ಕಾಂಗ್ರೆಸ್ ಪರ ಪ್ರಚಾರ ಮಾಡಿದ್ರಾ ರಣವೀರ್ ಸಿಂಗ್? ಕೇಸ್ ದಾಖಲಿಸಿದ ನಟ

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಹಲವು ಕಡೆಗಳಲ್ಲಿ ನಟರನ್ನೇ ಹೋಲುವವರನ್ನು ಕರೆದುಕೊಂಡು ಹೋಗಿ ಪ್ರಚಾರ ಮಾಡಲಾಗುತ್ತಿದೆ. ಅದರ ಜೊತೆಗೆ ಕೆಲವರು ಡೀಪ್​ಫೇಕ್ ವಿಡಿಯೋ ಮಾಡಿದ್ದಾರೆ. ಎಎನ್​ಐ ನ್ಯೂಸ್ ಚಾನೆಲ್​ಗೆ ನೀಡಿದ ಸಂದರ್ಶನವನ್ನು ಕೆಲವರು ತಪ್ಪಾಗಿ ಬಳಸಿಕೊಂಡಿದ್ದಾರೆ.

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ರಾ ರಣವೀರ್ ಸಿಂಗ್? ಕೇಸ್ ದಾಖಲಿಸಿದ ನಟ
ರಣವೀರ್ ಸಿಂಗ್
Follow us
|

Updated on: Apr 22, 2024 | 2:19 PM

ಇತ್ತೀಚೆಗೆ ಡೀಪ್​ಫೇಕ್ ವಿಡಿಯೋಗಳ ಹಾವಳಿ ಜೋರಾಗಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್​ಫೇಕ್ ವಿಡಿಯೋ ವೈರಲ್ ಆಗಿ ಸಾಕಷ್ಟು ಸುದ್ದಿ ಆಗಿತ್ತು. ಈಗ ನಟ ರಣವೀರ್ ಸಿಂಗ್ ಅವರ ಫೇಕ್ ವಿಡಿಯೋ ಮಾಡಲಾಗಿದೆ. ರಾಜಕೀಯ ಪಕ್ಷ ಒಂದರ ಪ್ರಚಾರ ಮಾಡುತ್ತಿರುವ ರೀತಿಯಲ್ಲಿ ಈ ವಿಡಿಯೋ ಇದೆ. ಈ ಸಂಬಂಧ ರಣವೀರ್ ಸಿಂಗ್ ತಂಡದವರು ಕೇಸ್ ದಾಖಲು ಮಾಡಿದ್ದಾರೆ.

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಹಲವು ಕಡೆಗಳಲ್ಲಿ ನಟರನ್ನೇ ಹೋಲುವವರನ್ನು ಕರೆದುಕೊಂಡು ಹೋಗಿ ಪ್ರಚಾರ ಮಾಡಲಾಗುತ್ತಿದೆ. ಅದರ ಜೊತೆಗೆ ಕೆಲವರು ಡೀಪ್​ಫೇಕ್ ವಿಡಿಯೋ ಮಾಡಿದ್ದಾರೆ. ಎಎನ್​ಐ ನ್ಯೂಸ್ ಚಾನೆಲ್​ಗೆ ನೀಡಿದ ಸಂದರ್ಶನವನ್ನು ಕೆಲವರು ತಪ್ಪಾಗಿ ಬಳಸಿಕೊಂಡಿದ್ದಾರೆ. ಎಐ ಟೂಲ್ ಬಳಕೆ ಮಾಡಿ ರಣವೀರ್ ಸಿಂಗ್ ಧ್ವನಿಯನ್ನು ಅನುಕರಿಸಿದ್ದಾರೆ.

ನಿರುದ್ಯೋಗ ಹಾಗೂ ಹಣ ದುಬ್ಬರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಣವೀರ್ ಸಿಂಗ್ ಟೀಕಿಸುತ್ತಿರುವ ರೀತಿಯಲ್ಲಿ ವಿಡಿಯೋ ಇದೆ. ಕೊನೆಯಲ್ಲಿ ಅವರು ಕಾಂಗ್ರೆಸ್​ಗೆ ಮತನೀಡಿ ಎಂದು ಕೂಡ ಕೇಳುತ್ತಾರೆ. ಇದನ್ನು ಕಾಂಗ್ರೆಸ್ ಪಕ್ಷ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದೆ. ಇದು ರಣವೀರ್ ಸಿಂಗ್ ಗಮನಕ್ಕೂ ಬಂದಿದೆ. ಅವರು ‘ಡೀಫೇಕ್ ವಿಡಿಯೋ ಬಗ್ಗೆ ಎಚ್ಚರದಿಂದ ಇರಿ’ ಎಂದು ಕೋರಿದ್ದಾರೆ.

ಸದ್ಯ ರಣವೀರ್ ಸಿಂಗ್ ಅವರು ಕೇಸ್ ದಾಖಲು ಮಾಡಿದ್ದಾರೆ. ‘ನಾವು ಕೇಸ್ ದಾಖಲು ಮಾಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಎಫ್​ಐಆರ್ ದಾಖಲಾಗಿದೆ’ ಎಂದು ರಣವೀರ್ ಸಿಂಗ್ ತಂಡ ಪ್ರತಿಕ್ರಿಯಿಸಿದೆ. ಈ ಮೊದಲು ಬಾಲಿವುಡ್ ನಟ ಆಮಿರ್ ಖಾನ್​ಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಆಮಿರ್ ಖಾನ್ ತಂಡದವರು ಸ್ಪಷ್ಟನೆ ನೀಡಿದ್ದರು. ’35 ವರ್ಷಗಳ ಕರಿಯರ್​ನಲ್ಲಿ ಆಮಿರ್ ಖಾನ್ ಅವರು ಎಂದಿಗೂ ರಾಜಕೀಯ ಪಕ್ಷಕ್ಕಾಗಿ ಪ್ರಚಾರ ಮಾಡಿಲ್ಲ. ಅವರು ಮತದಾನ ಮಾಡುವಂತೆ ಕೇಳಿಕೊಂಡಿದ್ದು ಇದೆ. ಆದರೆ, ಪಕ್ಷದ ಪರ ಅವರು ನಿಂತಿಲ್ಲ’ ಎಂದು ಆಮಿರ್ ಖಾನ್ ತಂಡದವರು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ರಾಜ್ ಕುಂದ್ರಾ ಗೆಟಪ್​ನಲ್ಲಿ ಏರ್​ಪೋರ್ಟ್​ಗೆ ಬಂದ ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ಸದ್ಯ ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. 2025ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?