ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಹಾಗೂ ಬಾಲಿವುಡ್ನ ಬೇಡಿಕೆಯ ನಟಿ. ಈಗಂತೂ ತೆಲುಗು ಚಿತ್ರರಂಗಕ್ಕೂ ಬಹುತೇಕ ಗುಡ್ ಬೈ ಹೇಳಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿಯೇ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಅದರಲ್ಲಿ ಯಶಸ್ಸೂ ಸಹ ಸಾಧಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈಗ ಒಂದರ ಹಿಂದೊಂದು ಬಾಲಿವುಡ್ ಸಿನಿಮಾಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಅದೂ ದೊಡ್ಡ ಸ್ಟಾರ್ ನಟರೊಟ್ಟಿಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರಶ್ಮಿಕಾ ನಟಿಸಿರುವ ಮೂರು ಹಿಂದಿ ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ. ಒಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಎರಡು ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಈಗ ಮತ್ತೊಂದು ಹೊಸ ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಶಿವಾಜಿಯ ಪುತ್ರನ ಕುರಿತಾದ ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಾಯಕಿ. ಇನ್ನು ಸಲ್ಮಾನ್ ಖಾನ್ ನಾಯಕರಾಗಿ ನಟಿಸುತ್ತಿರುವ ‘ಸಿಖಂಧರ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ಸಿನಿಮಾವನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಟೈಗರ್ ಶ್ರಾಫ್ ಜೊತೆಗೆ ಸಿನಿಮಾ ಒಂದರ ಚಿತ್ರೀಕರಣವೂ ಸಾಗಿದೆ. ಇದರ ನಡುವೆ ಈಗ ಬಾಲಿವುಡ್ನ ಮತ್ತೊಬ್ಬ ಯುವ ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಲಾರೆನ್ಸ್ ಬಿಷ್ಣೋಯಿ ಭಯ, ರಶ್ಮಿಕಾ ಮಂದಣ್ಣಗೂ ಭದ್ರತೆ?
‘ಅಂಧಾಧುನ್’, ‘ಬದಾಯಿ ಹೋ’, ‘ಆರ್ಟಿಕಲ್ 15’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಆಯುಷ್ಮಾನ್ ಖುರಾನಾ ನಟಿಸುತ್ತಿರುವ ಹೊಸ ಹಾರರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ಸಿನಿಮಾ ವ್ಯಾಂಪೈರ್ ಮಾದರಿಯ ಹಾರರ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ನವಾಜುದ್ಧೀನ್ ಸಿದ್ಧಿಕಿ ಸಹ ನಟಿಸಲಿದ್ದಾರೆ. ಈ ಸಿನಿಮಾ ವಿಜಯನಗರ ಸಾಮ್ರಾಜ್ಯದ ಕತೆಯನ್ನು ಹೊಂದಿರಲಿದ್ದು, ಸಿನಿಮಾದ ಚಿತ್ರೀಕರಣವನ್ನು ಹಂಪಿಯಲ್ಲಿ ಸಹ ಚಿತ್ರತಂಡ ನಡೆಸಲಿದೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಒಂದು ಭಾಗ ಪ್ರಸ್ತುತ ಕಾಲದಲ್ಲಿ ನಡೆಯಲಿದ್ದು, ಎರಡನೇ ಭಾಗ ವಿಜಯನಗರ ಸಾಮ್ರಾಜ್ಯದ ಕಾಲದ ಕತೆ ಹೊಂದಿರಲಿದೆ.
ಈ ಮೊದಲು ಸಿನಿಮಾಕ್ಕೆ ‘ವ್ಯಾಂಪೈರ್ಸ್ ಆಫ್ ವಿಜಯ ನಗರ’ ಎಂದು ಹೆಸರಿಡಲಾಗಿತ್ತು ಈಗ ಅದನ್ನು ಬದಲಿಸಿ ಸಿನಿಮಾಕ್ಕೆ ‘ತಂಬಾ’ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಬಾಲಿವುಡ್ನಲ್ಲಿ ಹಾರರ್ ಕಾಮಿಡಿ ಸಿನಿಮಾಗಳು ಭಾರಿ ದೊಡ್ಡ ಯಶಸ್ಸು ಗಳಿಸುತ್ತಿವೆ. ‘ತಂಬಾ’ ಸಹ ಅದೇ ಜಾನರ್ಗೆ ಸೇರಿದ ಸಿನಿಮಾ ಆಗಿದೆ. ಇತ್ತೀಚೆಗಷ್ಟೆ ‘ಮುಂಜಿಯಾ’ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿರುವ ನಿರ್ದೇಶಕ ಆದಿತ್ಯ ಸರ್ಪೊತೆದಾರ್ ಈ ಸಿನಿಮಾವನ್ನೂ ಸಹ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 am, Sat, 26 October 24