
ಹಲವು ದಶಕಗಳಿಂದಲೂ ಭಾರತೀಯ ಟಿವಿ ಮತ್ತು ಸಿನಿಮಾಗಳಲ್ಲಿ ರಾಮಾಯಣದ ಕತೆಯನ್ನು ಹೇಳುತ್ತಲೇ ಬರಲಾಗುತ್ತಿದೆ. ಪ್ರತಿಯೊಬ್ಬರೂ ಸಹ ಅವರದ್ದೇ ಆದ ಭಿನ್ನ ನಿರೂಪಣೆಯೊಟ್ಟಿಗೆ ಈ ಪೌರಾಣಿಕ ಕತೆಯನ್ನು ತೆರೆಗೆ ತರುತ್ತಲೇ ಇದ್ದಾರೆ. ಈಗ ನಿತೀಶ್ ತಿವಾರಿ ಹಾಗೂ ನಮಿತ್ ಮಲ್ಹೋತ್ರಾ ಅವರು ಒಟ್ಟಿಗೆ ಸೇರಿ, ಹಿಂದೆಂದೂ ಭಾರತೀಯ ತೆರೆಯ ಮೇಲೆ ತೋರಿಸದ ರೀತಿ ಭಾರಿ ಅದ್ಧೂರಿಯಾಗಿ, ದೃಶ್ಯ ವೈಭವದೊಂದಿಗೆ ನಿರ್ಮಾಣ ಮಾಡಿದ್ದಾರೆ. ಇಂದು ಬಿಡುಗಡೆ ಆಗಿರುವ ಟ್ರೈಲರ್ನ ಪ್ರತಿ ಫ್ರೇಮಿನಲ್ಲೂ ಅದು ಎದ್ದು ಕಾಣುತ್ತಿದೆ.
ಇಂದು ಎರಡು ಭಿನ್ನ ಟ್ರೈಲರ್ಗಳು ಬಿಡುಗಡೆ ಆಗಿದ್ದು, ಒಂದು ಅಂತರಾಷ್ಟ್ರೀಯ ಟ್ರೈಲರ್ ಮತ್ತು ಇನ್ನೊಂದು ಭಾರತೀಯ ಪ್ರೇಕ್ಷಕರಿಗೆ ಮಾಡಲಾದ ಟ್ರೈಲರ್. ಎರಡೂ ಟ್ರೈಲರ್ಗಳಲ್ಲಿ ಸಿನಿಮಾದ ದೃಶ್ಯ ವೈಭವ, ತಾಂತ್ರಿಕ ಅದ್ಧೂರಿತನ ಪ್ರತಿ ಫ್ರೇಂನಲ್ಲೂ ಎದ್ದು ಕಾಣುತ್ತಿದೆ. ‘ರಾಮಾಯಣ’ವನ್ನು ಭಾರತದಲ್ಲಿ ಈಗಾಗಲೇ ಹಲವು ಬಾರಿ ನಿರ್ಮಾಣ ಆಗಿದೆ. ಆದರೆ ಹಿಂದೆಂದೂ ನಿರ್ಮಾಣವಾಗದ ರೀತಿಯಲ್ಲಿ ‘ರಾಮಾಯಣ’ವನ್ನು ನಿತೀಶ್ ತಿವಾರಿ ಕಟ್ಟಿಕೊಟ್ಟಿದ್ದಾರೆ.
ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಯಶ್ ಅವರಂಥೂ ಅಬ್ಬರಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಇಂಟರ್ನ್ಯಾಷನಲ್ ಟ್ರೈಲರ್ನಲ್ಲಿ ಆಕ್ಷನ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ‘ರಾಮಾಯಣ’ದಲ್ಲಿ ಬರುವ ಕೆಲವು ಪ್ರಮುಖ ಯುದ್ಧ, ಆಕ್ಷನ್ ಸೀಕ್ವೆನ್ಸ್ನ ಝಲಕ್ಗಳನ್ನು ಇಂಟರ್ನ್ಯಾಷನಲ್ ಟ್ರೈಲರ್ನಲ್ಲಿ ತೋರಿಸಲಾಗಿದೆ. ಇನ್ನು ಭಾರತೀಯ ಪ್ರೇಕ್ಷಕರಿಗಾಗಿ ರಿಲೀಸ್ ಮಾಡಲಾಗಿರುವ ಟ್ರೈಲರ್ನಲ್ಲಿ ಆಕ್ಷನ್ ಜೊತೆಗೆ ಸೆಂಟಿಮೆಂಟ್ ಮತ್ತು ಭಕ್ತಿಯ ಅಂಶವನ್ನು ಸಹ ತೋರಿಸಲಾಗಿದೆ.
ಇದನ್ನೂ ಓದಿ:‘ರಾಮಾಯಣ’ ಸಿನಿಮಾಗೆ ಅಮೆರಿಕದಲ್ಲಿ ‘ಪಿಜಿ 13’ ಪ್ರಮಾಣಪತ್ರ: ಚಿತ್ರದ ಅವಧಿ 3 ಗಂಟೆ 15 ನಿಮಿಷ
ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಯಶ್, ರಣ್ಬೀರ್ ಕಪೂರ್ ಅವರೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಹಾಗೂ ಕೆಲವು ಇತರೆ ಪಾತ್ರಗಳು ಅಲ್ಲಲ್ಲಿ ಬಂದು ಹೋಗುತ್ತವೆ. ಆದರೆ ಕೆಲವು ಪ್ರಮುಖವಾದ ಪಾತ್ರಗಳನ್ನು ಟ್ರೈಲರ್ನಲ್ಲಿ ತೋರಿಸಲಾಗಿಲ್ಲ. ವಿಶೇಷವಾಗಿ ಆಂಜನೇಯ ಹಾಗೂ ಇನ್ನೂ ಕೆಲವು ಪಾತ್ರಗಳನ್ನು ಈಗ ರಿಲೀಸ್ ಆಗಿರುವ ಟ್ರೈಲರ್ನಲ್ಲಿ ತೋರಿಸಲಾಗಿಲ್ಲ.
ಇಂದು ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟರಾದ ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಹಲವು ತಾರೆಯರು, ಎಆರ್ ರೆಹಮಾನ್, ನಿತೀಶ್ ತಿವಾರಿ ಸೇರಿದಂತೆ ಇನ್ನೂ ಹಲವು ಅದ್ಭುತ ತಂತ್ರಜ್ಞರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ನಿರ್ಮಾಪಕ ನಿತೀಶ್ ತಿವಾರಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:29 pm, Thu, 15 October 26