ರಣಬೀರ್ ಕಪೂರ್ ಹೊಸ ಲುಕ್ ವೈರಲ್; ‘ಧೂಮ್ 4’ ಸಿನಿಮಾ ಟಾಕ್ ಶುರು
ಒಂದೆಡೆ ‘ಧೂಮ್ 4’ ಸಿನಿಮಾಗೆ ತಯಾರಿ ನಡೆಯುತ್ತಿದೆ. ಇನ್ನೊಂದೆಡೆ ರಣಬೀರ್ ಕಪೂರ್ ಅವರ ಹೊಸ ಲುಕ್ ವೈರಲ್ ಆಗುತ್ತಿದೆ. ‘ಧೂಮ್ 4’ ಸಿನಿಮಾ ಸಲುವಾಗಿಯೇ ಅವರು ಹೊಸ ಗೆಟಪ್ ಮಾಡಿಕೊಂಡಿದ್ದಾರೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ‘ಅನಿಮಲ್’ ಸಕ್ಸಸ್ ಬಳಿಕ ರಣಬೀರ್ ಕಪೂರ್ ಅವರ ಡಿಮ್ಯಾಂಡ್ ಹೆಚ್ಚಾಗಿದೆ.
ನಟ ರಣಬೀರ್ ಕಪೂರ್ ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಅವರು ನಟಸಿದ ‘ಅನಿಮಲ್’ ಸಿನಿಮಾ ಕಳೆದ ವರ್ಷ ಭರ್ಜರಿ ಸದ್ದು ಮಾಡಿತ್ತು. ಈಗ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಆಫರ್ಗಳು ಅವರಿಗೆ ಸಿಗುತ್ತಿವೆ. ಈ ನಡುವೆ ಅವರ ಹೊಸ ಲುಕ್ ವೈರಲ್ ಆಗಿದೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕಿಮ್ ಅವರು ಈ ಕೇಶ ವಿನ್ಯಾಸ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಲು ಆರಂಭಿಸಿದ್ದಾರೆ.
ರಣಬೀರ್ ಕಪೂರ್ ಅವರ ಫ್ಯಾನ್ಸ್ ಪೇಜ್ಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಅವರು ಈ ಹೊಸ ಹೇರ್ ಸ್ಟೈಲ್ ಮಾಡಿಕೊಂಡಿರುವುದು ಮುಂಬರುವ ಸಿನಿಮಾಗಳ ಸಲುವಾಗಿ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ‘ಅನಿಮಲ್ ಪಾರ್ಕ್ ಸಿನಿಮಾಗಾಗಿ ಈ ಲುಕ್’ ಎಂದು ಕೆಲವರು ಹೇಳಿದ್ದರೆ, ‘ಧೂಮ್ 4 ಚಿತ್ರಕ್ಕಾಗಿ ಈ ಗೆಟಪ್’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
View this post on Instagram
‘ಧೂಮ್’, ‘ಧೂಮ್ 2’ ಹಾಗೂ ‘ಧೂಮ್ 3’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮೊದಲ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಎರಡನೇ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಮೂರನೇ ಸಿನಿಮಾದಲ್ಲಿ ಆಮಿರ್ ಖಾನ್ ಅವರು ವಿಲನ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ‘ಧೂಮ್ 4’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡುವ ಅವಕಾಶ ರಣಬೀರ್ ಕಪೂರ್ ಅವರಿಗೆ ಸಿಗಲಿದೆ ಎಂದು ಹೇಳಾಗುತ್ತಿದೆ.
ಇದನ್ನೂ ಓದಿ: ರಣಬೀರ್ನ ಮದುವೆ ಆಗ್ತೀನಿ ಎಂದಿದ್ದ ಸಾರಾ; ನಟನ ವಿವಾಹದ ಬಳಿಕ ಏನಂದ್ರು?
ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಪ್ರತಿಭೆ ರಣಬೀರ್ ಕಪೂರ್ ಅವರಲ್ಲಿದೆ. ಲವರ್ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಂತರ ಮಾಸ್ ಪಾತ್ರಗಳನ್ನು ಮಾಡಿ ಜನಮನ ಗೆದ್ದರು. ‘ಅನಿಮಲ್’ ಸಿನಿಮಾದಲ್ಲಿ ತುಂಬ ರಗಡ್ ಆದಂತಹ ಪಾತ್ರಕ್ಕೆ ಬಣ್ಣ ಹಚ್ಚಿದ ನಂತರ ಅವರಿಗೆ ರಾಮನ ಪಾತ್ರ ಮಾಡುವ ಅವಕಾಶವನ್ನು ‘ರಾಮಾಯಣ’ ಸಿನಿಮಾದಲ್ಲಿ ನೀಡಲಾಗುತ್ತಿದೆ. ಆ ಬಗ್ಗೆ ಕಂಗನಾ ರಣಾವತ್ ಅವರು ವಿರೋಧ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.