ಲಂಡನ್​ನಲ್ಲಿ ಮಹೇಶ್ ಬಾಬು ಮಗನಿಗೆ ಶಿಕ್ಷಣ; ಇಂಗ್ಲೆಂಡ್​​ಗೆ ಹಾರಲಿದೆ ಫ್ಯಾಮಿಲಿ

ಈ ಮೊದಲು ಮಹೇಶ್ ಬಾಬು ಅಮೆರಿಕಕ್ಕೆ ತೆರಳಿದ್ದು ಇದೇ ಕಾರಣಕ್ಕೆ ಎಂದೇ ಹೇಳಲಾಗಿತ್ತು. ಅವರು ಅಲ್ಲಿ ಸಾಕಷ್ಟು ಶಾಲೆಗಳನ್ನು ಹುಡುಕಾಡಿದ್ದರು. ಆದರೆ, ಯಾವುದೂ ಅವರಿಗೆ ಇಷ್ಟವಾಗಿಲ್ಲ. ಈ ಕಾರಣಕ್ಕೆ ಈಗ ಲಂಡನ್​ಗೆ ಹಾರುತ್ತಿದ್ದಾರೆ.

ಲಂಡನ್​ನಲ್ಲಿ ಮಹೇಶ್ ಬಾಬು ಮಗನಿಗೆ ಶಿಕ್ಷಣ; ಇಂಗ್ಲೆಂಡ್​​ಗೆ ಹಾರಲಿದೆ ಫ್ಯಾಮಿಲಿ
ಗೌತಮ್-ಮಹೇಶ್ ಬಾಬು
TV9kannada Web Team

| Edited By: Rajesh Duggumane

Jul 16, 2022 | 10:17 AM

ನಟ ಮಹೇಶ್ ಬಾಬು (Mahesh Babu) ಅವರು ಪ್ರತಿ ಸಿನಿಮಾ ತೆರೆಗೆ ಬಂದ ನಂತರದಲ್ಲಿ ವಿದೇಶಕ್ಕೆ ತೆರಳುತ್ತಾರೆ. ಫ್ಯಾಮಿಲಿ ಜತೆ ಸಮಯ ಕಳೆದು ಬರುತ್ತಾರೆ. ಇತ್ತೀಚೆಗೆ ಅವರು ಜರ್ಮನಿ ಹಾಗೂ ಅಮೆರಿಕಕ್ಕೆ ತೆರಳಿ ಬಂದಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈಗ ಮಹೇಶ್ ಬಾಬು ಅವರು ಮತ್ತೆ ವಿದೇಶಕ್ಕೆ ತೆರಳಲು ರೆಡಿ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಈ ಬಾರಿ ಅವರು ಟ್ರಿಪ್​ಗೆ ತೆರಳುತ್ತಿಲ್ಲ. ಲಂಡನ್​ ಶಾಲೆಯೊಂದಕ್ಕೆ ಮಗ ಗೌತಮ್ ಅಡ್ಮಿಷನ್​ಗೆ ಅವರು ತೆರಳುತ್ತಿದ್ದಾರೆ ಎನ್ನಲಾಗಿದೆ.

ಸ್ಟಾರ್ ನಟರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ಓದಿಸಲು ಇಷ್ಟಪಡುತ್ತಾರೆ. ಅನೇಕ ಸೆಲೆಬ್ರಿಟಿ ಮಕ್ಕಳು ಈಗಾಗಲೇ ವಿದೇಶದಲ್ಲಿ ಓದುತ್ತಿದ್ದಾರೆ. ಅದೇ ರೀತಿ ಮಹೇಶ್ ಬಾಬು ಕೂಡ ಗೌತಮ್​ಗೆ ವಿದೇಶದಲ್ಲಿ ಶಿಕ್ಷಣ ಕೊಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರೌಢಶಿಕ್ಷಣವನ್ನು ಗೌತಮ್​ ಲಂಡನ್​ನಲ್ಲಿ ಮಾಡಲಿದ್ದಾನೆ.

ಈ ಮೊದಲು ಮಹೇಶ್ ಬಾಬು ಅಮೆರಿಕಕ್ಕೆ ತೆರಳಿದ್ದು ಇದೇ ಕಾರಣಕ್ಕೆ ಎಂದೇ ಹೇಳಲಾಗಿತ್ತು. ಅವರು ಅಲ್ಲಿ ಸಾಕಷ್ಟು ಶಾಲೆಗಳನ್ನು ಹುಡುಕಾಡಿದ್ದರು. ಆದರೆ, ಯಾವುದೂ ಅವರಿಗೆ ಇಷ್ಟವಾಗಿಲ್ಲ. ಈ ಕಾರಣಕ್ಕೆ ಈಗ ಲಂಡನ್​ಗೆ ಹಾರುತ್ತಿದ್ದಾರೆ. ಅಲ್ಲಿ ಮಗನಿಗೋಸ್ಕರ ಒಂದೊಳ್ಳೆಯ ಶಾಲೆಯನ್ನು ಅವರು ಹುಡುಕಲಿದ್ದಾರೆ. ಅಲ್ಲಿ ಪ್ರವೇಶ ಪಡೆದ ನಂತರ ಗೌತಮ್ ತಂದೆ ಜತೆ ಮರಳಿ ಭಾರತಕ್ಕೆ ಬರಲಿದ್ದಾರೆ.

ಮಹೇಶ್ ಬಾಬು ಅವರು ಆಗಸ್ಟ್​ 9ರಂದು ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಗೌತಮ್ ಕೂಡ ಈ ಸೆಲಬ್ರೇಷನ್​ನಲ್ಲಿ ಭಾಗಿಯಾಗಲಿದ್ದಾರೆ. ಆ ಬಳಿಕ ಗೌತಮ್ ವಿದೇಶಕ್ಕೆ ತೆರಳಲಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾ ರಿಲೀಸ್​ ಬಗ್ಗೆ ಘೋಷಣೆ; ಆಗಸ್ಟ್​ನಿಂದ ಶೂಟಿಂಗ್

ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಅವರು ಮುಂದಿನ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಈ ಚಿತ್ರ ಯಾವ ರೀತಿಯ ಶೀರ್ಷಿಕೆ ಇಡುತ್ತಾರೆ ಎಂಬ ಕುತೂಹಲ ಇದೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಚಿತ್ರದಲ್ಲಿ ಮತ್ತೋರ್ವ ನಾಯಕಿ ಇರಲಿದ್ದಾರೆ. ಆ ನಾಯಕಿ ಯಾರು ಎಂಬುದು ಇನ್ನಷ್ಟೇ ಅಧಿಕೃತಗವಾಗಬೇಕಿದೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ಮಹೇಶ್ ಬಾಬು ಅವರು ರಾಜಮೌಳಿ ಜತೆ ಕೈ ಜೋಡಿಸಲಿದ್ದಾರೆ.ab

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada