ಪಾತ್ರ ಕೊಡದ್ದಕ್ಕೆ ಸಿಟ್ಟು; ಯಶಸ್ಸು ಕೊಟ್ಟ ಬನ್ಸಾಲಿ ಮರೆತ ರಣವೀರ್ ಸಿಂಗ್

ರಣವೀರ್ ಸಿಂಗ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ನಡುವಿನ ದೀರ್ಘಕಾಲದ ಸ್ನೇಹ ಮುರಿದು ಬಿದ್ದಿದೆ ಎಂಬ ವರದಿ ಹೊರಬಿದ್ದಿದೆ. 'ಲವ್ ಆ್ಯಂಡ್ ವಾರ್' ಚಿತ್ರದಲ್ಲಿ ರಣವೀರ್‌ಗೆ ಎರಡನೇ ನಾಯಕನ ಪಾತ್ರ ನೀಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ರಣವೀರ್ ಅವರು ಜನ್ಮದಿನಕ್ಕೂ ಬನ್ಸಾಲಿ ಅವರನ್ನು ಆಹ್ವಾನಿಸಿಲ್ಲ ಎಂಬ ಮಾಹಿತಿಯೂ ಇದೆ.

ಪಾತ್ರ ಕೊಡದ್ದಕ್ಕೆ ಸಿಟ್ಟು; ಯಶಸ್ಸು ಕೊಟ್ಟ ಬನ್ಸಾಲಿ ಮರೆತ ರಣವೀರ್ ಸಿಂಗ್
ರಣವೀರ್-ಭನ್ಸಾಲಿ
Updated By: ರಾಜೇಶ್ ದುಗ್ಗುಮನೆ

Updated on: Jul 15, 2025 | 7:55 AM

ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು ಎಂಬುದು ಅನೇಕರಿಗೆ ಗೊತ್ತಿರೋ ವಿಚಾರ. ಇವರು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರು. ಆದರೆ, ಈಗ ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ವರದಿ ಆಗಿದೆ. ಇವರ ಮಧ್ಯೆ ಮೊದಲಿನ ಫ್ರೆಂಡ್​ಶಿಪ್ ಉಳಿದಿಲ್ಲವಂತೆ. ಇದಕ್ಕೆ ಕಾರಣ ‘ಲವ್ ಆ್ಯಂಡ್ ವಾರ್’ ಸಿನಿಮಾ (Love And War) ಎಂದು ವರದಿ ಆಗಿದೆ. ಹಿರಿಯ ಪತ್ರಕರ್ತ ಶುಭಾಶ್ ಕೆ ಝಾ ಪ್ರಕಾರ ರಣವೀರ್ ಹಾಗೂ ಬನ್ಸಾಲಿ ಒಂದಾಗಲು ಸಾಧ್ಯವಿಲ್ಲವಂತೆ.

ರಣವೀರ್ ಸಿಂಗ್ ಅವರ ವೃತ್ತಿ ಜೀವನವು ಇಷ್ಟು ಉನ್ನತ ಮಟ್ಟಕ್ಕೆ ಹೋಗಲು ಬನ್ಸಾಲಿ ಅವರ ಕೊಡುಗೆ ಕೂಡ ಇದೆ. ರಣವೀರ್ ನಟನೆಯ ‘ರಾಮ್ ಲೀಲಾ’, ‘ಪದ್ಮಾವತ್’ ಹಾಗೂ ‘ಬಾಜಿರಾವ್ ಮಸ್ತಾನಿ’ ಚಿತ್ರಕ್ಕೆ ಬನ್ಸಾಲಿ ನಿರ್ದೇಶನ ಇದೆ. ಈ ಚಿತ್ರಗಳು ಸೂಪರ್ ಹಿಟ್ ಆದವು. ಈಗ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ನಟನೆಯ ‘ಲವ್ ಆ್ಯಂಡ್’ ವಾರ್ ಚಿತ್ರದಲ್ಲಿ ವಿಕ್ಕಿ ಬದಲಿಗೆ ರಣವೀರ್​ಗೆ ಆಫರ್ ನೀಡಲಾಗಿತ್ತು. ರಣವೀರ್ ಅವರು ಇಲ್ಲಿ ಹೀರೋ ಅಲ್ಲ, ಬದಲಿಗೆ ಎರಡನೇ ಹೀರೋ. ಈ ವಿಚಾರ ರಣವೀರ್​ಗೆ ಕೋಪ ತರಿಸಿದೆ. ಈ ಕಾರಣಕ್ಕೆ ಬನ್ಸಾಲಿನ ಅವರು ಬರ್ತ್​ಡೇಗೂ ಕರೆದಿಲ್ಲ ಎನ್ನಲಾಗಿದೆ.

ಜುಲೈ 6ರಂದು ರಣವೀರ್ ಸಿಂಗ್ ಅವರು 40ನೇ ವರ್ಷದ ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಆಪ್ತರು ಹಾಗೂ ಕುಟುಂಬದವರು ಭಾಗಿ ಆಗಿದ್ದರು. ಆದರೆ, ರಣವೀರ್ ಸಿಂಗ್ ಅವರು ಭನ್ಸಾಲಿ ಅವರಿಗೆ ಆಮಂತ್ರಣ ನೀಡಿಯೇ ಇಲ್ಲ ಎನ್ನಲಾಗಿದೆ. ಹೀಗಾಗಿ, ಬನ್ಸಾಲಿ ಅವರು ರಣವೀರ್ ಆಪ್ತರ ಸ್ಥಾನದಿಂದ ದೂರ ಆಗಿದ್ದಾರೆ.

ಇದನ್ನೂ ಓದಿ
ರಶ್ಮಿಕಾ ಸಿನಿಮಾ ಪ್ರಚಾರಕ್ಕೆ ಸಹಾಯ ಮಾಡಲಿದ್ದಾರೆ ಜೂ.ಎನ್​ಟಿಆರ್​-ಹೃತಿಕ್
‘ರಾಮಾಯಣ’ ಬಜೆಟ್ ನಾಲ್ಕು ಸಾವಿರ ಕೋಟಿ; ಯಶ್ ಪಾಲೆಷ್ಟು?
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ
ಬಿ ಸರೋಜಾದೇವಿ ನಿಧನ; ಆರೂವರೆ ದಶಕ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ತಾರೆ

ಇದನ್ನೂ ಓದಿ: ಬನ್ಸಾಲಿ ಜೊತೆಗಿನ ಸಿನಿಮಾಗಾಗಿ ಸಿಕ್ಕಾಪಟ್ಟೆ ಸ್ಲಿಮ್ ಆದ ರಣಬೀರ್ ಕಪೂರ್, ವಿಕ್ಕಿ ಕೌಶಲ್

ಸಂಜಯ್ ಲೀಲಾ ಬನ್ಸಾಲಿ ಅವರು ‘ಲವ್ ಆ್ಯಂಡ್ ವಾರ್’ ಚಿತ್ರಕ್ಕೆ ಹೀರೋ ಸ್ಥಾನವನ್ನು ತಮಗೇ ನೀಡಬೇಕು ಎಂದು ರಣವೀರ್ ಭಾವಿಸಿದ್ದರು. ಆದರೆ, ಬನ್ಸಾಲಿ ಅವರು ಎರಡನೇ ಹೀರೋ ಆಗಿ ಸ್ಥಾನ ಕೊಟ್ಟಿದ್ದು ನಟನಿಗೆ ಬೇಸರ ಆಗಿದೆ. ಸದ್ಯ ರಣವೀರ್ ಸಿಂಗ್ ಅವರು ಆದಿತ್ಯ ಧಾರ್ ‘ಧುರಂಧರ್’ ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆ. ಸಂಜತ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಅರ್ಜುನ್ ರಾಮ್​ಪಾಲ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ವೈಮನಸ್ಸಿನ ವಿಚಾರದಲ್ಲಿ ಅವರು ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Tue, 15 July 25