‘ರಿಯಾ ಚಕ್ರವರ್ತಿಗೆ ಇನ್ನೊಂದು ಚಾನ್ಸ್​ ಬೇಕು’; ಸುಶಾಂತ್​ ಮಾಜಿ ಪ್ರೇಯಸಿ ಬಗ್ಗೆ ಕರುಣೆ ತೋರಿಸಿದ ನಿರ್ದೇಶಕ

| Updated By: ಮದನ್​ ಕುಮಾರ್​

Updated on: Aug 03, 2021 | 5:19 PM

‘ಚೆಹ್ರೆ’ ಚಿತ್ರದಲ್ಲಿ ರಿಯಾ ನಟಿಸಿದ್ದಾರೆ. ಕೊವಿಡ್​ ಕಾರಣದಿಂದ ಅದರ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದೆ. ಆದರೆ ಈ ಚಿತ್ರದಲ್ಲಿ ರಿಯಾ ಪಾತ್ರಕ್ಕೆ ಹೆಚ್ಚು ಮಹತ್ವ ಇಲ್ಲ ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ.

‘ರಿಯಾ ಚಕ್ರವರ್ತಿಗೆ ಇನ್ನೊಂದು ಚಾನ್ಸ್​ ಬೇಕು’; ಸುಶಾಂತ್​ ಮಾಜಿ ಪ್ರೇಯಸಿ ಬಗ್ಗೆ ಕರುಣೆ ತೋರಿಸಿದ ನಿರ್ದೇಶಕ
‘ರಿಯಾ ಚಕ್ರವರ್ತಿಗೆ ಇನ್ನೊಂದು ಚಾನ್ಸ್​ ಬೇಕು’; ಸುಶಾಂತ್​ ಮಾಜಿ ಪ್ರೇಯಸಿ ಬಗ್ಗೆ ಕರುಣೆ ತೋರಿಸಿದ ನಿರ್ದೇಶಕ
Follow us on

ಬಾಲಿವುಡ್​ನಲ್ಲಿ ನೆಲೆಕಂಡುಕೊಳ್ಳಬೇಕು ಎಂಬ ಕನಸು ಹೊಂದಿದ್ದ ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಜೊತೆ ಗುರುತಿಸಿಕೊಂಡಿದ್ದರು. ಸುಶಾಂತ್​ ಪ್ರೇಯಸಿ ಎಂಬ ಕಾರಣಕ್ಕೆ ಅವರಿಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತಿತ್ತು. ಆದರೆ ಸುಶಾಂತ್​ ನಿಧನದ ನಂತರ ಅದೇ ಪ್ರಚಾರವೇ ಅವರಿಗೆ ಶಾಪವಾಗಿ ಪರಿಣಮಿಸಿತ್ತು. ನೆಟ್ಟಿಗರಿಂದ ತೀವ್ರ ಟ್ರೋಲ್​ಗೆ ಒಳಗಾಗಿದ್ದ ರಿಯಾ ಚಕ್ರವರ್ತಿ, ಡ್ರಗ್ಸ್​ ದಂಧೆ ಆರೋಪದಲ್ಲೂ ಜೈಲಿಗೆ ಹೋಗಿ ಬಂದರು. ಇಷ್ಟೆಲ್ಲ ಆದ ಬಳಿಕ ಅವರ ಜೊತೆ ಸಿನಿಮಾ ಮಾಡಲು ಅನೇಕರು ಹಿಂಜರಿಯುತ್ತಿದ್ದಾರೆ. ಆದರೆ ನಿರ್ದೇಶಕ ರೂಮಿ ಜಾಫ್ರಿ (Rumi Jaffery) ಮಾತ್ರ ರಿಯಾ ಬಗ್ಗೆ ಸಿಕ್ಕಾಪಟ್ಟೆ ಕರುಣೆ ತೋರಿಸುತ್ತಿದ್ದಾರೆ.

ರೂಮಿ ಜಾಫ್ರಿ ನಿರ್ದೇಶನದ ‘ಚೆಹ್ರೆ’ ಚಿತ್ರದಲ್ಲಿ ರಿಯಾ ನಟಿಸಿದ್ದಾರೆ. ಕೊವಿಡ್​ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಿಕೊಂಡಿರುವ ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಮತ್ತು ಇಮ್ರಾನ್​ ಹಷ್ಮಿ ಅವರದ್ದು ಪ್ರಮುಖ ಪಾತ್ರ. ಚಿಕ್ಕ ಪಾತ್ರದಲ್ಲಿ ರಿಯಾ ನಟಿಸಿದ್ದು, ಅವರಿಗೆ ಹೆಚ್ಚು ಮಹತ್ವ ಇಲ್ಲ ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಆದರೆ ಮತ್ತೊಂದು ಸಿನಿಮಾದಲ್ಲಿ ರಿಯಾಗೆ ಚಾನ್ಸ್​ ಕೊಡುವುದಾಗಿ ರೂಮಿ ಜಾಫ್ರಿ ಭರವಸೆ ನೀಡಿದ್ದಾರೆ.

‘ಒಂದು ವರ್ಷ ತೀವ್ರ ನೋವು ಅನುಭವಿಸಿದ ಬಳಿಕ ರಿಯಾ ಈಗ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ. ಅವರೊಳಗೆ ಈಗ ಶಾಂತಿ ಇದೆ. ಚೆಹ್ರೆ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ಇಲ್ಲ. ಆದರೆ ಅವರು ಮುಖ್ಯಭೂಮಿಕೆಯಲ್ಲಿ ನಟಿಸಬಹುದಾದ ಒಂದು ಒಳ್ಳೆಯ ಸ್ಕ್ರಿಪ್ಟ್​ ನನ್ನ ಬಳಿ ಇದೆ. ನನ್ನ ಪ್ರಕಾರ ಅವರಿಗೆ ಸೆಕೆಂಡ್​ ಚಾನ್ಸ್​ ಸಿಗಬೇಕು’ ಎಂದು ರೂಮಿ ಜಾಫ್ರಿ ಹೇಳಿದ್ದಾರೆ.

ರಿಯಾ ಚಕ್ರವರ್ತಿ ಹಾಲಿವುಡ್​ಗೆ ಕಾಲಿಡುತ್ತಾರೆ ಎಂಬ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಅದರಿಂದ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಸುಶಾಂತ್​ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಸುಶಾಂತ್​ ಕುಟುಂಬದವರ ಆರೋಪದ ಪ್ರಕಾರ ರಿಯಾ ಅವರೇ ಸುಶಾಂತ್​ ಸಾವಿಗೆ ಕಾರಣ. ಹಾಗಾಗಿ ಅಂಥ ನಟಿಗೆ ಹಾಲಿವುಡ್​ ಮಂದಿ ಮಣೆ ಹಾಕುತ್ತಿರುವುದು ಸರಿಯಲ್ಲ ಎಂದು ಸುಶಾಂತ್​ ಫ್ಯಾನ್ಸ್​ ಗರಂ ಆಗಿದ್ದಾರೆ.

‘ದೀಪಿಕಾ ಪಡುಕೋಣೆ ಅವರಂತಹ ಟಾಪ್​ ನಟಿಯರೇ ಹಾಲಿವುಡ್​ನಲ್ಲಿ ಏನೂ ಸಾಧಿಸಲಾಗದೇ ವಾಪಸ್​ ಬಂದರು. ಇನ್ನು ರಿಯಾ ಚಕ್ರವರ್ತಿ ಏನು ಮಾಡಲು ಸಾಧ್ಯ? ಸುಶಾಂತ್​ ಕಾರಣದಿಂದ ಇಂದಿಗೂ ರಿಯಾಗೆ ಅವಕಾಶಗಳು ಸಿಗುತ್ತಿವೆ. ಸಾವಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ರಾಜೀ ಆಗುವುದೇ ಇಲ್ಲ’ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?

ವಿಕ್ಕಿ ಜೈನ್​ ತುಟಿಗೆ ಮುತ್ತಿಟ್ಟು ದುಬಾರಿ ಗಿಫ್ಟ್​ ನೀಡಿದ ಸುಶಾಂತ್ ಸಿಂಗ್​ ಮಾಜಿ ಪ್ರೇಯಸಿ ಅಂಕಿತಾ