- Kannada News Photo gallery Alia Bhatt And Ranveer Singh Chemistry In Rocky Aur Rani Kii Prem Kahaani Movie In Stills
Alia Bhatt: ಗಮನ ಸೆಳೆದ ಆಲಿಯಾ ಭಟ್-ರಣವೀರ್ ಸಿಂಗ್ ಕೆಮಿಸ್ಟ್ರಿ; ಮರುಕಳಿಸುತ್ತಾ ‘ಗಲ್ಲಿ ಬಾಯ್’ ಇತಿಹಾಸ?
ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ.
Updated on: Jun 21, 2023 | 6:30 AM

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್-ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಗಮನ ಸೆಳೆದಿದೆ

ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅವರು ಈ ಮೊದಲು ‘ಗಲ್ಲಿ ಬಾಯ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಂಡಿತ್ತು. ಈಗ ಇವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕಾಗಿ ಈ ಜೋಡಿ ಒಂದಾಗಿದೆ.

ಈ ಚಿತ್ರಕ್ಕೆ ಕರಣ್ ಜೋಹರ್ ನಿರ್ದೇಶನ ಇದೆ. ಅವರ ಸಿನಿಮಾಗಳಲ್ಲಿ ಮ್ಯೂಸಿಕ್ಗೆ ಹೆಚ್ಚು ಆದ್ಯತೆ ಇರುತ್ತದೆ. ಚಿತ್ರದ ಟೀಸರ್ ಹಾಡಿನ ರೂಪದಲ್ಲೇ ಮೂಡಿ ಬಂದಿದೆ.

ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ‘ಗಲ್ಲಿ ಬಾಯ್’ ರೀತಿ ಈ ಸಿನಿಮಾ ಕೂಡ ಹಿಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಆಲಿಯಾ ಭಟ್ ಅವರು ಪ್ರೆಗ್ನೆಂಟ್ ಆಗಿದ್ದ ಕಾರಣಕ್ಕೆ ಈ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹಾಕಲಾಯಿತು. ಜುಲೈ 28ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಆಗುವ ನಿರೀಕ್ಷೆ ಇದೆ.




