AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೂಲ್​ ಭುಲಯ್ಯ 3’ ಟ್ರೇಲರ್: ದೆವ್ವದ ಲುಕ್​ನಲ್ಲಿ ಮಾಧುರಿ ದೀಕ್ಷಿತ್​, ವಿದ್ಯಾ ಬಾಲನ್

ದೀಪಾವಳಿ ಹಬ್ಬದಲ್ಲಿ ‘ಭೂಲ್​ ಭುಲಯ್ಯ 3’ ಸಿನಿಮಾ ನೋಡುವ ಸಿನಿಪ್ರಿಯರಿಗೆ ಡಬಲ್ ಧಮಾಕಾ ಆಗಲಿದೆ. ಒಂದೇ ಪಾತ್ರದಲ್ಲಿ ವಿದ್ಯಾ ಬಾಲನ್​ ಮತ್ತು ಮಾಧುರಿ ದೀಕ್ಷಿತ್ ಅಭಿನಯಿಸಿದ್ದಾರೆ. ಹಾರರ್​-ಕಾಮಿಡಿ ಕಥಾಹಂದರ ಇರುವ ಈ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದಾರೆ. ಕಾರ್ತಿಕ್​ ಆರ್ಯನ್​ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.

‘ಭೂಲ್​ ಭುಲಯ್ಯ 3’ ಟ್ರೇಲರ್: ದೆವ್ವದ ಲುಕ್​ನಲ್ಲಿ ಮಾಧುರಿ ದೀಕ್ಷಿತ್​, ವಿದ್ಯಾ ಬಾಲನ್
ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್​
ಮದನ್​ ಕುಮಾರ್​
|

Updated on: Oct 09, 2024 | 7:42 PM

Share

ಬಹುನಿರೀಕ್ಷಿತ ‘ಭೂಲ್​ ಭುಲಯ್ಯ 3’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಕೆಲವೇ ದಿನಗಳ ಹಿಂದೆ ಬಂದಿದ್ದ ಟೀಸರ್​ನಲ್ಲಿ ಹಾರರ್​ ದೃಶ್ಯಗಳು ಇದ್ದವು. ಈಗ ಟ್ರೇಲರ್​ನಲ್ಲಿ ಅಂತಹ ದೃಶ್ಯಗಳು ಇನ್ನಷ್ಟು ಹೆಚ್ಚಿವೆ. ವಿದ್ಯಾ ಬಾಲನ್​, ಕಾರ್ತಿಕ್​ ಆರ್ಯನ್​, ಮಾಧುರಿ ದೀಕ್ಷಿತ್, ತೃಪ್ತಿ ದಿಮ್ರಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ದೀಪಾವಳಿ ಪ್ರಯುಕ್ತ ‘ಭೂಲ್​ ಭುಲಯ್ಯ 3’ ಸಿನಿಮಾ ರಿಲೀಸ್​ ಆಗಲಿದೆ. ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಿರುವ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ.

‘ಭೂಲ್​ ಭುಲಯ್ಯ’ ಮತ್ತು ‘ಭೂಲ್​ ಭುಲಯ್ಯ 2’ ಸಿನಿಮಾದಲ್ಲಿ ಮಂಜುಳಿಕಾ ಎಂಬ ಪಾತ್ರ ಹೈಲೈಟ್​ ಆಗಿತ್ತು. ಈಗ ‘ಭೂಲ್​ ಭುಲಯ್ಯ 3’ ಸಿನಿಮಾದಲ್ಲೂ ಆ ಪಾತ್ರವೇ ಪ್ರಧಾನವಾಗಿ ಇರಲಿದೆ. ಟ್ವಿಸ್ಟ್​ ಏನೆಂದರೆ, ಈ ಬಾರಿ ಮಂಜುಳಿಕಾ ಪಾತ್ರವನ್ನು ಇಬ್ಬರು ಮಾಡಿದ್ದಾರೆ. ಮಾಧುರಿ ದೀಕ್ಷಿತ್​ ಮತ್ತು ವಿದ್ಯಾ ಬಾಲನ್​ ಅವರು ಮಂಜುಳಿಕಾ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಹಾರರ್ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ; ಕರ್ನಾಟಕದಲ್ಲಿ ನಡೆಯಲಿದೆ ಕಥೆ

ಮಾಧುರಿ ದೀಕ್ಷಿತ್​ ಮತ್ತು ವಿದ್ಯಾ ಬಾಲನ್​ ಅವರಲ್ಲಿ ನಿಜವಾದ ಮಂಜುಳಿಕಾ ಯಾರು ಎಂಬುದು ತಿಳಿಯಲು ಅಭಿಮಾನಿಗಳು ‘ಭೂಲ್​ ಭುಲಯ್ಯ 3’ ಸಿನಿಮಾವನ್ನು ನೋಡಬೇಕು. ಅನೀಸ್​ ಬಾಜ್ಮಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನವೆಂಬರ್​ 1ರಂದು ಈ ಚಿತ್ರ ಬಿಡುಗಡೆ ಆಗಲಿದ್ದು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುವ ಮುನ್ಸೂಚನೆ ಕಾಣಿಸಿದೆ. ಸಿನಿಮಾ ಬಗ್ಗೆ ಕ್ರೇಜ್​ ಸೃಷ್ಟಿಯಾಗಿದೆ.

‘ಭೂಲ್​ ಭುಲಯ್ಯ 3’ ಟ್ರೇಲರ್:

ಇದು ಕೇವಲ ಹಾರರ್ ಸಿನಿಮಾ ಅಲ್ಲ. ಹಾರರ್​ ಜೊತೆ ಕಾಮಿಡಿ ಕಥೆಯನ್ನೂ ಈ ಸಿನಿಮಾ ಒಳಗೊಂಡಿದೆ ಎಂಬುದು ಟ್ರೇಲರ್​ನಲ್ಲಿ ಸ್ಪಷ್ಟವಾಗಿದೆ. ದೆವ್ವ-ಭೂತ ನೋಡಿ ಹೆದರುವ ಪ್ರೇಕ್ಷಕರು ಕಾಮಿಡಿ ದೃಶ್ಯಗಳನ್ನು ನೋಡಿ ಎಂಜಾಯ್​ ಕೂಡ ಮಾಡಲಿದ್ದಾರೆ. ವಿಜಯ್ ರಾಝ್​, ಸಂಜಯ್​ ಮಿಶ್ರಾ, ರಾಜ್​ಪಾಲ್​ ಯಾಧವ್​ ಮುಂತಾದ ಕಾಮಿಡಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರದ ಟ್ರೇಲರ್​ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ತಿಕ್​ ಆರ್ಯನ್​ ಅವರ ವೃತ್ತಿಜೀವನಕ್ಕೆ ‘ಭೂಲ್​ ಭುಲಯ್ಯ 3’ ಸಿನಿಮಾದಿಂದ ಮತ್ತೊಂದು ದೊಡ್ಡ ಯಶಸ್ಸು ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ಯಾಕೆ? ಸಂಘರ್ಷಕ್ಕೆ ಇದೇ ಕಾರಣ!
ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ಯಾಕೆ? ಸಂಘರ್ಷಕ್ಕೆ ಇದೇ ಕಾರಣ!
ಅಂಬಿಗರ ಚೌಡಯ್ಯ ಭವ್ಯ ಮೆರವಣಿಗೆಗೆ ಹೆಲಿಕಾಪ್ಟರ್​​ನಿಂದ ಪುಷ್ಪವೃಷ್ಟಿ
ಅಂಬಿಗರ ಚೌಡಯ್ಯ ಭವ್ಯ ಮೆರವಣಿಗೆಗೆ ಹೆಲಿಕಾಪ್ಟರ್​​ನಿಂದ ಪುಷ್ಪವೃಷ್ಟಿ
ಬಿಬಿಎಲ್​ನಲ್ಲಿ ಬಾಬರ್ ಆಝಂ​ಗೆ ಹೆಜ್ಜೆ ಹೆಜ್ಜೆಗೂ ಅವಮಾನ
ಬಿಬಿಎಲ್​ನಲ್ಲಿ ಬಾಬರ್ ಆಝಂ​ಗೆ ಹೆಜ್ಜೆ ಹೆಜ್ಜೆಗೂ ಅವಮಾನ
ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲರು ವರ್ಸಸ್ ಸರ್ಕಾರ
ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲರು ವರ್ಸಸ್ ಸರ್ಕಾರ
ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್
ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್
ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಯುವತಿಗೆ ಆಗಿದ್ದೇನು?
ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಯುವತಿಗೆ ಆಗಿದ್ದೇನು?
ರೇವಣ್ಣನ ಮಾತಿಗೆ ಇದ್ದಕ್ಕಿದ್ದಂತೆ ಕೋಪಗೊಂಡ ಕುಮಾರಸ್ವಾಮಿ
ರೇವಣ್ಣನ ಮಾತಿಗೆ ಇದ್ದಕ್ಕಿದ್ದಂತೆ ಕೋಪಗೊಂಡ ಕುಮಾರಸ್ವಾಮಿ
ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್​​​ಆರ್​​ಟಿಸಿ ಬಸ್
ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್​​​ಆರ್​​ಟಿಸಿ ಬಸ್
ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ
ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ: ಆತಂಕದಲ್ಲಿ ಪ್ರವಾಸಿಗರು
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ: ಆತಂಕದಲ್ಲಿ ಪ್ರವಾಸಿಗರು