‘ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ; ಯಶ್ ರೌದ್ರಾವತಾರ ನೋಡಿ ನೆಟ್ಟಿಗರು ಹೇಳಿದ್ದಿಷ್ಟು

Ramayana Movie Trailer: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ 'ರಾಮಾಯಣ' ಟ್ರೇಲರ್ ಭಾರಿ ಧೂಳೆಬ್ಬಿಸುತ್ತಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರದ ಎಂಟ್ರಿಗೆ ಪ್ರೇಕ್ಷಕರು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿದಿದ್ದು, ಇಡೀ ಟ್ರೇಲರ್ ಯಶ್ ಅವರ ಅಪ್ರತಿಮ ಡಾಮಿನೇಷನ್‌ನಿಂದ ಕೂಡಿದೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.

‘ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ; ಯಶ್ ರೌದ್ರಾವತಾರ ನೋಡಿ ನೆಟ್ಟಿಗರು ಹೇಳಿದ್ದಿಷ್ಟು
ಯಶ್

Updated on: Jul 30, 2026 | 1:14 PM

ಮುಖ್ಯಾಂಶಗಳು

  • ಥಿಯೇಟರ್‌ಗಳಲ್ಲಿ ರಾಕಿಂಗ್ ಸ್ಟಾರ್ ಅಬ್ಬರ
  • ರಾವಣನಾಗಿ ಯಶ್ ಕಣ್ಣುಗಳ ತೀವ್ರತೆಗೆ ಪ್ರೇಕ್ಷಕರು ಫಿದಾ
  • ಸ್ಪೈಡರ್ ಮ್ಯಾನ್ ಚಿತ್ರದ ಜೊತೆ ರಾಮಾಯಣ ಧಮಾಕಾ

‘ರಾಕಿಂಗ್ ಸ್ಟಾರ್ ಯಶ್​..’2 ಈ ಹೆಸರು ಈಗ ವಿಶ್ವಮಟ್ಟದಲ್ಲಿ ತಿಳಿದಿದೆ. ಕಿರುತೆರೆ ಮೂಲಕ ಜರ್ನಿ ಆರಂಭಿಸಿ, ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಏನಾದರೂ ಮಾಡಿಯೇ ಮಾಡುತ್ತೇನೆ ಎಂದು ಅವರು ಬಲವಾಗಿ ಅಂದುಕೊಂಡಿದ್ದರು. ‘ಕೆಜಿಎಫ್’ ಚಿತ್ರದ ಮೂಲ ಅದನ್ನು ಸಾಧಿಸಿದರು. ಅಲ್ಲಿಗೆ ಅವರು ನಿಲ್ಲಿಸಲಿಲ್ಲ. ‘ಕೆಜಿಎಫ್ 2’ ಮಾಡಿದರು. ಈಗ ‘ಟಾಕ್ಸಿಕ್’ ರಿಲೀಸ್​​ಗೆ ರೆಡಿ ಆಗುತ್ತಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಟ್ರೇಲರ್ ಮೂಲಕ ಧೂಳೆಬ್ಬಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಲಂಕೇಶ್ವರ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಸಂಪೂರ್ಣ ಅಧಿಪತ್ಯ ಎದ್ದು ಕಾಣುತ್ತಿದೆ ಎಂದು ಅನೇಕರು ಬಣ್ಣಿಸುತ್ತಿದ್ದಾರೆ.

ರೋಮಾಂಚನ ಮೂಡಿಸಿದ ಯಶ್ ಕಣ್ಣುಗಳು

ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು ಯಶ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ. ‘ಇಡೀ ರಾಮಾಯಣ ಟ್ರೇಲರ್‌ನಲ್ಲಿ ಅತ್ಯಂತ ರೋಮಾಂಚನ ನೀಡಿದ ಕ್ಷಣ ಎಂದರೆ ಅದು ಯಶ್ ಅವರ ರಾವಣನ ಅವತಾರ. ಅವರ ಕಣ್ಣುಗಳಲ್ಲಿನ ತೀವ್ರತೆ, ಗಾಂಭೀರ್ಯದ ವ್ಯಕ್ತಿತ್ವ ಮತ್ತು ಪರದೆಯ ಮೇಲಿನ ಅವರ ಅಪ್ರತಿಮ ಕ್ರೌರ್ಯದ ನಟನೆ ಎಂದಿಗೂ ಮರೆಯಲಾಗದ ಮೊದಲ ಆಕರ್ಷಣೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ

ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಗ್ಯಾರಂಟಿ

ಚಿತ್ರಮಂದಿರಗಳಲ್ಲಿ ಟ್ರೇಲರ್ ಪ್ರದರ್ಶನವಾಗುವಾಗ ರಾವಣನ ಎಂಟ್ರಿ ದೃಶ್ಯಕ್ಕೆ ಪ್ರೇಕ್ಷಕರಿಂದ ಹುಚ್ಚೆದ್ದು ಕೂಗಿದ್ದಾರೆ. ‘ಯಶ್ ಅವರು ಇಡೀ ಟ್ರೇಲರ್ ಅನ್ನು ಅತ್ಯಂತ ಸುಲಭವಾಗಿ ಡಾಮಿನೇಟ್ ಮಾಡಿದ್ದಾರೆ’ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ಭವ್ಯ ವಿಶ್ಯುಯಲ್ ವೈಭವ ಹಾಗೂ ಯಶ್ ಅವರ ರೌದ್ರಾವತಾರವನ್ನು ನೋಡುತ್ತಿದ್ದರೆ, ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ, ಸುನಾಮಿ ಎಬ್ಬಿಸುವುದು ಖಚಿತ ಎಂದು ಸಿನಿವಿಶ್ಲೇಷಕರು ಹಾಗೂ ಪ್ರೇಕ್ಷಕರು ಜಂಟಿಯಾಗಿ ಭವಿಷ್ಯ ನುಡಿಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us