ಐಟಮ್​ ಸಾಂಗ್​ಗೆ ಹೆಜ್ಜೆ ಹಾಕಲಿದ್ದಾರೆ ರಣಬೀರ್​ ಕಪೂರ್

| Updated By: ರಾಜೇಶ್ ದುಗ್ಗುಮನೆ

Updated on: Sep 23, 2021 | 8:05 PM

2018ರಲ್ಲಿ ತೆರೆಕಂಡ ‘ಸಂಜು’ ಚಿತ್ರವೇ ಕೊನೆ. ಇದಾದ ನಂತರ ರಣಬೀರ್​ ಕಪೂರ್​ ನಟನೆಯ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ.

ಐಟಮ್​ ಸಾಂಗ್​ಗೆ ಹೆಜ್ಜೆ ಹಾಕಲಿದ್ದಾರೆ ರಣಬೀರ್​ ಕಪೂರ್
ಐಟಮ್​ ಸಾಂಗ್​ಗೆ ಹೆಜ್ಜೆ ಹಾಕಲಿದ್ದಾರೆ ರಣಬೀರ್​ ಕಪೂರ್
Follow us on

ಐಟಮ್​ ಸಾಂಗ್​ನಲ್ಲಿ ಹೀರೋಗಳಿಗಿಂತ ಹೀರೋಯಿನ್​ಗಳು ಹೆಜ್ಜೆ ಹಾಕಿದರೆ ಬೇಡಿಕೆ ಹೆಚ್ಚು. ಇದೇ ಕಾರಣಕ್ಕೆ ಚಿತ್ರತಂಡದವರು ಹಾಟ್​ ನಟಿಯರನ್ನು ಕರೆತಂದು, ಅವರಿಂದ ಐಟಮ್​ ಸಾಂಗ್ ಮಾಡಿಸಿ ಸಿನಿಮಾದಲ್ಲಿ ಎಲ್ಲಾದರೂ ಒಂದು ಕಡೆ ತುರುಕುತ್ತಾರೆ. ಬಾಲಿವುಡ್​, ಟಾಲಿವುಡ್​ ಸೇರಿ ಎಲ್ಲಾ ಕಡೆಗಳಲ್ಲೂ ಇದು ನಡೆದೇ ಇದೆ. ಕೆಲವೇ ಕೆಲವು ವಿಶೇಷ ಹಾಡುಗಳಲ್ಲಿ ಹೀರೋಗಳು ಡ್ಯಾನ್ಸ್​ ಮಾಡಿದ್ದಾರೆ. ಅದೇ ರೀತಿ ಈಗ ರಣಬೀರ್​ ಕಪೂರ್ ಕೈಯಲ್ಲಿ ವಿಶೇಷ ಡ್ಯಾನ್ಸ್​ ಮಾಡೋಕೆ ಸಿದ್ಧತೆ ನಡೆದಿದೆ.

2018ರಲ್ಲಿ ತೆರೆಕಂಡ ‘ಸಂಜು’ ಚಿತ್ರವೇ ಕೊನೆ. ಇದಾದ ನಂತರ ರಣಬೀರ್​ ಕಪೂರ್​ ನಟನೆಯ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ. ರಣಬೀರ್​ ಹಾಗೂ ಆಲಿಯಾ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಈಗಾಗಲೇ ತೆರೆಗೆ ಬಂದಿರಬೇಕಿತ್ತು. ಆದರೆ, ಕೊವಿಡ್​ ಒಂದು ಹಾಗೂ ಎರಡನೇ ಅಲೆಯಿಂದ ಸಿನಿಮಾ ಕೆಲಸಗಳು ಮತ್ತು ಸಿನಿಮಾ ರಿಲೀಸ್​ ದಿನಾಂಕ ಎರಡೂ ವಿಳಂಬವಾಗಿದೆ. ಇದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರಮೂಡಿಸಿದೆ. ಹೀಗಿರುವಾಗಲೇ ಬಾಲಿವುಡ್​ ಅಂಗಳದಿಂದ ಹೊಸ ಅಪ್​ಡೇಟ್​ ಒಂದು ಕೇಳಿ ಬರುತ್ತಿದೆ.

ವಿಕ್ಕಿ ಕೌಶಲ್​ ‘ಮಿಸ್ಟರ್​. ಲೆಲೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾದಲ್ಲಿ ರಣಬೀರ್​ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.  ಸದ್ಯ, ಈ ವಿಚಾರ ಚರ್ಚೆಯಲ್ಲಿದ್ದು, ಶೀಘ್ರವೇ ಘೋಷಣೆ ಆಗಲಿದೆ. ಆರಂಭದಲ್ಲಿ ಈ ಆಫರ್​ಅನ್ನು ಸಲ್ಮಾನ್​ ಖಾನ್​ಗೆ ನೀಡಿತ್ತು ಚಿತ್ರತಂಡ. ಆದರೆ, ರಣಬೀರ್​ ಹೆಸರನ್ನು ಸಲ್ಲು ಸೂಚಿಸಿದ್ದಾರೆ. ಈ ಮೂಲಕ ರಣಬೀರ್​ಗೆ ಈ ಆಫರ್​ ನೀಡಲಾಗಿದೆ.

ರಣಬೀರ್​ ಕಪೂರ್​ ಡ್ಯಾನ್ಸ್​ ಚೆನ್ನಾಗಿ ಮಾಡುತ್ತಾರೆ. ಅವರು ಹೆಜ್ಜೆ ಹಾಕುವುದು ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಇನ್ನು, ‘ಸಂಜು’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜತೆ ರಣಬೀರ್​ ಕೆಲಸ ಮಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಅವರು ಈ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಮೆಹಬೂಬಾ ಸ್ಟುಡಿಯೋದಲ್ಲಿ ಈ ಹಾಡನ್ನು ಶೂಟ್​ ಮಾಡಲಾಗುತ್ತಿದೆ. ಗಣೇಶ್​ ಆಚಾರ್ಯ ಅವರ ಕೊರೊಯೋಗ್ರಾಫಿ ಈ ಹಾಡಿಗೆ ಇರಲಿದೆ.

ವಿಕ್ಕಿ, ಕಿಯಾರಾ ಅಡ್ವಾಣಿ ಹಾಗೂ ಭೂಮಿ ಪಡ್ನೇಕರ್​ ‘ಮಿಸ್ಟರ್​. ಲೆಲೆ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಶಶಾಂಕ್​ ಖೈತಾನ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. 2022ರ ಆರಂಭದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಈ ವಿಶೇಷ ಹಾಡನ್ನು ಚಿತ್ರತಂಡ ರಿಲೀಸ್​ ಮಾಡಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಅಕ್ಕನ ಬಟ್ಟೆ ಕದ್ದು ಪ್ರೇಯಸಿಗೆ ಗಿಫ್ಟ್​ ಮಾಡುತ್ತಿದ್ದ ರಣಬೀರ್​ ಕಪೂರ್​; ಎಲ್ಲರ ಎದುರು ಸತ್ಯ ಬಾಯ್ಬಿಟ್ಟ ರಿಧಿಮಾ