ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಆಶಿಕಿ 2’ ಸಿನಿಮಾದಿಂದ ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿತು. ‘ದಿ ನೈಟ್ ಮ್ಯಾನೇಜರ್ 2’ ವೆಬ್ ಸಿರೀಸ್ನಲ್ಲೂ ಅವರು ಗಮನ ಸೆಳೆದಿದ್ದಾರೆ. ಈಗ ಅವರು ಸುದ್ದಿ ಆಗುತ್ತಿರುವುದು ಸಿನಿಮಾ ಅಥವಾ ವೆಬ್ ಸಿರೀಸ್ ವಿಚಾರಕ್ಕೆ ಅಲ್ಲ. ಬದಲಿಗೆ, ಅವರ ಖಾಸಗಿ ಬದುಕಿನ ಬಗ್ಗೆ ಬಿಗ್ ನ್ಯೂಸ್ ಕೇಳಿಬಂದಿದೆ. ಆದಿತ್ಯ ರಾಯ್ ಕಪೂರ್ ಅವರ ಪ್ರೇಮ್ ಕಹಾನಿ ಬಹಿರಂಗ ಆಗಿದೆ. ನಟಿ ಅನನ್ಯಾ ಪಾಂಡೆ (Ananya Panday) ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ. ಹಾಗಂತ ಈ ವಿಚಾರವನ್ನು ತಾವಾಗಿಯೇ ಹೇಳಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿರುವ ಫೋಟೋಗಳು ಅವರಿಬ್ಬರ ಪ್ರೀತಿಗೆ ಸಾಕ್ಷಿ ಒದಗಿಸುತ್ತಿವೆ.
ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್ಗೆ. ಸ್ಪೇನ್ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ.
ಅನನ್ಯಾ ಪಾಂಡೆಯನ್ನು ಆದಿತ್ಯ ರಾಯ್ ಕಪೂರ್ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಲಭ್ಯವಾಗಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಎಲ್ಲವೂ ಬಟಾಬಯಲಾಗಿದೆ. ಕದ್ದು-ಮುಚ್ಚಿ ಡೇಟಿಂಗ್ ಮಾಡುತ್ತಿರುವ ರಹಸ್ಯ ಬಯಲಾಗಿದೆ. ವೈರಲ್ ಆಗಿರುವ ಫೋಟೋಗಳಿಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂಬಂಧಿಯ ಮದುವೆಯಲ್ಲಿ ಧಮ್ ಹೊಡೆಯುತ್ತಾ ನಿಂತ ಅನನ್ಯಾ ಪಾಂಡೆ; ಬಾಯಿಗೆ ಬಂದಂತೆ ಬೈಸಿಕೊಂಡ ನಟಿ
ಖ್ಯಾತ ನಟ ಚಂಕಿ ಪಾಂಡೆ ಅವರ ಮಗಳು ಅನನ್ಯಾ ಪಾಂಡೆ. ಚಿತ್ರರಂಗದ ಹಿನ್ನೆಲೆಯಿರುವ ಕುಟುಂಬದಿಂದ ಬಂದ ಕಾರಣಕ್ಕೆ ಅನನ್ಯಾ ಪಾಂಡೆ ಅವರಿಗೆ ಸುಲಭವಾಗಿ ಅವಕಾಶ ಸಿಕ್ಕಿತು. ನೆಪೋಟಿಸಂ ಸಹಾಯದಿಂದ ಚಾನ್ಸ್ ಪಡೆದುಕೊಂಡ ನಟಿ ಎಂದು ಎಲ್ಲರೂ ಟೀಕೆ ಮಾಡುತ್ತಾರೆ. ಆದರೆ ಆ ಟೀಕೆಗಳ ಬಗ್ಗೆ ಅನನ್ಯಾ ಪಾಂಡೆ ತಲೆ ಕೆಡಿಸಿಕೊಂಡಿಲ್ಲ. ವಿಜಯ್ ದೇವರಕೊಂಡ ಜೊತೆ ಅನನ್ಯಾ ನಟಿಸಿದ ‘ಲೈಗರ್’ ಸಿನಿಮಾ ಹೀನಾಯವಾಗಿ ಸೋತಿತು. ಆದರೂ ಅನನ್ಯಾಗೆ ಹೊಸ ಹೊಸ ಆಫರ್ಗಳು ಸಿಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.