ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು

‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಾಮನಾಗಿ ರಣಬೀರ್ ಕಪೂರ್ ಅವರು ದರ್ಶನ ನೀಡಿದ್ದಾರೆ. ಅಭಿಮಾನಿಗಳು ಈ ಟೀಸರ್ ಬಗ್ಗೆ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಟೀಸರ್ ನೋಡಿದ ಬಳಿಕ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರಿಗೆ ಇಷ್ಟವಾಗಿದೆ. ಆದರೆ ಹಲವರು ತಕರಾರು ತೆಗೆದಿದ್ದಾರೆ.

ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು
Ranbir Kapoor
Image Credit source: Prime Focus Studios

Updated on: Apr 02, 2026 | 3:15 PM

ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ (Ramayana) ಸಿನಿಮಾದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಆದರೆ, ಟೀಸರ್ (Ramayana Teaser) ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ರಣಬೀರ್ ಕಪೂರ್ (Ranbir Kapoor) ಅವರ ಶ್ರೀರಾಮನ ಅವತಾರ ನೆಟ್ಟಿಗರ ವಿಮರ್ಶೆಗೆ ಗುರಿಯಾಗಿದೆ. ಅಲ್ಲದೇ, ಈ ಟೀಸರ್​ನ ವಿಎಫ್​ಎಕ್ಸ್ ದೃಶ್ಯಗಳು ಸಮಾಧಾನಕರವಾಗಿಲ್ಲ ಎಂದು ಜನರು ಅಭಿಪ್ರಾಯ ತಿಳಿಸುತ್ತಿದ್ದಾರೆ.

ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಯಾದ ಈ ಟೀಸರ್‌ನಲ್ಲಿ ರಣಬೀರ್ ಕಪೂರ್ ರಾಜವಂಶಸ್ಥನಾಗಿ, ವೀರ ಯೋಧನಾಗಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಕುತೂಹಲ ಮೂಡಿಸಿದೆ. ಟೀಸರ್‌ನಲ್ಲಿ ಯಶ್ ಅವರ ಮುಖವನ್ನು ಪೂರ್ಣವಾಗಿ ತೋರಿಸದಿದ್ದರೂ, ಅವರ ಝಲಕ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.

ಆದರೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು? ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಹೆಚ್ಚಿನ ಸಂಖ್ಯೆಯ ಜನರು ಈ ಚಿತ್ರವನ್ನು ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ‘ಇದು ಆದಿಪುರುಷ್ 2.0 ರೀತಿ ಕಾಣುತ್ತಿದೆ, ಕೇವಲ ವಿಎಫ್‌ಎಕ್ಸ್ ಸ್ವಲ್ಪ ಸುಧಾರಿಸಿದೆ ಅಷ್ಟೇ’ ಎಂದು ಕಾಮೆಂಟ್ ಮಾಡಿದ್ದಾರೆ.

‘ಇದು ಫ್ಯಾನ್ ಮೇಡ್ ಟೀಸರ್ ರೀತಿ ಕಾಣುತ್ತಿದೆ. ಇದರಲ್ಲಿರುವ ದೃಶ್ಯಗಳು ಎಐ ಮೂಲಕ ಎಡಿಟ್ ಮಾಡಿದಂತಿವೆ’ ಎಂಬ ಅಸಮಾಧಾನದ ಕಮೆಂಟ್ ಕೂಡ ಬಂದಿದೆ.

ಎಕ್ಸ್‌ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಯೊಬ್ಬರು, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆದಿಪುರುಷ್ ಪಾರ್ಟ್ 2 ನೋಡುತ್ತಿದ್ದೇನೆ ಎಂದೆನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

2023ರಲ್ಲಿ ಬಿಡುಗಡೆಯಾಗಿದ್ದ ‘ಆದಿಪುರುಷ್’ ಚಿತ್ರವು ರಾಮಾಯಣವನ್ನು ತಪ್ಪಾಗಿ ಚಿತ್ರಿಸಿದೆ ಮತ್ತು ಸಂಭಾಷಣೆಗಳು ಕಳಪೆಯಾಗಿವೆ ಎಂಬ ಕಾರಣಕ್ಕೆ ಭಾರಿ ವಿರೋಧ ಎದುರಿಸಿತ್ತು. ಹನುಮಂತ ಮತ್ತು ರಾವಣನ ಪಾತ್ರಧಾರಿಗಳ ಲುಕ್ ಬಗ್ಗೆಯೂ ಜನರು ಆಕ್ರೋಶ ಹೊರಹಾಕಿದ್ದರು. ಈಗ ನಿತೇಶ್ ತಿವಾರಿ ಅವರ ‘ರಾಮಾಯಣ’ ಕೂಡ ಅದೇ ಹಾದಿ ಹಿಡಿಯುತ್ತಿದೆಯೇ ಎಂಬ ಆತಂಕ ಸಿನಿಪ್ರೇಮಿಗಳಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us