮಾದ ಎಲ್ಲ ಭಾಗಗಳ ಬಜೆಟ್​ ಅನ್ನು ರಿಕವರಿ ಮಾಡಿಕೊಂಡು ಲಾಭದಲ್ಲಿರಲಿದೆ. ‘ರಾಮಾಯಣ’ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ‘ದಂಗಲ್’ ಅನ್ನು ನಿರ್ದೇಶಿಸಿರುವುದು ಸಹ ಇದೇ ನಿತೇಶ್ ತಿವಾರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us