ನಟಿ ರೇಖಾ ಅವರಿಗೆ ಇಂದು (ಅಕ್ಟೋಬರ್ 10) ಜನ್ಮದಿನ. 90ರ ದಶಕದಲ್ಲಿ ಒಮ್ಮೆ ಮದುವೆ ಆಗಿದ್ದ ಅವರು ಕೆಲವೇ ತಿಂಗಳಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಈ ಕಾರಣಕ್ಕೆ ಅವರು ಸಾಕಷ್ಟು ನೋವು ಅನುಭವಿಸಬೇಕಾಗಿ ಬಂದಿತ್ತು. ಇದಕ್ಕೂ ಮೊದಲು ಅಮಿತಾಭ್ ಜೊತೆಗಿನ ಲವ್ ಕಹಾನಿ ಕೊನೆಯಾಗಿತ್ತು. ಅವರು ಎಂದಿಗೂ ಅಮಿತಾಭ್ ಜೊತೆಗಿನ ಪ್ರೀತಿ ವಿಚಾರ ಒಪ್ಪಿಕೊಂಡಿಲ್ಲ. ಆದರೆ. ಈ ವಿಚಾರ ಎಲ್ಲರಿಗೂ ಗೊತ್ತಿತ್ತು. ಅಮಿತಾಭ್ ಪತ್ನಿ ಜಯಾಗೂ ಕೂಡ.
ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದರು. ಅಮಿತಾಭ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎನಿಸಿಕೊಂಡಿದ್ದರು. ಆದರೆ, ಇದು ಅವರ ಬಾಳಲ್ಲಿ ರೇಖಾ ಬರೋವರೆಗೆ ಮಾತ್ರ ಇದೆಲ್ಲವೂ ಇತ್ತು. ಇದು ಆರಂಭ ಆಗಿದ್ದು ಹೇಗೆ, ಕೊನೆ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅಮಿತಾಭ್ ಬಚ್ಚನ್ ಹಾಗೂ ಜಯಾ 1973ರಲ್ಲಿ ಮದುವೆ ಆದರು. ‘ಜಂಜೀರ್’ ಯಶಸ್ಸಿನ ಬಳಿಕ ಅವರು ವಿವಾಹ ಕಂಡರು. ಮದುವೆ ಆದ ಕೆಲವೇ ವರ್ಷಗಳಲ್ಲಿ ಅವರು ಅಫೇರ್ ಕಾರಣಕ್ಕೆ ಸುದ್ದಿ ಆದರು. ಅಮಿತಾಭ್ ಹಾಗೂ ರೇಖಾ ವಿವಾಹೇತರ ಸಂಬಂಧ ಸಾಕಷ್ಟು ಸುದ್ದಿ ಆಯಿತು.
1976ರ ‘ದೋ ಅಂಜಾನೆ’ ಸಿನಿಮಾದ ಶೂಟ್ ವೇಳೆ ಅಮಿತಾಭ್ ಹಾಗೂ ರೇಖಾ ಲವ್ಸ್ಟೋರಿ ಶುರುವಾಯಿತು. ರೇಖಾ ಗೆಳತಿಯ ಬಂಗಲೆಯಲ್ಲಿ ಇಬ್ಬರೂ ಸೇರುತ್ತಿದ್ದರು. ಅಮಿತಾಭ್ ಹಾಗೂ ರೇಖಾ ಮಧ್ಯೆ ಸಂಬಂಧ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
‘ಗಂಗಾ ಕಿ ಸೌಗಂಧ’ (1978) ಚಿತ್ರದ ಶೂಟ್ ವೇಳೆ ಈ ವಿಚಾರ ರಿವೀಲ್ ಆಯಿತು. ಸಹ ನಟ ರೇಖಾ ಜೊತೆ ತಪ್ಪಾಗಿ ನಡೆದುಕೊಂಡಿದ್ದರು. ಇದರಿಂದ ಅಮಿತಾಭ್ ಅವರು ಟೆಂಪರ್ ಕಳೆದುಕೊಂಡರು. ಇದಾದ ಬಳಿಕ ಅಮಿತಾಭ್ ಹಾಗೂ ರೇಖಾ ಸಂಬಂಧ ಹೊರಬಿತ್ತು. ಆದರೆ, ಇದನ್ನು ಅವರು ಒಪ್ಪಿಲ್ಲ. ಒಮ್ಮೆ ಯಶ್ ಚೋಪ್ರಾ ಈ ವಿಚಾರವನ್ನು ಖಚಿತಪಡಿಸಿ ಬಿಟ್ಟಿದ್ದರು. ‘ರೇಖಾ-ಅಮಿತಾಭ್ ಮದುವೆ ನಡೆದಿದೆ’ ಎಂದು ಕೆಲವು ಕಡೆಗಳಲ್ಲಿ ವರದಿ ಬಿತ್ತರ ಆಯಿತು.
ಇದನ್ನೂ ಓದಿ: ‘ಐಶ್ವರ್ಯಾನ ಅಮಿತಾಭ್ ಸೊಸೆಯಂತೆ ಎಂದೂ ನೋಡಿಲ್ಲ’; ಜಯಾ ಬಚ್ಚನ್
ಜಯಾ ಒಮ್ಮೆ ರೇಖಾನ ಊಟಕ್ಕೆ ಕರೆದಿದ್ದರಂತೆ. ಆಗ ಅವರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದರು. ‘ನಾನು ಎಷ್ಟೇ ಕಷ್ಟಪಟ್ಟರೂ, ಏನೇ ಆದರೂ ಅಮಿತಾಭ್ನ ಬಿಡಲ್ಲ’ ಎಂದಿದ್ದರು ಜಯಾ. ಆ ಬಳಿಕ ರೇಖಾ ಮನಸ್ಸು ಮುರಿದು ಹೋಯ್ತು. 1981ರಲ್ಲಿ ರಿಲೀಸ್ ಆದ ‘ಸಿಲ್ಸಿಲಾ’ ಇವರು ಒಟ್ಟಾಗಿ ನಟಿಸಿದ ಕೊನೆಯ ಚಿತ್ರ. ಈ ಸಿನಿಮಾ ಟ್ರಯಾಂಗಲ್ ಲವ್ ಸ್ಟೋರಿ ಬಗ್ಗೆ ಇತ್ತು. ಅಮಿತಾಭ್, ಜಯಾ ಹಾಗೂ ರೇಖಾ ಈ ಚಿತ್ರದಲ್ಲಿ ನಟಿಸಿದ್ದರು. ನಂತರ ಬಚ್ಚನ್ ಕುಟುಂಬದಿಂದ ರೇಖಾ ದೂರ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Thu, 10 October 24