AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಆದಮೇಲೆ ಚಿತ್ರರಂಗ ಬಿಡ್ತೇನೆ ಎಂದಿದ್ದ ರೇಖಾ; ಅದು ಎಂದಿಗೂ ಸಂಭವಿಸಲೇ ಇಲ್ಲ

Bollywood actress Rekha: ರೇಖಾ ಅವರ ಜೀವನಚರಿತ್ರೆಯ ಒಂದು ಭಾಗವನ್ನು ಈ ಲೇಖನ ವಿವರಿಸುತ್ತದೆ. ತಮ್ಮ ಗರ್ಭಧಾರಣೆಯ ನಂತರ ಚಿತ್ರರಂಗ ಬಿಡುವುದಾಗಿ ಹೇಳಿದ್ದ ರೇಖಾ ಅವರು, ಮುಖೇಶ್ ಅಗರ್ವಾಲ್ ಅವರನ್ನು ಮದುವೆಯಾದರೂ, ತಾಯಿಯಾಗಲು ಸಾಧ್ಯವಾಗಲಿಲ್ಲ. ಅವರ ವಿವಾಹ ಮತ್ತು ಮುಖೇಶ್ ಅವರ ಆತ್ಮಹತ್ಯೆ, ರೇಖಾ ಅವರ ಜೀವನದಲ್ಲಿ ಆಘಾತಕಾರಿ ಘಟನೆಗಳಾಗಿವೆ.

ತಾಯಿ ಆದಮೇಲೆ ಚಿತ್ರರಂಗ ಬಿಡ್ತೇನೆ ಎಂದಿದ್ದ ರೇಖಾ; ಅದು ಎಂದಿಗೂ ಸಂಭವಿಸಲೇ ಇಲ್ಲ
Rekha Movie
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Jun 27, 2025 | 4:10 PM

Share

ಹಿಂದಿ ಚಿತ್ರರಂಗದ (Bollywood) ನಟಿ ರೇಖಾ (Rekha) ಇಂದು ದೊಡ್ಡ ಪರದೆಯ ಮೇಲೆ ಸಕ್ರಿಯವಾಗಿಲ್ಲದಿದ್ದರೂ, ಅವರು ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. 70ನೇ ವಯಸ್ಸಿನಲ್ಲಿಯೂ ಅಭಿಮಾನಿಗಳು ರೇಖಾ ಅವರ ಸೌಂದರ್ಯಕ್ಕೆ ಬೆರಗಾಗಿದ್ದಾರೆ. ರೇಖಾ ಅನೇಕ ಚಿತ್ರಗಳಲ್ಲಿ ಬಲವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಆದರೆ ಅವರ ಖಾಸಗಿ ಜೀವನದಲ್ಲಿ ಅವರು ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.

ರೇಖಾ ತಮ್ಮ ಜೀವನದಲ್ಲಿ ಪ್ರೀತಿಸಿ ಮದುವೆಯಾದರು, ಆದರೆ ಎಂದಿಗೂ ತಾಯಿಯಾಗಲು ಸಾಧ್ಯವಾಗಲಿಲ್ಲ. ಅವರ ದಿವಂಗತ ಪತಿ ಮುಖೇಶ್ ಅಗರ್ವಾಲ್ ಅವರು ರೇಖಾ ಅವರನ್ನು ಬಾಲಿವುಡ್ ತೊರೆಯುವಂತೆ ಕೇಳಿಕೊಂಡಿದ್ದರು. ಆ ಸಮಯದಲ್ಲಿ, ರೇಖಾ, ‘ನಾನು ಗರ್ಭಿಣಿಯಾದ ನಂತರ ನಟನೆಯನ್ನು ಬಿಡುತ್ತೇನೆ…’ ಎಂದು ಹೇಳಿದ್ದರು ಆದರೆ ಅವರ ಜೀವನದಲ್ಲಿ ಅದು ಎಂದಿಗೂ ಸಂಭವಿಸಲಿಲ್ಲ.

ಸಿಮಿ ಗರೇವಾಲ್ ಅವರೊಂದಿಗಿನ ಸಂದರ್ಶನವೊಂದರಲ್ಲಿ, ರೇಖಾ ತಮ್ಮ ಜೀವನದ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ಮುಖೇಶ್ ಮತ್ತು ರೇಖಾ 1980ರಲ್ಲಿ ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಆದರೆ ಅವರ ಸಂಬಂಧದಲ್ಲಿ ಯಾವುದೇ ಪ್ರೀತಿ ಇರಲಿಲ್ಲ. ರೇಖಾ ಮತ್ತು ಮುಖೇಶ್ ಮದುವೆಗೆ ಮೊದಲು ಒಮ್ಮೆ ಮಾತ್ರ ಭೇಟಿಯಾಗಿದ್ದರು. ಮುಖೇಶ್ ಅವರನ್ನು ಮದುವೆಯಾಗುವುದು ದೊಡ್ಡ ಅಪಾಯವಾಗಿತ್ತು ರೇಖಾ ಕೂಡ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ:ಈ ಬಾಲಿವುಡ್ ನಟನ ಫಿಟ್​ನೆಸ್, ಡ್ಯಾನ್ಸ್​ಗೆ ಮರುಳಾಗದವರ್ಯಾರು?

ಮುಖೇಶ್ ಅಗರ್ವಾಲ್ ಸಾವಿನ ನಂತರ ರೇಖಾ ಆಘಾತಕ್ಕೊಳಗಾದರು. ತನ್ನ ಪತಿಯ ಸಾವಿನ ಸತ್ಯವನ್ನು ಒಪ್ಪಿಕೊಳ್ಳಲು ರೇಖಾ ಸಿದ್ಧರಿರಲಿಲ್ಲ. ನನಗೆ ಇದು ಏಕೆ ಸಂಭವಿಸುತ್ತಿದೆ? ಅಂತಹ ಅನೇಕ ಆಲೋಚನೆಗಳು ರೇಖಾ ಅವರನ್ನು ಸುತ್ತುವರೆದವು. ಇದಷ್ಟೇ ಅಲ್ಲ, ರೇಖಾ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದರು.

ಹನಿಮೂನ್ ಸಮಯದಲ್ಲಿ, ತಮ್ಮ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ರೇಖಾಗೆ ತಿಳಿದಿತ್ತು. ಆದಾಗ್ಯೂ ರೇಖಾ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಮುಖೇಶ್​ಗೆ ರೇಖಾ ಸಿನಿಮಾಗಳಲ್ಲಿ ಕೆಲಸ ಮಾಡುವುದು ಇಷ್ಟವಾಗಲಿಲ್ಲ. ಮುಖೇಶ್ ರೇಖಾ ನಟನೆ ಬಿಡಬೇಕೆಂದು ಬಯಸಿದ್ದರು. ಶಾಕಿಂಗ್ ಎಂಬಂತೆ ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ರೇಖಾ ಮತ್ತೆ ಮದುವೆ ಆಗಲೇ ಇಲ್ಲ. ತಾಯಿ ಆಗಬೇಕ ಎಂಬ ಅವರ ಕನಸು ಕನಸಾಗಿಯೇ ಉಳಿಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ