ಸ್ಟಾರ್ ಹೀರೋಗಳ ಜೊತೆ ಕೇಳಿ ಬಂದಿತ್ತು ರಾಣಿ ಮುಖರ್ಜಿ ಹೆಸರು; ಕೊನೆಗೆ ನಿರ್ಮಾಪಕನ ಮದುವೆ ಆದ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Mar 21, 2025 | 7:48 AM

ರಾಣಿ ಮುಖರ್ಜಿ ಅವರ 47ನೇ ಜನ್ಮದಿನದಂದು, ಅವರ ಹಿಂದಿನ ಪ್ರೇಮಕಥೆಗಳನ್ನು ನೆನಪಿಸಿಕೊಳ್ಳೋಣ. ಆಮಿರ್ ಖಾನ್, ಗೋವಿಂದ, ಮತ್ತು ಅಭಿಷೇಕ್ ಬಚ್ಚನ್ ಜೊತೆಗೆ ಅವರ ಹೆಸರು ಕೇಳಿ ಬಂದಿತ್ತು. ಆದಿತ್ಯ ಚೋಪ್ರಾ ಅವರೊಂದಿಗಿನ ಅವರ ವಿವಾಹ ಮತ್ತು ಸುದ್ದಿಯಾದ ಸಂಬಂಧಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟಾರ್ ಹೀರೋಗಳ ಜೊತೆ ಕೇಳಿ ಬಂದಿತ್ತು ರಾಣಿ ಮುಖರ್ಜಿ ಹೆಸರು; ಕೊನೆಗೆ ನಿರ್ಮಾಪಕನ ಮದುವೆ ಆದ ನಟಿ
ರಾಣಿ
Follow us on

ನಟಿ ರಾಣಿ ಮುಖರ್ಜಿ (Rani Mukerji) ಅವರಿಗೆ ಇಂದು (ಮಾರ್ಚ್ 21) ಜನ್ಮದಿನ. ಅವರಿಗೆ ಈಗ 47ನೇ ವರ್ಷ ತುಂಬಿದೆ. ಅವರು ನಿರ್ಮಾಪಕ ಆದಿತ್ಯ ಚೋಪ್ರಾನ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ರಾಣಿ ಮುಖರ್ಜಿ ಹಾಗೂ ಆದಿತ್ಯ ಪ್ರೀತಿಸಿ ವಿವಾಹ ಆದವರು. ರಾಣಿ ಅವರನ್ನು ಒಲಿಸಿಕೊಳ್ಳಲು ಅನೇಕ ಸ್ಟಾರ್ ಹೀರೋಗಳು ಪ್ರಯತ್ನಿಸಿದ್ದರು. ಆದರೆ, ಆದಿತ್ಯ ಪಾಲಿಗೆ ಅವರು ಒಲಿದರು.  ರಾಣಿ ಹೆಸರು ಮೊದಲು ಸ್ಟಾರ್ ಹೀರೋಗಳ ಜೊತೆ ಕೇಳಿ ಬಂದಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಆಮಿರ್ ಖಾನ್

ರಾಣಿ ಮುಖರ್ಜಿ ಅವರು ಆಮಿರ್ ಖಾನ್ ಜೊತೆ ನಟಿಸಿದರು. ‘ಗುಲಾಮ್’ (1998) ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಯಿತು. ಅವರು ಪ್ರೀತಿಯಲ್ಲಿ ಇದ್ದರು ಎನ್ನಲಾಗಿತ್ತು. ಆಮಿರ್ ಖಾನ್ ಅವರು ಮೊದಲ ಪತ್ನಿ ರೀನಾ ದತ್​ಗೆ ಆಗತಾನೇ ವಿಚ್ಛೇದನ ನೀಡಿದ್ದರು. ಆಗ ಆಮಿರ್ ಹಾಗೂ ರಾಣಿಗೆ ಪ್ರೀತಿ ಆಗಿದೆ ಎನ್ನಲಾಗಿತ್ತು. ಆದರೆ, ತಾವು ಒಳ್ಳೆಯ ಗೆಳೆಯರು ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

ರಾಣಿ-ಗೋವಿಂದ

ಗೋವಿಂದ ಅವರು ಓರ್ವ ಯಶಸ್ವಿ ಹೀರೋ ಆಗಿದ್ದರು. ಆಗಿನ ಕಾಲದಲ್ಲಿ ಅವರಿಗೆ ಬೇಡಿಕೆ ಇತ್ತು. ಗೋವಿಂದ ಹಾಗೂ ರಾಣಿ ‘ಹದ್ ಕರ್ ದಿ ಅಪ್ನೆ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾ 2000ನೇ ಇಸ್ವಿಯಲ್ಲಿ ರಿಲೀಸ್ ಆಯಿತು. ರಾಣಿ ಹಾಗೂ ಗೋವಿಂದ ಕ್ಲೋಸ್ ಆಗಿದ್ದರು ಎನ್ನಲಾಗಿತ್ತು. ಅಷ್ಟೇ ಏಕೆ ರಾಣಿ ರೂಂನಲ್ಲಿ ಗೋವಿಂದ ನೈಟ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ
ಅಂಬರೀಷ್ ಜೊತೆ 27 ಸಿನಿಮಾ ಮಾಡಿದ್ದ ಖ್ಯಾತ ನಿರ್ದೇಶಕ ಎಟಿ ರಘು ನಿಧನ
ವಿಚ್ಛೇದನ ಪಡೆದ ದಿನ ಹಾಡಿನ ಮೂಲಕ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ ಧನಶ್ರೀ
ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ; ನೈಜ ಘಟನೆ ಹೇಳ ಹೊರಟ ಹರ್ಷಿಕಾ
ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್​ ಇರೋ ಸಿನಿಮಾನ ಮಿಸ್ ಮಾಡಬೇಡಿ

ರಾಣಿ ಮೇಲೆ ಗೋವಿಂದ ಸಾಕಷ್ಟು ಹಣ ಸುರಿದರು ಎಂಬ ವರದಿಗಳು ಇವೆ. ಗೋವಿಂದ ಪತ್ನಿ ಸುನಿತಾಗೆ ಈ ಬಗ್ಗೆ ಅಸಮಾಧಾನ ಇತ್ತು. ಸುನಿತಾಗೆ ವಿಚ್ಛೇದನ ನೀಡಿ ಅವರು ಹೊರ ಹೋಗುವ ನಿರ್ಧಾರಕ್ಕೆ ರೆಡಿ ಇರಲಿಲ್ಲ. ಹೀಗಾಗಿ, ರಾಣಿಯಿಂದ ದೂರ ಆದರು ಗೋವಿಂದ.

ಇದನ್ನೂ ಓದಿ: ತನ್ನದೇ ಹೆಸರನ್ನು ತಪ್ಪಾಗಿ ಕರೆದುಕೊಂಡು ರಣಬೀರ್; ಆಮಿರ್ ಖಾನ್ ರಿಯಾಕ್ಷನ್ ನೋಡಿ

ರಾಣಿ ಅಭಿಷೇಕ್ ಬಚ್ಚನ್

ರಾಣಿ ಮುಖರ್ಜಿ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಒಳ್ಳೆಯ ಬಾಂಡ್ ಇದೆ. ‘ಯುವ’, ‘ಬಂಟಿ ಔರ್ ಬಬ್ಲಿ’ ರೀತಿಯ ಸಿನಿಮಾನ ಇವರು ಮಾಡಿದ್ದಾರೆ. ಆ ಸಂದರ್ಭದಲ್ಲಿ ಐಶ್ವರ್ಯಾ ಹಿಂದೆ ಅಭಿಷೇಕ್ ಬಿದ್ದ ಕಾರಣ ಇವರ ಪ್ರೇಮ ಕಥೆ ಮುಂದುವರಿಯಲೇ ಇಲ್ಲ. ಅಭಿಷೇಕ್ ಅವರು ರಾಣಿನ ವಿವಾಹಕ್ಕೆ ಕರೆದೇ ಇರಲಿಲ್ಲ. ಇವರ ವಿವಾಹ ನಡೆದ ಸರಿಯಾಗಿ ಒಂದು ವರ್ಷಕ್ಕೆ ರಾಣಿ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.