AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾತನ 77 ವರ್ಷ ಹಳೆಯ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ರಣ್ಬೀರ್ ಕಪೂರ್

Ranbir Kapoor movies: 1948 ರಲ್ಲಿ ತಾತ ರಾಜ್ ಕಪೂರ್ ಮೂಲಕ ಪ್ರಾರಂಭಿಸಲಾಗಿದ್ದ ಆರ್​ಕೆ ಫಿಲಮ್ಸ್ ಅನ್ನು 26 ವರ್ಷಗಳ ಬಳಿಕ ಮತ್ತೆ ರೀ ಲಾಂಚ್ ಮಾಡಲು ರಣ್​ಬೀರ್ ಕಪೂರ್ ಮುಂದಾಗಿದ್ದಾರೆ. ಅದೂ ತಮ್ಮದೇ ನಿರ್ದೇಶನದ ಮೂಲಕ. ಬಾಲಿವುಡ್​​ನ ಟಾಪ್ ಹೀರೋ ಆಗಿ ಮೆರೆಯುತ್ತಿರುವಾಗಲೇ ರಣ್​​ಬೀರ್ ಕಪೂರ್ ನಿರ್ದೇಶಕನ ಟೋಪಿ ಧರಿಸಲು ಮುಂದಾಗಿದ್ದಾರೆ.

ತಾತನ 77 ವರ್ಷ ಹಳೆಯ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ರಣ್ಬೀರ್ ಕಪೂರ್
Ranbir Kapoor
ಮಂಜುನಾಥ ಸಿ.
|

Updated on:Nov 02, 2025 | 4:13 PM

Share

ಆರ್​​ಕೆ ಸ್ಟುಡಿಯೋ (RK Studio) 1948ರಲ್ಲಿ ರಾಜ್ ಕಪೂರ್ ನಿರ್ಮಾಣ ಮಾಡಿದರು. ಮುಂಬೈನ ಚೆಂಬುರ್​​ನಲ್ಲಿರುವ ಈ ಐತಿಹಾಸಿಕ ಸ್ಟುಡಿಯೋನಲ್ಲಿ ಹಲವಾರು ಬಾಲಿವುಡ್ ಸಿನಿಮಾಗಳು ಚಿತ್ರೀಕರಣಗೊಂಡಿವೆ. ಇದೇ ಸ್ಟುಡಿಯೋನಲ್ಲಿ ಆರ್​​ಕೆ ಫಿಲಮ್ಸ್ ನಿರ್ಮಾಣ ಸಂಸ್ಥೆಯನ್ನು ಸಹ ರಾಜ್ ಕಪೂರ್ ಪ್ರಾರಂಭ ಮಾಡಿದ್ದರು. 2017 ರಲ್ಲಿ ರಾಜ್ ಕಪೂರ್ ಸ್ಟುಡಿಯೋಕ್ಕೆ ಬೆಂಕಿ ಬಿದ್ದು ಭಾರಿ ನಷ್ಟ ಉಂಟಾಯ್ತು, ರಾಜ್ ಕಪೂರ್ ಸೇರಿದಂತೆ ಹಲವು ದಿಗ್ಗಜರಿಗೆ ಸೇರಿದ್ದ ಅಮೂಲ್ಯ ವಸ್ತುಗಳು ನಾಶವಾದವು, ಸೆಟ್​ಗಳು ನಾಶವಾದವು. ಕೊನೆಗೆ 2019 ರಲ್ಲಿ ಆರ್​​ಕೆ ಸ್ಟುಡಿಯೋ ಅನ್ನು ಗೋದ್ರೆಜ್​​ಗೆ ಮಾರಾಟ ಮಾಡಲಾಯ್ತು. ಆದರೆ ಇದೀಗ ರಣ್​ಬೀರ್ ಕಪೂರ್ ಆರ್​​ಕೆ ಫಿಲಮ್ಸ್ ಅನ್ನು ಮತ್ತೆ ಪ್ರಾರಂಭಿಸಲು ಮುಂದಾಗಿದ್ದಾರೆ.

ಸ್ಟುಡಿಯೋ ಇದ್ದ ಜಾಗದಲ್ಲಿ ಗೋದ್ರೆಜ್ ಅಪಾರ್ಟ್​​ಮೆಂಟ್​​ಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ ಆರ್​ಕೆ ಫಿಲಮ್ಸ್ ಅನ್ನಾದರೂ ಉಳಿಸಿಕೊಳ್ಳುವ ಮತ್ತು ಅದನ್ನು ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಯನ್ನಾಗಿ ರೂಪಿಸುವ ಯೋಜನೆಯನ್ನು ರಾಜ್ ಕಪೂರ್ ಅವರ ಮೊಮ್ಮಗ ರಣ್​ಬೀರ್ ಕಪೂರ್ ಕೈಗೆತ್ತಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆಯನ್ನು ತಾವೇ ನಿರ್ದೇಶಿಸಲಿರುವ ಸಿನಿಮಾದ ಮೂಲಕ ರೀ ಲಾಂಚ್ ಮಾಡಲಿದ್ದಾರೆ.

ಆರ್​​ಕೆ ಫಿಲಮ್ಸ್ 1948ರಲ್ಲೇ ಪ್ರಾರಂಭವಾದರೂ ಸಹ ದೊಡ್ಡ ಸಂಖ್ಯೆಯ ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ. ಈ ವರೆಗೆ ಕೇವಲ 21 ಸಿನಿಮಾಗಳನ್ನಷ್ಟೆ ನಿರ್ಮಾಣ ಮಾಡಲಾಗಿದೆ. ಕಪೂರ್ ಕುಟುಂಬಕ್ಕೆ ಸೇರಿದವರು ನಟಿಸಿದ ಅಥವಾ ನಿರ್ದೇಶನ ಮಾಡಿದ ಸಿನಿಮಾಗಳನ್ನಷ್ಟೆ ‘ಆರ್​​ಕೆ ಫಿಲಮ್ಸ್ ಮೂಲಕ ನಿರ್ಮಾಣ ಮಾಡಲಾಗಿತ್ತು. 1999 ರಲ್ಲಿ ರಿಶಿ ಕಪೂರ್ ನಿರ್ದೇಶಿಸಿದ್ದ ‘ಆ ಅಬ್ ಲೌಟ್ ಚಲೆ’ ಸಿನಿಮಾ, ಆರ್​​ಕೆ ಫಿಲಮ್ಸ್​​ನ ಕೊನೆಯ ಸಿನಿಮಾ ಆಗಿತ್ತು. ಇದೀಗ 26 ವರ್ಷಗಳ ಬಳಿಕ ರಣ್​ಬೀರ್ ಕಪೂರ್ ತಮ್ಮದೇ ನಿರ್ದೇಶನದ ಮೂಲಕ ಆರ್​​ಕೆ ಫಿಲಮ್ಸ್ ಅನ್ನು ರೀಲಾಂಚ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ಬಾಲಿವುಡ್ಡಿಗರ ಹಾಲೋವೀನ್ ಪಾರ್ಟಿ: ಯಾರ್ಯಾರಾದಿದ್ದಾರೆ ನೋಡಿ

ಅದು ಮಾತ್ರವೇ ಅಲ್ಲದೆ ತಮ್ಮದೇ ನಟನೆಯ ಎರಡು ಸಿನಿಮಾಗಳನ್ನು ಆರ್​​ಕೆ ಫಿಲಮ್ಸ್ ಮೂಲಕ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ‘ಬ್ರಹ್ಮಾಸ್ತ್ರ 2’ ಮತ್ತು ಅನುರಾಗ್ ಬಸು ನಿರ್ದೇಶಿಸಲಿರುವ ಇನ್ನೊಂದು ಸಿನಿಮಾವನ್ನು ಸಹ ಆರ್​​ಕೆ ಫಿಲಮ್ಸ್ ಮೂಲಕವೇ ನಿರ್ಮಾಣ ಮಾಡಲು ರಣ್​​ಬೀರ್ ಕಪೂರ್ ಮುಂದಾಗಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರವೇ ಅಲ್ಲದೆ ಭಾರತದ ಬೇರೆ ಕೆಲವು ಭಾಷೆಗಳಲ್ಲಿಯೂ ಸಿನಿಮಾ ನಿರ್ಮಾಣ ಮಾಡುವ ಗುರಿಯನ್ನು ರಣ್​​ಬೀರ್ ಕಪೂರ್ ಹೊಂದಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sun, 2 November 25

Follow Us
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!