Rashmika Mandanna: ಅಕ್ಟೋಬರ್​ನಲ್ಲಿ ‘ಗುಡ್​ಬೈ’ ಹೇಳಲಿದ್ದಾರೆ ರಶ್ಮಿಕಾ ಮಂದಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Jul 23, 2022 | 4:16 PM

ರಶ್ಮಿಕಾ ಮಂದಣ್ಣ ಅವರು ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದರು. ನಂತರ ಅವರ ಖ್ಯಾತಿ ಹೆಚ್ಚುತ್ತಲೇ ಹೋಯಿತು. ಟಾಲಿವುಡ್​, ಕಾಲಿವುಡ್​ನಲ್ಲಿ ಮಿಂಚಿದರು. ಶೀಘ್ರದಲ್ಲೇ ಅವರ ಮೊದಲ ಹಿಂದಿ ಚಿತ್ರ ರಿಲೀಸ್ ಆಗಲಿದೆ.

Rashmika Mandanna: ಅಕ್ಟೋಬರ್​ನಲ್ಲಿ ‘ಗುಡ್​ಬೈ’ ಹೇಳಲಿದ್ದಾರೆ ರಶ್ಮಿಕಾ ಮಂದಣ್ಣ
ಗುಡ್​ಬೈ ತಂಡ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಒಂದಾದಮೇಲೆ ಒಂದರಂತೆ ಹೊಸಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ನಟನೆಯ ‘ಗುಡ್​ಬೈ’ ಚಿತ್ರ (GoodBye) ರಿಲೀಸ್​ಗೆ ರೆಡಿ ಇದೆ. ಇತ್ತೀಚೆಗಷ್ಟೇ ಶೂಟಿಂಗ್ ಪೂರ್ಣಗೊಳಿಸಿದ್ದ ತಂಡ, ಈಗ ರಿಲೀಸ್ ದಿನಾಂಕವನ್ನು ಲಾಕ್ ಮಾಡಿದೆ. ಅಕ್ಟೋಬರ್ 7ರಂದು ಈ ಚಿತ್ರ ತೆರೆಗೆ ಬರಲಿದೆ. ಈ ವಿಚಾರ ಕೇಳಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಖುಷಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದರು. ನಂತರ ಅವರ ಖ್ಯಾತಿ ಹೆಚ್ಚುತ್ತಲೇ ಹೋಯಿತು. ಟಾಲಿವುಡ್​, ಕಾಲಿವುಡ್​ನಲ್ಲಿ ಮಿಂಚಿದರು. ಈಗ ಮಲಯಾಳಂ ಹಾಗೂ ಹಿಂದಿ ಚಿತ್ರರಂಗಕ್ಕೆ ಅವರು ಕಾಲಿಟ್ಟಾಗಿದೆ. ಶೀಘ್ರದಲ್ಲೇ ಅವರ ಮೊದಲ ಹಿಂದಿ ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ
ಲಂಡನ್​ನಲ್ಲಿ ಮಹೇಶ್ ಬಾಬು ಮಗನಿಗೆ ಶಿಕ್ಷಣ; ಇಂಗ್ಲೆಂಡ್​​ಗೆ ಹಾರಲಿದೆ ಫ್ಯಾಮಿಲಿ
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿದ್ದಾರ್ಥ್ ಮಲ್ಹೋತ್ರ ಜತೆಗೆ ನಟಿಸಿದ ‘ಮಿಷನ್ ಮಜ್ನು’ ಸಿನಿಮಾ ಈಗಾಗಲೇ ತೆರೆಗೆ ಬರಬೇಕಿತ್ತು. ಆದರೆ, ಈ ಸಿನಿಮಾ ಕೆಲಸಗಳು ವಿಳಂಬವಾಗಿವೆ. ಈ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಲೇ ಇದೆ. ಹೀಗಾಗಿ, ಈ ಚಿತ್ರಕ್ಕಿಂತ ಮೊದಲು ‘ಗುಡ್​ಬೈ’ ತೆರೆಗೆ ಬರುತ್ತಿದೆ. ಇದು ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರ ಆಗಲಿದೆ.

ಅಮಿತಾಭ್ ಬಚ್ಚನ್ ಅವರ ಜತೆ ನಟಿಸಬೇಕು ಎಂಬುದು ಅನೇಕರ ಕನಸು. ಈ ಕನಸು ರಶ್ಮಿಕಾ ಮಂದಣ್ಣ ಪಾಲಿಗೆ ನನಸಾಗಿದೆ. ಸೆಟ್​​ನಲ್ಲಿ ಅಮಿತಾಭ್ ಜತೆ ಕಳೆದ ಸಮಯ ಹಾಗೂ ಅವರ ಜತೆಗಿನ ಶೂಟಿಂಗ್ ಅನುಭವದ ಬಗ್ಗೆ ರಶ್ಮಿಕಾ ಮಂದಣ್ಣ ಈ ಮೊದಲು ಮಾಹಿತಿ ಹಂಚಿಕೊಂಡಿದ್ದರು. ಅಷ್ಟು ಎತ್ತರಕ್ಕೆ ಬೆಳೆದರೂ ಅಮಿತಾಭ್ ಸೆಟ್​ನಲ್ಲಿ ತುಂಬಾನೇ ಸಿಂಪಲ್ ಆಗಿ ಇರುತ್ತಿದ್ದರು ಎಂದು ರಶ್ಮಿಕಾ ಮಂದಣ್ಣ ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ಅಬುಧಾಬಿಯಲ್ಲಿ ರಶ್ಮಿಕಾ ಮಂದಣ್ಣ: ಮುಖದಲ್ಲಿ ಉಕ್ಕಿದ ಖುಷಿಗೆ ಕಾರಣ ತಿಳಿಸಿದ ನಟಿ

‘ಗುಡ್​ಬೈ’ ಕಾಮಿಡಿ ಸಿನಿಮಾ. ಈ ಚಿತ್ರಕ್ಕೆ ಏಕ್ತಾ ಕಪೂರ್ ಅವರು ಬಂಡವಾಳ ಹೂಡಿದ್ದಾರೆ. ವಿಕಾಸ್ ಬಹಲ್ ನಿರ್ದೇಶನ ಮಾಡಿದ್ದಾರೆ. ಅಮಿತಾಭ್​, ರಶ್ಮಿಕಾ ಜತೆಗೆ ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಹಾಗೂ ಪವೇಲ್ ಗುಲಾಟಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.