ಬಾಲಿವುಡ್ ನಟಿ ರವೀನಾ ಟಂಡನ್ ಅವರಿಗೆ ಇಂದು (ಅಕ್ಟೋಬರ್ 26) ಜನ್ಮದಿನ. ಅವರಿಗೆ ಇದು 50ನೇ ವರ್ಷ ತುಂಬಿದೆ. ಈ ವಯಸ್ಸಿನಲ್ಲೂ ಅವರು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರು ಜನಿಸಿದ್ದು 1974ರಲ್ಲಿ. ರವೀನಾ ಅವರ ಜೀವನದಲ್ಲಿ ಅಕ್ಷಯ್ ಕುಮಾರ್ ಜೊತೆಗಿನ ಸಂಬಂಧವು ಕಪ್ಪು ಚುಕ್ಕೆಯಾಗಿ ಉಳಿದುಕೊಂಡು ಬಿಟ್ಟಿದೆ. ಅವರ ಪ್ರೀತಿ ಆರಂಭ ಆಗಿದ್ದು ಹೇಗೆ, ಕೊನೆ ಆಗಿದ್ದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ.
ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಅವರು ‘ಮೊಹ್ರಾ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರ ರಿಲೀಸ್ ಆಗಿದ್ದು 1994ರಲ್ಲಿ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದ ‘ತು ಚೀಜ್ ಬಡಿ ಹೇ ಮಸ್ತ್ ಮಸ್ತ್..’ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆಯಿತು. ಈ ಸಿನಿಮಾ ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೊಳೆಯಿತು.
ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಅವರು ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು. ಅಕ್ಷಯ್ಗೋಸ್ಕರ್ಗೆ ಅವರು ವೃತ್ತಿ ಜೀವನ ತೊರೆಯಲು ನಿರ್ಧರಿಸಿದ್ದರು. ರವೀನಾ ಮನೆಯಲ್ಲಿ ಅಡುಗೆ ಮಾಡಿಕೊಂಡಿರಲಿ ಎಂಬುದು ಅಕ್ಷಯ್ ಆಸೆ ಆಗಿತ್ತು.
ಇದನ್ನೂ ಓದಿ:ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರವೀನಾ ಟಂಡನ್
ಇದೇ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಹಾಗೂ ನಟಿ ರೇಖಾ ಮಧ್ಯೆ ಅಫೇರ್ ಇದೆ ಎಂಬ ವಿಚಾರ ಹರಿದಾಡಿತು. 1996ರಲ್ಲಿ ರಿಲೀಸ್ ಆದ ‘ಖಿಲಾಡಿಯೋ ಕಾ ಖಿಲಾಡಿ’ ಶೂಟ್ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಅಕ್ಷಯ್ಗೆ ರೇಖಾ ಬಂಗಲೆ ಗಿಫ್ಟ್ ನೀಡಿದ್ದರು ಎಂದು ಕೂಡ ಹೇಳಲಾಗಿತ್ತು. ಆದರೆ, ಇದನ್ನು ಅವರು ಅಲ್ಲ ಗಳೆದಿದ್ದಾರೆ.
ರವೀನಾಗೆ ಇದರಿಂದ ಮಾತ್ರ ಬೇಸರ ಆಗಿಲ್ಲ. ಶಿಲ್ಪಾ ಶೆಟ್ಟಿ ಹಾಗೂ ರವೀನಾ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಆದರೆ, ಗೊತ್ತಿಲ್ಲದೆ ಪ್ರಿಯಾಂಕಾ ಜೊತೆಯೂ ಅಕ್ಷಯ್ ಕ್ಲೋಸ್ ಆಗಿದ್ದರು. ಇದನ್ನು ತಡೆದುಕೊಳ್ಳೋಕೆ ರವೀನಾಗೆ ಆಗಲೇ ಇಲ್ಲ.
ಬ್ರೇಕಪ್ ಬಳಿಕ ಅಕ್ಷಯ್ ಕುಮಾರ್ ಹಾಗೂ ರವೀನಾ ಪರಸ್ಪರ ಬೈದುಕೊಳ್ಳೋಕೆ ಆರಂಭಿಸಿದರು. ಅಕ್ಷಯ್ಗೆ ನೀಯತ್ತು ಇಲ್ಲ ಎಂದು ರವೀನಾ ಹೇಳಿದರು. ಅಕ್ಷಯ್ ಕುಮಾರ್ ಅವರು ರವೀನಾ ಅವರನ್ನು ಚೈಲ್ಡಿಶ್ ಎಂದು ಕರೆದರು. ರವೀನಾ ನಟಿಟಿಸಿದ ಸಿನಿಮಾ ಒಂದರಲ್ಲಿ ‘ನಾನು ಖಿಲಾಡಿಯನ್ನು (ಪ್ಲೇಯರ್) ಎಂದಿಗೂ ಮದುವೆ ಆಗಲ್ಲ’ ಎಂದಿತ್ತು. ಇದು ಅಕ್ಷಯ್ಗೆ ಹೇಳಿದ ಮಾತು ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Sat, 26 October 24