AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ರಿನಾ ಕೈಫ್ ರೀತಿ ಕಾಣುವ ನಟಿ ಝರೀನ್ ಖಾನ್​ಗೆ 9 ವರ್ಷ ಕಿರಿಯವನ ಮೇಲೆ ಲವ್

ಬಾಲಿವುಡ್ ನಟಿ ಝರೀನ್ ಖಾನ್ ಅವರ ಹೆಸರು ನಟ ಮತ್ತು ಮಾಡೆಲ್ ರೋಹಿದ್ ಖಾನ್ ಅವರೊಂದಿಗೆ ತಳುಕು ಹಾಕಿಕೊಳ್ಳುತ್ತಿದೆ. ನಟ ರೋಹಿದ್ ಖಾನ್ ಅವರೊಂದಿಗೆ ಝರೀನ್ ರಿಲೇಶನ್​ಶಿಪ್ ಹೊಂದಿದ್ದಾರೆ ಎಂಬ ವರದಿಗಳಿವೆ. ಇತ್ತೀಚೆಗೆ, ಝರೀನ್ ಖಾನ್ ಮತ್ತು ರೋಹಿದ್ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದು ಕಂಡುಬಂದಿದೆ.

ಕತ್ರಿನಾ ಕೈಫ್ ರೀತಿ ಕಾಣುವ ನಟಿ ಝರೀನ್ ಖಾನ್​ಗೆ 9 ವರ್ಷ ಕಿರಿಯವನ ಮೇಲೆ ಲವ್
ಝರೀನ್ ಖಾನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 03, 2025 | 10:51 AM

Share

ತಮ್ಮ ಮೊದಲ ಚಿತ್ರದಿಂದಲೇ ಪ್ರೇಕ್ಷಕರ ಹೃದಯದಲ್ಲಿ ಮನೆ ಮಾಡಿದ ನಟಿ ಝರೀನ್ ಖಾನ್. ಅವರ ನಟನೆ ಮತ್ತು ನೋಟ ಎಲ್ಲರ ಹೃದಯದಲ್ಲಿ ಮನೆ ಮಾಡಿತು. ತಮ್ಮ ಮೊದಲ ಚಿತ್ರದಲ್ಲೇ ಭಾರಿ ಯಶಸ್ಸನ್ನು ಪಡೆದ ನಂತರ, ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದರು. ಝರೀನ್ ಖಾನ್ ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದರು. ಈಗ ಅವರ ಹೆಸರು ಈಗ ಒಬ್ಬ ನಟನೊಂದಿಗೆ ತಳುಕು ಹಾಕಿಕೊಂಡಿದೆ. ಅವರು ಡೇಟ್ ಮಾಡುತ್ತಿರುವ ನಟ ಅವರಿಗಿಂತ 9 ವರ್ಷ ಕಿರಿಯ ಎಂದು ಹೇಳಲಾಗುತ್ತದೆ.

ಬಾಲಿವುಡ್ ನಟಿ ಝರೀನ್ ಖಾನ್ ಅವರ ಹೆಸರು ನಟ ಮತ್ತು ಮಾಡೆಲ್ ರೋಹಿದ್ ಖಾನ್ ಅವರೊಂದಿಗೆ ತಳುಕು ಹಾಕಿಕೊಳ್ಳುತ್ತಿದೆ. ನಟ ರೋಹಿದ್ ಖಾನ್ ಅವರೊಂದಿಗೆ ಝರೀನ್ ರಿಲೇಶನ್​ಶಿಪ್ ಹೊಂದಿದ್ದಾರೆ ಎಂಬ ವರದಿಗಳಿವೆ. ಇತ್ತೀಚೆಗೆ, ಝರೀನ್ ಖಾನ್ ಮತ್ತು ರೋಹಿದ್ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದು ಕಂಡುಬಂದಿದೆ.

ಇವರಿಬ್ಬರೂ ಈ ಹಿಂದೆಯೂ ಹಲವು ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ, ಇಬ್ಬರೂ ಮತ್ತೆ ರೆಸ್ಟೋರೆಂಟ್‌ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಇದು ಅವರ ಸಂಬಂಧದ ಸುದ್ದಿಯನ್ನು ಮತ್ತಷ್ಟು ದೃಢಪಡಿಸಿದೆ. ಈ ಸುದ್ದಿ ರೋಹಿದ್‌ಗೆ ತಲುಪಿದಾಗ, ಅವರು ಅದಕ್ಕೆ ಪ್ರತಿಕ್ರಿಯಿಸಿದರು. ಪ್ರತಿಕ್ರಿಯಿಸುವಾಗ, ತಾವೊಬ್ಬರೂ ಕೇವಲ ಒಳ್ಳೆಯ ಸ್ನೇಹಿತರು ಮತ್ತು ಯಾವುದೇ ಲವ್ ರಿಲೇಶನ್ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕತ್ರಿನಾಗೆ ಹುಟ್ಟೋದು ಗಂಡೋ, ಹೆಣ್ಣೋ? ಭವಿಷ್ಯ ನುಡಿದ ಜ್ಯೋತಿಷಿ

‘ನಾವು ಕೇವಲ ಸ್ನೇಹಿತರು ಮತ್ತು ಆ ದಿನ ಊಟಕ್ಕೆ ಭೇಟಿಯಾದೆವು’ ಎಂದು ಹೇಳಿದರು. ಆದಾಗ್ಯೂ, ಝರೀನ್ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜರೀನ್ ಮತ್ತು ರೋಹಿದ್ ಇತ್ತೀಚೆಗೆ ದೀಪಾವಳಿಯನ್ನು ಒಟ್ಟಿಗೆ ಆಚರಿಸಿದ್ದಾರೆ ಎಂದು ಎಂಬ ವಿಷಯ ತಿಳಿದಿತ್ತು. ರೋಹಿದ್​ಗೆ 30 ವರ್ಷ. ಝರೀನ್ ಖಾನ್ ಅವರಿಗೆ 38 ವರ್ಷ. ‘ವೀರ್’ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕತ್ರಿನಾ ಕೈಫ್ ರೀತಿ ಇರುವುದೇ ಅವರ ನಟನಾ ವೃತ್ತಿಗೆ ಮುಳುವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.