ಕಳೆದ ವರ್ಷ ಡಿ.17ರಂದು ತೆರೆಕಂಡ ‘ಪುಷ್ಪ’ ಸಿನಿಮಾ (Pushpa Movie) ಮಾಡಿರುವ ಸಾಧನೆ ಒಂದೆರಡಲ್ಲ. ಬಾಕ್ಸ್ ಆಫೀಸ್ನಲ್ಲಿ 350 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿದ್ದು ಆ ಚಿತ್ರದ ಹೆಚ್ಚುಗಾರಿಕೆ. ಹಿಂದಿಗೆ ಡಬ್ ಆಗಿ ಬಾಲಿವುಡ್ ಸಿನಿಮಾಗಳಿಗೂ ಭರ್ಜರಿ ಪೈಪೋಟಿ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಈ ಚಿತ್ರ ಗಮನ ಸೆಳೆಯಿತು. ಇದಿಷ್ಟು ಹಣಕಾಸಿನ ಸಾಧನೆಯಾದರೆ, ಪ್ರಶಸ್ತಿ ಪಡೆಯುವಲ್ಲಿಯೂ ‘ಪುಷ್ಪ’ ಸಿನಿಮಾ ಹಿಂದೆ ಬಿದ್ದಿಲ್ಲ. ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ (Dadasaheb Phalke International Film Festival Awards) ಪಡೆದುಕೊಂಡು ಈ ಸಿನಿಮಾ ಬೀಗುತ್ತಿದೆ. ಅದೇ ರೀತಿ ಬಾಲಿವುಡ್ನ ಖ್ಯಾತ ನಟ ರಣಬೀರ್ ಸಿಂಗ್ (Ranveer Singh) ಕೂಡ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಶೇರ್ಷಾ’, ವಿಕ್ಕಿ ಕೌಶಲ್ ಅಭಿನಯದ ‘ಸರ್ದಾರ್ ಉದ್ಧಮ್’ ಸೇರಿದಂತೆ ಹಲವು ಸಿನಿಮಾಗಳು ಅವಾರ್ಡ್ ಪಡೆದಿವೆ. ಜೊತೆಗೆ ವೆಬ್ ಸಿರೀಸ್ ಮತ್ತು ಧಾರಾವಾಹಿಗಳಿಗೂ ಮನ್ನಣೆ ಸಿಕ್ಕಿದೆ. 2022ರ ‘ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಪಡೆದ ಎಲ್ಲರಿಗೂ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ರಣವೀರ್ ಸಿಂಗ್ ಅವರು ನಟಿಸಿದ್ದ ‘83’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಅಂದುಕೊಂಡ ಮಟ್ಟಕ್ಕೆ ಈ ಚಿತ್ರ ಗಳಿಕೆ ಮಾಡಲಿಲ್ಲ. ವಿಮರ್ಶೆಯ ದೃಷ್ಟಿಯಿಂದ ‘83’ ಸಿನಿಮಾದ ಗೆಲುವು ದೊಡ್ಡದು. ಅದೇ ರೀತಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಅವರ ಅಭಿನಯಕ್ಕೆ ಜನರು ಬಹುಪರಾಕ್ ಎಂದಿದ್ದಾರೆ. ಈಗ ಅವರಿಗೆ ‘ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಕೂಡ ಸಿಕ್ಕಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಬೇರೆ ಯಾರಿಗೆಲ್ಲ ಈ ಪ್ರಶಸ್ತಿ ಸಿಕ್ಕಿದೆ ಎಂಬುದರ ಪೂರ್ತಿ ಲಿಸ್ಟ್ ಇಲ್ಲಿದೆ..
ವರ್ಷದ ಸಿನಿಮಾ: ಪುಷ್ಪ
ಅತ್ಯುತ್ತಮ ಸಿನಿಮಾ: ಶೇರ್ಷಾ
ಅತ್ಯುತ್ತಮ ನಟ: ರಣವೀರ್ ಸಿಂಗ್
ಅತ್ಯುತ್ತಮ ನಟಿ ಕೃತಿ ಸನೋನ್
ಅತ್ಯುತ್ತಮ ನಿರ್ದೇಶಕ: ಕೆನ್ ಘೋಷ್
ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್
ಅತ್ಯುತ್ತಮ ಪೋಷಕ ನಟ: ಸತೀಶ್ ಕೌಶಿಕ್
ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ
ಅತ್ಯುತ್ತಮ ಖಳ ನಟ: ಆಯುಷ್ ಶರ್ಮಾ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್ ಉದ್ಧಮ್
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್ ಮಲ್ಹೋತ್ರ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ
ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ
ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್
ಅತ್ಯುತ್ತಮ ಹೊಸ ನಟ: ಅಹಾನ್ ಶೆಟ್ಟಿ
ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್ ರೌಂಡ್
ಅತ್ಯುತ್ತಮ ವೆಬ್ ಸಿರೀಸ್: ಕ್ಯಾಂಡಿ
ವೆಬ್ ಸಿರೀಸ್ನಲ್ಲಿ ಅತ್ಯುತ್ತಮ ನಟ: ಮನೋಜ್ ಭಾಜಪೇಯಿ
ವೆಬ್ ಸಿರೀಸ್ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್
ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ
ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್ ಶೇಖ್
ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ
ಕಿರುತೆರೆಯ ಭರವಸೆಯ ನಟ: ಧೀರಜ್ ಧೂಪರ್
ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ
ಅತ್ಯುತ್ತಮ ಕಿರುಚಿತ್ರ: ಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್
ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ
ಇದನ್ನೂ ಓದಿ:
83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್ಪ್ರಿಯರ ಎಮೋಷನ್, ವಿಶ್ವಕಪ್ ಗೆಲುವಿನ ಹೊಸ ಸೆಲೆಬ್ರೇಷನ್
Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ