ಮಗು ಹುಟ್ಟೋ ಸಮಯದಲ್ಲಿ ಇದೆಂಥಾ ಜಗಳ? ಅನುಮಾನ ಮೂಡಿಸಿತು ರಣವೀರ್ ನಡೆ
ದೀಪಿಕಾ ಹಾಗೂ ರಣವೀರ್ 2018ರಲ್ಲಿ ದೂರದ ಇಟಲಿಯಲ್ಲಿ ವಿವಾಹ ಆದರು. ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಇವರ ವಿವಾಹ ನಡೆಯಿತು. ಆ ಬಳಿಕ ಇವರು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಮದುವೆ ಫೋಟೋಗಳನ್ನು ರಣವೀರ್ ಸಿಂಗ್ ಇಬ್ಬರೂ ಡಿಲೀಟ್/ಹೈಡ್ ಮಾಡಿದ್ದಾರೆ.
ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ ತುಂಬಾನೇ ಅನ್ಯೋನ್ಯವಾಗಿದ್ದಾರೆ. ಇಬ್ಬರ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳು ಬಂದರೂ ಅದನ್ನು ಸರಿ ಮಾಡಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಈಗ ರಣವೀರ್ ಸಿಂಗ್ ನಡೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅವರು ಇನ್ಸ್ಟಾಗ್ರಾಮ್ ಖಾತೆಯಿಂದ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗೇಕೆ ಅನ್ನೋ ಪ್ರಶ್ನೆಯನ್ನು ಅನೇಕರು ಕೇಳಿಕೊಳ್ಳುತ್ತಿದ್ದಾರೆ. ಇಬ್ಬರ ಮಧ್ಯೆ ಗಂಭೀರವಾದ ಜಗಳ ಆಯಿತೇ ಎನ್ನುವ ಅನುಮಾನ ಕೂಡ ಮೂಡಿದೆ. ದೀಪಿಕಾ ಈಗ ಪ್ರೆಗ್ನೆಂಟ್. ಮಗು ಜನಿಸೋ ಸಂದರ್ಭದಲ್ಲಿ ಇವರು ಕಿತ್ತಾಡಿಕೊಂಡರೇ ಎಂದು ಫ್ಯಾನ್ಸ್ ಪ್ರಶ್ನೆ ಕೇಳಿಕೊಳ್ಳುತ್ತಿದ್ದಾರೆ.
ದೀಪಿಕಾ ಹಾಗೂ ರಣವೀರ್ 2018ರಲ್ಲಿ ದೂರದ ಇಟಲಿಯಲ್ಲಿ ವಿವಾಹ ಆದರು. ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಇವರ ವಿವಾಹ ನಡೆಯಿತು. ಆ ಬಳಿಕ ಇವರು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಕಳೆದ ವರ್ಷ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ರಿಲೀಸ್ ಮಾಡಿದ್ದರು. ಈಗ ಮದುವೆ ಫೋಟೋಗಳನ್ನು ರಣವೀರ್ ಸಿಂಗ್ ಇಬ್ಬರೂ ಡಿಲೀಟ್/ಹೈಡ್ ಮಾಡಿದ್ದಾರೆ.
ಇದರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಮಧ್ಯೆ ಏನಾದರೂ ಗಂಭೀರ ಜಗಳ ಆಯಿತೇ ಎನ್ನುವ ಅನುಮಾನ ಮೂಡಿದೆ. ಖುಷಿಯ ವಿಚಾರ ಎಂದರೆ ಈ ಜೋಡಿ ಒಟ್ಟಾಗಿ ಇರುವ ಫೋಟೋಗಳು ಹಾಗೆಯೇ ಇವೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಸೆಲೆಬ್ರಿಟಿಗಳು ನಡೆದುಕೊಳ್ಳೋ ರೀತಿ ಸಾಕಷ್ಟು ಚರ್ಚೆ ಹುಟ್ಟುಹಾಕುತ್ತದೆ. ಈಗ ರಣವೀರ್ ಸಿಂಗ್ ಅವರು ನಡೆದುಕೊಂಡಿದ್ದು ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಪರ ಪ್ರಚಾರ ಮಾಡಿದ್ರಾ ರಣವೀರ್ ಸಿಂಗ್? ಕೇಸ್ ದಾಖಲಿಸಿದ ನಟ
ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಅವರು ಪತ್ನಿಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರು ‘ಕಲ್ಕಿ 2898 ಎಡಿ’ ಚಿತ್ರದ ಸಿನಿಮಾ ಕೆಲಸ ಪೂರ್ಣಗೊಳಿಸಿಕೊಟ್ಟಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ವಿಡಿಯೋ ಸಂದರ್ಶನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.