ಮದುವೆಯಾದ ಕೆಲವೇ ತಿಂಗಳಲ್ಲಿ ರೇಖಾ ಪತಿಯ ಆತ್ಮಹತ್ಯೆ; ಸಿಕ್ಕಿತ್ತು ಮಾಟಗಾತಿ ಪಟ್ಟ

| Updated By: ರಾಜೇಶ್ ದುಗ್ಗುಮನೆ

Updated on: Oct 10, 2024 | 7:54 AM

ನಟಿ ರೇಖಾ ಅವರಿಗೆ ಇಂದು (ಅಕ್ಟೋಬರ್ 10) ಜನ್ಮದಿನ. 90ರ ದಶಕದಲ್ಲಿ ಒಮ್ಮೆ ಮದುವೆ ಆಗಿದ್ದ ಅವರು ಕೆಲವೇ ತಿಂಗಳಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಈ ಕಾರಣಕ್ಕೆ ಅವರು ಸಾಕಷ್ಟು ನೋವು ಅನುಭವಿಸಬೇಕಾಗಿ ಬಂದಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಮದುವೆಯಾದ ಕೆಲವೇ ತಿಂಗಳಲ್ಲಿ ರೇಖಾ ಪತಿಯ ಆತ್ಮಹತ್ಯೆ; ಸಿಕ್ಕಿತ್ತು ಮಾಟಗಾತಿ ಪಟ್ಟ
ರೇಖಾ
Follow us on

ಅಮಿತಾಭ್ ಬಚ್ಚನ್ ಅವರನ್ನು ಪ್ರೀತಿಸಿದ್ದ ರೇಖಾ ನಂತರ ಎಚ್ಚೆತ್ತುಕೊಂಡರು. ಮದುವೆಯಾದ ವ್ಯಕ್ತಿಯ ಸಹವಾಸ ಬೇಡ ಎಂದು ಅವರಿಂದ ದೂರ ಆದರು. ಹಾಗಂತ ಒಂಟಿಯಾಗಿ ಇರಲು ಸಾಧ್ಯವೇ? ಇಲ್ಲವೇ ಇಲ್ಲ. ರೇಖಾ ಮದುವೆ ಆದರು. ಆದರೆ, ಮದುವೆಯಾಗಿ ಕೆಲವೇ ತಿಂಗಳು ಸಂಸಾರ ನಡೆಸುವ ವೇಳೆಗೆ ಇಡೀ ಜೀವನ ಬದಲಾಗಿತ್ತು. ಆ ಬಳಿಕ ಅವರು ಮದುವೆ ಆಗುವುದಕ್ಕೆ ಹೋಗಿಲ್ಲ.

ಬಾಲಿವುಡ್ ನಟಿ ರೇಖಾ ಅವರು ಉದ್ಯಮಿ ಮುಖೇಶ್ ಅಗರ್​ವಾಲ್​ನ ವಿವಾಹ ಆದರು. ಆದರೆ, ಮದುವೆ ಆದ ಕೆಲವೇ ತಿಂಗಳಲ್ಲಿ ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು. 1990ರ ಮಾರ್ಚ್​ 4ರಂದು ರೇಖಾ ಹಾಗೂ ಮುಖೇಶ್ ವಿವಾಹವು ನೆರವೇರಿತ್ತು. ಆದರೆ, ಮುಖೇಶ್​ಗೆ ಸಾಕಷ್ಟು ಮಾನಸಿಕ ತೊಂದರೆಗಳು ಇದ್ದವಂತೆ. ಅದನ್ನು ಸಾರ್ವಜನಿಕವಾಗಿ ಅವರು ಹೇಳಿಕೊಂಡಿಲ್ಲ. ನಟಿಯ ಬಟ್ಟೆಯನ್ನೇ ಬಳಸಿ ಫ್ಯಾನ್ಸ್​​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು.

ರೇಖಾ ಅವರನ್ನು ಮಾಯಗಾತಿ ಎಂದು ಕರೆಯಲಾಯಿತು. ಅವರ ವಿರುದ್ಧ ಸಾರ್ವಜನಿಕರು ಹಾಗೂ ಇಂಡಸ್ಟ್ರಿ ತಿರುಗಿ ಬಿದ್ದಿತ್ತು. ಅವರನ್ನು ನೆಗೆಟಿವ್ ಆಗಿ ತೋರಿಸಲಾಯಿತು. ಮುಖೇಶ್ ಅಗರ್ವಾಲ್ ಅವರ ಕುಟುಂಬದವರು ಕೂಡ ಅವರ ಬಗ್ಗೆ ನೋವುಂಟುಮಾಡುವ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಲಿಲ್ಲ.

‘ನನ್ನ ಸಹೋದರ ಮುಖೇಶ್ ಅವರು ರೇಖಾನ ಪ್ರೀತಿಸಿದರು. ಪ್ರೀತಿ ಎಂಬುದು ಮಾಡು ಇಲ್ಲವೇ ಮಡಿ ವಿಚಾರ ಆಗಿತ್ತು. ಆದರೆ, ರೇಖಾ ಮಾಡಿದ್ದನ್ನು ಸಹಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಅವಳಿಗೆ ಹಣ ಬೇಕೆ?’ ಎಂದು ಮುಖೇಶ್ ಸಹೋದರ ಅನಿಲ್ ಪ್ರಶ್ನೆ ಮಾಡಿದ್ದರು.

ಬಾಲಿವುಡ್​ನ ನಿರ್ದೇಶಕರು-ನಿರ್ಮಾಪಕರ ಈ ಬಗ್ಗೆ ಮಾತನಾಡಿದ್ದರು. ಸುಭಾಷ್ ಘಾಯ್ ಮಾತನಾಡಿ, ‘ರೇಖಾ ಚಿತ್ರರಂಗದ ಮೇಲೆ ಹಾಕಿರೋ ಕಪ್ಪು ಕಲೆಯನ್ನು ಸುಲಭದಲ್ಲಿ ನಾಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ‘ಇಂಥ ಮಹಿಳೆಯನ್ನು ಯಾರಾದರೂ ಸೊಸೆಯಾಗಿ ಸ್ವೀಕರಿಸುತ್ತಾರಾ’ ಎಂದು ಪ್ರಶ್ನೆ ಮಾಡಿದ್ದರು. ಖ್ಯಾತ ನಟ ಅನುಪಮ್ ಖೇರ್ ಅವರು ನಟಿಯನ್ನು ಮಾಯಗಾತಿ ಎಂದು ಕರೆದಿದ್ದರು.

ಇದನ್ನೂ ಓದಿ: ಅಮಿತಾಭ್​ನ ಲವ್​ ಮಾಡುವಾಗ ರೇಖಾಗೆ ಎಚ್ಚರಿಕೆ ಕೊಟ್ಟಿದ್ದ ಜಯಾ; ನಂತರ ಎಲ್ಲವೂ ಬದಲಾಯ್ತು

ಆ ಬಳಿಕ ರೇಖಾ ಸಾಕಷ್ಟು ನೋವು ತಿಂದರು. ನಂತರ ಅವರು ಮತ್ತೆ ಮದುವೆ ಆಗುವ ಸಾಹಸಕ್ಕೆ ಮುಂದಾಗಲೇ ಇಲ್ಲ. ಅಲ್ಲಿಂದ ಇಲ್ಲಿವರೆಗೆ ರೇಖಾ ಒಂಟಿಯಾಗೇ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Thu, 10 October 24