ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ

ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ವಿವಾಹ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ವಿವಾಹ ಜರುಗಳಿದೆ. ಈ ಹೋಟೆಲ್​​ನಲ್ಲಿ ಯುರೋಪ್​ನ ವಾಸ್ತುಶಿಲ್ಪ ಇದೆ. ಈ ಹೋಟೆಲ್ 300 ಎಕರೆಗೂ ದೊಡ್ಡ ಜಾಗದಲ್ಲಿದೆ. ಅರಾವಳಿ ಶ್ರೇಣಿಯಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್​ನಲ್ಲಿ ನಾಲ್ಕು ವಿಲ್ಲಾ, 100 ಡಿಲಕ್ಸ್ ರೂಮ್, ಸ್ವಿಮ್ಮಿಂಗ್ ಪೂಲ್ಸ್​ಗಳು ಕೂಡ ಇವೆ.

ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ
ಪುಲ್ಕಿತ್-ಕೃತಿ
Follow us
ರಾಜೇಶ್ ದುಗ್ಗುಮನೆ
|

Updated on: Mar 12, 2024 | 7:32 AM

ಕೃತಿ ಕರಬಂಧ (Kriti Kharbanda) ಹಾಗೂ ಅವರ ಬಾಯ್​ಫ್ರೆಂಡ್ ಪುಲ್ಕಿತ್ ಸಾಮ್ರಾಟ್ ಅವರ ಮದುವೆ ವಿಚಾರ ಇತ್ತೀಚೆಗೆ ಜೋರಾಗಿ ಚರ್ಚೆಯಲ್ಲಿದೆ. ಅವರ ಮದುವೆ ಆಮಂತ್ರಣ ಪತ್ರ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಈ ಜೋಡಿ ಶೀಘ್ರವೇ ಮದುವೆ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ. ಈವರೆಗೆ ಈ ಜೋಡಿ ಎಲ್ಲಿ ಮದುವೆ ಆಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಇದಕ್ಕೆ ಉತ್ತರ ಸಿಕ್ಕಿದೆ. ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಕೃತಿ ಹಾಗೂ ಪುಲ್ಕಿತ್ ಸಾಮ್ರಾಟ್ ವಿವಾಹ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಿವುಡ್ ಹಂಗಾಮ ಮಾಡಿರೋ ವರದಿ ಪ್ರಕಾರ ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ಮದುವೆ ನಡೆಯಲಿದೆ. ಪಕ್ಕಾ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯ ಜರುಗಳಿದೆ. ಈ ಹೋಟೆಲ್​​ನಲ್ಲಿ ಯುರೋಪ್​ನ ವಾಸ್ತುಶಿಲ್ಪ ಇದೆ. ಈ ಹೋಟೆಲ್ 300 ಎಕರೆಗೂ ದೊಡ್ಡ ಜಾಗದಲ್ಲಿದೆ ಅನ್ನೋದು ವಿಶೇಷ. ಅರಾವಳಿ ಶ್ರೇಣಿಯಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್​ನಲ್ಲಿ ನಾಲ್ಕು ವಿಲ್ಲಾ, 100 ಡಿಲಕ್ಸ್ ರೂಮ್, ಸ್ವಿಮ್ಮಿಂಗ್ ಪೂಲ್ಸ್​ಗಳು ಕೂಡ ಇವೆ. ಗಾಲ್ಫ್ ಮೈದಾನ, ಸ್ಪಾ ಮೊದಲಾದ ಸೇವೆಗಳು ಲಭ್ಯವಿದೆ. ಡೆಸ್ಟಿನೇಷನ್ ವೆಡ್ಡಿಂಗ್​ಗೆ ಈ ಜಾಗ ಹೇಳಿ ಮಾಡಿಸಿದಂತೆ ಇದೆ.

ಕೃತಿ ಹಾಗೂ ಪುಲ್ಕಿತ್ ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಈ ಕಾರಣಕ್ಕೆ ದೆಹಲಿಯಲ್ಲೇ ಮದುವೆ ಆಗಬೇಕು ಎಂದು ಅವರು ನಿರ್ಧರಿಸಿದ್ದಾರೆ. ಇದೇ ಹೋಟೆಲ್​ನಲ್ಲಿ ಮದುವೆಗೂ ಪೂರ್ವದ ಕಾರ್ಯಗಳಾದ ಸಂಗೀತ್, ಮೆಹಂದಿ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಪುಲ್ಕಿತ್ ಹಾಗೂ ಕೃತಿ ‘ಪಾಗಲ್​ಪಂತಿ’ ಸಿನಿಮಾದಲ್ಲಿ ಭೇಟಿ ಆದರು. ಈ ವರ್ಷದ ಆರಂಭದಲ್ಲಿ ಇವರು ಎಂಗೇಜ್​ಮೆಂಟ್ ಮಾಡಿಕೊಂಡರು. ಈ ಫೋಟೋಗಳು ವೈರಲ್ ಆಗಿತ್ತು. ಇವರು ಪ್ರೀತಿ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಬದಲಿಗೆ ಪುಲ್ಕಿತ್ ಜೊತೆ ಇರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ; ವರ, ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ..

ಕೃತಿ ಕರಬಂಧ ಅವರು 2009ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2010ರಲ್ಲಿ ಕನ್ನಡದ ‘ಚಿರು’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಅವರಿಗೆ ಕನ್ನಡದಿಂದ ಸಾಕಷ್ಟು ಆಫರ್​ಗಳು ಬಂದವು. ‘ಗೂಗ್ಲಿ’ಯಲ್ಲಿ ನಟಿಸಿ ಅವರು ಫೇಮಸ್ ಆದರು. ಸದ್ಯ ಹಿಂದಿ ಚಿತ್ರರಂಗದಲ್ಲಿ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ