‘ರಣಬೀರ್ ಓರ್ವ ಶ್ರೇಷ್ಠ ನಟ ಆದರೆ..’; ಅರುಣ್ ಗೋವಿಲ್ ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Mar 12, 2024 | 11:32 AM

‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ರಣಬೀರ್ ಮಾಡಲಿರುವುದರಿಂದ ಪಾತ್ರಕ್ಕೆ ನಟ ನ್ಯಾಯ ಸಲ್ಲಿಸಬಹುದೇ ಅಥವಾ ಇಲ್ಲವೇ? ಹೀಗೊಂದು ಪ್ರಶ್ನೆಯನ್ನು ಅರುಣ್ ಗೋವಿಲ್ ಕೇಳಬೇಕಾಯಿತು. ಈ ಬಗ್ಗೆ ಅರುಣ್ ಗೋವಿಲ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ರಣಬೀರ್ ಓರ್ವ ಶ್ರೇಷ್ಠ ನಟ ಆದರೆ..’; ಅರುಣ್ ಗೋವಿಲ್ ಹೀಗೆ ಹೇಳಿದ್ದೇಕೆ?
ಅರುಣ್​-ರಣಬೀರ್
Follow us on

ನಟ ರಣಬೀರ್ ಕಪೂರ್ (Ranbir Kapoor) ಅವರು ‘ಅನಿಮಲ್’ ಸಿನಿಮಾ ಬಳಿಕ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ನಿತೇಶ್ ತಿವಾರಿ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೂರು ಭಾಗದಲ್ಲಿ ಮೂಡಿ ಬರಲಿರುವ ರಾಮಾಯಣದ ಬಗ್ಗೆ ಸಾಕಷ್ಟು ಮಂದಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೆಲವರು ರಣಬೀರ್ ಕಪೂರ್ ಅವರನ್ನು ರಾಮನ ಪಾತ್ರದಲ್ಲಿ ಒಪ್ಪಿಕೊಳ್ಳಲು ರೆಡಿ ಇಲ್ಲ. ಈ ಮೊದಲು ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರು ರಣಬೀರ್ ಕಪೂರ್ ಪರವಾಗಿ ಮಾತನಾಡಿದ್ದಾರೆ.

‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ರಣಬೀರ್ ಮಾಡಲಿರುವುದರಿಂದ ಪಾತ್ರಕ್ಕೆ ನಟ ನ್ಯಾಯ ಸಲ್ಲಿಸಬಹುದೇ ಅಥವಾ ಇಲ್ಲವೇ? ಹೀಗೊಂದು ಪ್ರಶ್ನೆಯನ್ನು ಅರುಣ್ ಗೋವಿಲ್ ಕೇಳಬೇಕಾಯಿತು. ಈ ಬಗ್ಗೆ ಅರುಣ್ ಗೋವಿಲ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ರಣಬೀರ್ ಶ್ರೇಷ್ಠ ನಟ. ಆದರೆ, ಅವರು ಉತ್ತಮವಾಗಿ ನಟಿಸಬಹುದು ಅಥವಾ ನಟಿಸದೆಯೂ ಇರಬಹುದು. ಅದಕ್ಕೆ ಸಮಯ ಮಾತ್ರ ಉತ್ತರಿಸುತ್ತದೆ. ಮೊದಲೇ ಯಾರ ಬಗ್ಗೆಯೂ ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು.

‘ರಣಬೀರ್ ಕಪೂರ್ ಅವರು ಓರ್ವ ಉತ್ತಮ ನಟ. ಅವರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಸುಸಂಸ್ಕೃತ ವ್ಯಕ್ತಿ. ಅವರಿಗೆ ನೈತಿಕತೆ, ನಡತೆ ಮತ್ತು ಸಂಸ್ಕೃತಿ ಇದೆ. ನಾನು ರಣಬೀರ್‌ ಅವರನ್ನು ಹಲವು ಬಾರಿ ನೋಡಿದ್ದೇನೆ. ರಣಬೀರ್ ಚಿತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸುತ್ತಾರೆ ಅನ್ನೋದು ನನಗೆ ಗೊತ್ತು’ ಎಂದು ಅರುಣ್ ಗೋವಿಲ್ ಹೇಳಿದ್ದಾರೆ. ಈ ಮೂಲಕ ಟ್ರೋಲರ್​ಗಳ ಬಾಯಿ ಮುಚ್ಚಿಸಿದ್ದಾರೆ.

‘ರಾಮಾಯಣ’ ಚಿತ್ರದ ತಾರಾ ಬಳಗ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ರಾವಣನ ಪಾತ್ರದಲ್ಲಿ ನಟ ಯಶ್ ನಟಿಸಲಿದ್ದಾರೆ ಎನ್ನಲಾಗಿದೆ. ಸನ್ನಿ ಡಿಯೋಲ್, ಲಾರಾ ದತ್ತಾ, ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ದಿನ ಕಳೆದಂತೆ ಪಾತ್ರವರ್ಗ ಹಿರಿದಾಗುತ್ತಿದೆ.

ಇದನ್ನೂ ಓದಿ: ಅವಾರ್ಡ್ ಫಂಕ್ಷನ್​ನಲ್ಲಿ ಕರಣ್​ ಜೋಹರ್ ವಿರುದ್ಧ ಕೂಗಾಡಿದ ರಣಬೀರ್ ಕಪೂರ್; ವಿಡಿಯೋ ವೈರಲ್

ರಣಬೀರ್ ಕಪೂರ್ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇತ್ತೀಚೆಗಷ್ಟೇ ‘ಅನಿಮಲ್’ ಚಿತ್ರದ ಮೂಲಕ ಗಮನ ಸೆಳೆದಿದ್ದರು. ಬಾಕ್ಸ್ ಆಫೀಸ್​​ನಲ್ಲೂ ಸಿನಿಮಾ ಕಮಾಯಿ ಮಾಡಿದೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರ 900 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

‘ರಾಮಾಯಣ’ ಖ್ಯಾತಿಯ ಅರುಣ್ ಗೋವಿಲ್

ಅರುಣ್ ಗೋವಿಲ್ ಅವರು ‘ರಾಮಾಯಣ’ ಸೀರಿಯಲ್ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇಲ್ಲಿಯವರೆಗೆ ಯಾರೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಅನೇಕರು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಅವರು ಮಾಡಿದ್ದಾರೆ. ಆದರೆ ಇಂದಿಗೂ ಜನರು ಅರುಣ್ ಗೋವಿಲ್ ಅವರನ್ನು ನೆನಪಿಸಿಕೊಳ್ಳುವುದು ಅವರು ಮಾಡಿದ ರಾಮನ ಪಾತ್ರಕ್ಕಾಗಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ