ಬಾಲಿವುಡ್ ಬಾಕ್ಸ್ ಆಫೀಸ್ಗೆ 2023ರ ವರ್ಷ ಆಶಾದಾಯಕವಾಗಿದೆ. ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಭಾರತದ ಮಾರುಕಟ್ಟೆಯಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ‘ಜವಾನ್’, ‘ಪಠಾಣ್’, ‘ಗದರ್ 2’ ಸಿನಿಮಾಗಳ ಬಳಿಕ ಈಗ ‘ಅನಿಮಲ್’ (Animal Movie) ಚಿತ್ರ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ (Ranbir Kapoor) ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಕಲೆಕ್ಷನ್ (Animal Box Office Collection) ಬಗ್ಗೆ ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
‘ಅನಿಮಲ್’ ಸಿನಿಮಾ ತೆರೆಕಂಡು 5 ದಿನ ಕಳೆದಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಐದು ದಿನಕ್ಕೆ 481 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದರೆ, 500 ಕೋಟಿ ರೂಪಾಯಿ ಕ್ಲಬ್ ಸೇರಲು ಇನ್ನು 19 ಕೋಟಿ ರೂಪಾಯಿ ಮಾತ್ರ ಬಾಕಿ. 6ನೇ ದಿನ ಕೂಡ ಬಹುತೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಹಾಗಾಗಿ ಅನಾಯಾಸವಾಗಿ ಈ ಸಿನಿಮಾಗೆ 500 ಕೋಟಿ ರೂಪಾಯಿ ಹರಿದುಬಂದಿದ್ದು, ಶೀಘ್ರದಲ್ಲೇ ಅಪ್ಡೇಟ್ ಸಿಗಲಿದೆ.
ಇದನ್ನೂ ಓದಿ: Animal Twitter Review: ಹೇಗಿದೆ ರಶ್ಮಿಕಾ-ರಣಬೀರ್ ನಟನೆಯ ‘ಅನಿಮಲ್’ ಸಿನಿಮಾ? ಇಲ್ಲಿದೆ ಟ್ವಿಟರ್ ವಿಮರ್ಶೆ
ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಅನಿಮಲ್’ ಚಿತ್ರ ಪಾತ್ರವಾಗಿದೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅನೇಕ ದೃಶ್ಯಗಳು ಕ್ರೌರ್ಯದಿಂದ ಕೂಡಿವೆ ಎಂಬ ಕಾರಣಕ್ಕೆ ಕೆಲವರು ‘ಅನಿಮಲ್’ ಸಿನಿಮಾವನ್ನು ಟೀಕಿಸುತ್ತಿದ್ದಾರೆ. ಎಲ್ಲ ಟೀಕೆಗಳ ನಡುವೆಯೂ ಈ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಇದೆ.
ಎರಡನೇ ವೀಕೆಂಡ್ನಲ್ಲೂ ‘ಅನಿಮಲ್’ ಸಿನಿಮಾ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರೆ ಈ ಸಿನಿಮಾ ಕೂಡ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಆದರೆ 2ನೇ ವೀಕೆಂಡ್ ಬಳಿಕ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ಈ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಡಿಮ್ಯಾಂಡ್ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.