ನಟ ರಣವೀರ್ ಸಿಂಗ್ (Ranveer Singh ) ಅವರಿಗೆ ಇಂದು (ಜುಲೈ 6) ಜನ್ಮದಿನದ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯದ ಮಹಾಪೂರ ಹರಿದುಬರುತ್ತಿದೆ. ಅನೇಕ ಸೆಲೆಬ್ರಿಟಿಗಳು, ಫ್ಯಾನ್ಸ್ ರಣವೀರ್ ಸಿಂಗ್ಗೆ ವಿಶ್ ತಿಳಿಸುತ್ತಿದ್ದಾರೆ. ಬರ್ತ್ಡೇಗೂ ಎರಡು ದಿನ ಮೊದಲು ಅವರ ಮುಂದಿನ ಸಿನಿಮಾ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Kii Prem Kahaani) ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಇದು ಫ್ಯಾನ್ಸ್ ಖುಷಿ ಹೆಚ್ಚಿಸಿದೆ. ಈ ಚಿತ್ರದ ಮೂಲಕ ಅವರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ರಣವೀರ್ ಸಿಂಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2010ರಲ್ಲಿ. ‘ಬ್ಯಾಂಡ್ ಬಾಜ ಭಾರತ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ನಂತರ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. 2013ರಲ್ಲಿ ರಿಲೀಸ್ ಆದ ‘ರಾಮ್ ಲೀಲಾ’, 2014ರಲ್ಲಿ ಬಿಡುಗಡೆ ಕಂಡ ‘ಗುಂಡೇ’ ಸಿನಿಮಾ ಮೂಲಕ ಅವರು ಫೇಮಸ್ ಆದರು.
2015ರಲ್ಲಿ ತೆರೆಗೆ ಬಂದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಬಾಜಿರಾವ್ ಮಸ್ತಾನಿ’ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಖ್ಯಾತಿ ಹೆಚ್ಚಿತು. 2016ರಲ್ಲಿ ರಿಲೀಸ್ ಆದ ‘ಪದ್ಮಾವತ್’ ಕೂಡ ಹಿಟ್ ಆಯಿತು. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.
2019ರಲ್ಲಿ ರಿಲೀಸ್ ಆದ ‘ಗಲ್ಲಿ ಬಾಯ್’ ಚಿತ್ರವೇ ಕೊನೆ. ಈ ಚಿತ್ರದ ಮೂಲಕ ಅವರು ಗೆದ್ದರು. ‘83’ ಸಿನಿಮಾ ವಿಮರ್ಶೆಯಲ್ಲಿ ಗೆದ್ದರೂ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಲೇ ಇಲ್ಲ. ‘ಜಯೇಶ್ಭಾಯ್ ಜೋರ್ದಾರ್’, ‘ಸರ್ಕಸ್’ ಸಿನಿಮಾಗಳು ಸೋತವು. ಈಗ ಅವರು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: Alia Bhatt: ಗಮನ ಸೆಳೆದ ಆಲಿಯಾ ಭಟ್-ರಣವೀರ್ ಸಿಂಗ್ ಕೆಮಿಸ್ಟ್ರಿ; ಮರುಕಳಿಸುತ್ತಾ ‘ಗಲ್ಲಿ ಬಾಯ್’ ಇತಿಹಾಸ?
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಲಕ ರಣವೀರ್ ಸಿಂಗ್ ಗೆಲ್ಲುವ ಭರವಸೆಯಲ್ಲಿದ್ದಾರೆ. ಈ ಚಿತ್ರ ಸಖತ್ ಅದ್ದೂರಿಯಾಗಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ಜುಲೈ 28ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಕರಣ್ ಜೋಹರ್ ಅವರ ನಿರ್ದೇಶನ ಈ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:03 am, Thu, 6 July 23