‘ಮದುವೆ ಹೆಚ್ಚು ದಿನ ಇರಲ್ಲ’: ಅಭಿಷೇಕ್ ಬಚ್ಚನ್ಗೆ ನೇರವಾಗಿ ಹೇಳಿದ ನಿಮ್ರತ್ ಕೌರ್
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಗಳ ನಡುವೆ, ನಟ ನಿಮ್ರತ್ ಕೌರ್ ಜೊತೆ ಅಭಿಷೇಕ್ ಅವರ ಹೆಸರು ತಳುಕು ಹಾಕಿಕೊಂಡಿದೆ. ನಿಮ್ರತ್ ಮತ್ತು ಅಭಿಷೇಕ್ ಅವರ "ದಸವಿ" ಚಿತ್ರದ ಪ್ರಚಾರದ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ನಿಮ್ರತ್ ಅವರ ಮಾತುಗಳು ಮತ್ತು ಅವರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಎರಡೂ ಕಡೆಯವರು ಈ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ.
ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ವಿಚ್ಛೇದನ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಆದರೆ ಇಬ್ಬರೂ ಮತ್ತು ಅವರ ಕುಟುಂಬದವರು ಅಧಿಕೃತ ಘೋಷಣೆ ಮಾಡಿಲ್ಲ. ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ನಟಿ ನಿಮ್ರತ್ ಕೌರ್ ಜೊತೆ ನಟನ ಹೆಸರು ತಳುಕು ಹಾಕಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಅಭಿಷೇಕ್-ನಿಮ್ರತ್ ಸಂಬಂಧದ ಬಗ್ಗೆ ಚರ್ಚೆಯಾಗುತ್ತಿದೆ. ಇದರಿಂದಾಗಿ ನಿಮ್ರತ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.
ಈ ನಡುವೆ ನಿಮ್ರತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ನಿಮ್ರತ್ ಮತ್ತು ಅಭಿಷೇಕ್ ಅವರು ‘ದಾಸವಿ’ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ವೀಡಿಯೊದಲ್ಲಿ, ಐಶ್ವರ್ಯಾ ಮತ್ತು ಅಭಿಷೇಕ್ 15 ವರ್ಷಗಳ ದಾಂಪತ್ಯವನ್ನು ಆಚರಿಸಿದ್ದಕ್ಕಾಗಿ ಇಬ್ಬರನ್ನೂ ನಿಮ್ರತ್ ಹೊಗಳಿದ್ದಾರೆ.
ಇತ್ತೀಚೆಗೆ ಮದುವೆ ಆದ ಬಳಿಕ ಅದು ಹೆಚ್ಚು ಕಾಲ ಉಳಿಯುತ್ತಿಲ್ಲ. ಈ ವಿಚಾರ ಅನೇಕರಿಗೆ ಗೊತ್ತು. ಈ ಕಾರಣದಿಂದ ‘ವಿವಾಹ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ನಿಮ್ರತ್ ಹೇಳಿದ್ದಾರೆ. ಇದನ್ನು ಕೇಳಿ ಕಾರ್ಯಕ್ರಮದ ನಿರೂಪಕರು ಮತ್ತು ಅಭಿಷೇಕ್ ಶಾಕ್ ಆಗಿದ್ದಾರೆ. ಆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ನಿಮ್ರತ್ ಅವರು, ‘ನಾನು ಇದನ್ನು ಕಾಂಪ್ಲಿಮೆಂಟ್ ರೂಪದಲ್ಲಿ ಹೇಳಿದ್ದು’ ಎಂದಿದ್ದಾರೆ. ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ಎಲ್ಲರೂ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ:ಐಶ್ವರ್ಯಾ ರೈ ಹಾಡಿನ ಡ್ಯಾನ್ಸ್ ಕಾಪಿ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಕೃತಿ ಸನೋನ್
ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಬಗ್ಗೆ ಮಾತನಾಡುತ್ತಾ ಇವರು ‘ದಸವಿ’ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಪತ್ನಿ ಪಾತ್ರದಲ್ಲಿ ನಿಮ್ರತ್ ನಟಿಸಿದ್ದಾರೆ. ಅಭಿಮಾನಿಗಳು ಈ ಸಿನಿಮಾ ನೋಡಲು ಕಾದಿದ್ದಾರೆ. ಇವರಿಬ್ಬರ ಅಫೇರ್ ರೂಮರ್ಗಳಿಂದ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಈ ಬಗ್ಗೆ ಇಬ್ಬರೂ ಮೌನ ವಹಿಸಿದ್ದಾರೆ.
ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮದುವೆಯಾಗಲು ನಿರ್ಧರಿಸಿದರು. ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ 2007ರಲ್ಲಿ ವಿವಾಹವಾದರು. ಐಶ್ವರ್ಯಾ 2011ರಲ್ಲಿ ಆರಾಧ್ಯಾಗೆ ಜನ್ಮ ನೀಡಿದರು. ಆದರೆ ಕಳೆದ ಕೆಲವು ತಿಂಗಳಿಂದ ಇವರ ಸಬಂಧದ ಕುರಿತು ಚರ್ಚೆ ಆಗುತ್ತಿದೆ.
ಐಶ್ವರ್ಯಾ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಮಗಳೊಂದಿಗೆ ಆಗಮಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಕುಟುಂಬದೊಂದಿಗೆ ಇದ್ದಾರೆ. ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಮಾತುಕತೆ ಶುರುವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ