ರಣಬೀರ್ ಕಪೂರ್ ಮದುವೆ ಆಗದೆ ಇರಲು ಕಾರಣವಾಗಿದ್ದು ಈ ವ್ಯಕ್ತಿ; ಹೆಸರು ಬಹಿರಂಗ

‘ಯೇ ಜವಾನಿ ಹೇ ದೀವಾನಿ’ ಸಿನಿಮಾದಲ್ಲಿ ರಣಬೀರ್, ದೀಪಿಕಾ, ಕಲ್ಕಿ ಕೊಚ್ಲಿನ್​, ಆದಿತ್ಯ ರಾಯ್​ ಕಪೂರ್ ಮುಖ್ಯಭೂಮಿಕೆ ನಿರ್ವಹಿಸಿದ್ದರು.

ರಣಬೀರ್ ಕಪೂರ್ ಮದುವೆ ಆಗದೆ ಇರಲು ಕಾರಣವಾಗಿದ್ದು ಈ ವ್ಯಕ್ತಿ; ಹೆಸರು ಬಹಿರಂಗ
ಆಲಿಯಾ ಭಟ್ - ರಣ್​​ಬೀರ್ ಕಪೂರ್
Follow us
ರಾಜೇಶ್ ದುಗ್ಗುಮನೆ
|

Updated on:Jun 01, 2021 | 5:56 PM

ರಣಬೀರ್​ ಕಪೂರ್​ ನಟನೆಯ ‘ಯೇ ಜವಾನಿ ಹೇ ದೀವಾನಿ’ ಸಿನಿಮಾ ತೆರೆಕಂಡು 8 ವರ್ಷಗಳು ಕಳೆದಿವೆ. 2013ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಅಯಾನ್​ ಮುಖರ್ಜಿ ನಿರ್ದೇಶನ ಇತ್ತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇಂದಿಗೂ ಸಿನಿಮಾವನ್ನು ಕಣ್ತುಂಬಿಕೊಂಡು ಆನಂದಿಸುವವರ ಸಂಖ್ಯೆ ದೊಡ್ಡದಿದೆ. ಈ ಚಿತ್ರ ತೆರೆಕಂಡ ನಂತರದಲ್ಲಿ ರಣಬೀರ್ ಮನಸ್ಸು ಬದಲಾಯಿತಂತೆ. ಈ ಬಗ್ಗೆ ರಣಬೀರ್ ಹೇಳಿಕೊಂಡಿದ್ದಾರೆ.

‘ಯೇ ಜವಾನಿ ಹೇ ದೀವಾನಿ’ ಸಿನಿಮಾದಲ್ಲಿ ರಣಬೀರ್, ದೀಪಿಕಾ, ಕಲ್ಕಿ ಕೊಚ್ಲಿನ್​, ಆದಿತ್ಯ ರಾಯ್​ ಕಪೂರ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ರಣಬೀರ್​ ಬನ್ನಿ ಆಗಿ ಕಾಣಿಸಿಕೊಂಡಿದ್ದರು. ಮದುವೆ, ಮಕ್ಕಳು, ಕೆಲಸ ಎನ್ನುವ ಜಂಜಾಟವಿಲ್ಲದೆ ಬದುಕುವ ವ್ಯಕ್ತಿ ಬನ್ನಿ. ಆತ ಜೀವನದಲ್ಲಿ ಹೊಸತನ್ನು ಹುಡುಕುವ ವ್ಯಕ್ತಿ. ಈ ಪಾತ್ರ ಅನೇಕರ ಮೇಲೆ ಪ್ರಭಾವ ಬೀರಿತ್ತು.

ಈ ಸಿನಿಮಾ ರಿಲೀಸ್​ ಆಗುವಾಗ ರಣಬೀರ್​ ವಯಸ್ಸು 30. ಆಗಲೇ ಅವರು ಮದುವೆ ಆಗಿ, ಮಕ್ಕಳನ್ನು ಮಾಡಿಕೊಂಡು ಸಿಂಪಲ್​ ಆಗಿ ಜೀವನ ನಡೆಸುವ ಆಲೋಚನೆಯಲ್ಲಿದ್ದರು. ಆಗ ಅವರಿಗೆ ಸಿಕ್ಕಿದ್ದು ನಿರ್ದೇಶಕ ಅಯಾನ್. ಅವರು,ಮದುವೆ ಮಕ್ಕಳನ್ನು ಇಷ್ಟು ಬೇಗ ಮಾಡಿಕೊಳ್ಳದೆ, ಜಗತ್ತನ್ನು ನೋಡಬೇಕೆನ್ನುವ ಕಿವಿಮಾತು ಹೇಳಿದ್ದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ ರಣಬೀರ್​ ಹಾಗೆಯೇ ಮಾಡಿದರು. ಹೀಗಾಗಿ, ಆ ಸಂದರ್ಭದಲ್ಲಿ ಅವರು ಮದುವೆಯಿಂದ ಸ್ವಲ್ಪ ವರ್ಷ ದೂರ ಇರುವ ಆಲೋಚನೆಗೆ ಬಂದರು.

ಆಲಿಯಾ ಭಟ್​-ರಣಬೀರ್​ ಕಳೆದ ಮೂರು ವರ್ಷಗಳಿಂದ ರಿಲೇಶನ್​ ಶಿಪ್​ನಲ್ಲಿದ್ದಾರೆ. ಇತ್ತೀಚೆಗೆ ಇಬ್ಬರೂ ಮಾಲ್ಡೀವ್ಸ್​ಗೆ ತೆರಳಿ ಟ್ರೋಲ್​ ಆಗಿದ್ದರು. ‘ಬ್ರಹ್ಮಾಸ್ತ್ರ’ ಸಿನಿಮಾ ಮೂಲಕ ಅಯಾನ್​ ಹಾಗೂ ರಣಬೀರ್​ ಮತ್ತೆ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳು ಹಿಂದೆ ಬಿದ್ದಿವೆ. ಇನ್ನು, ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಪ್ರೇಕ್ಷಕರು ಕಾತುರರಾಗಿದ್ದಾರೆ. ರಣಬೀರ್​ ಹಾಗೂ ಆಲಿಯಾ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಇದಾಗಿದೆ. 2022ರ ವೇಳೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಆಲಿಯಾ ಭಟ್​ ವಿಚಾರಕ್ಕೆ ದೀಪಿಕಾ ಪಡುಕೋಣೆ- ಸಂಜಯ್​ ಲೀಲಾ ಬನ್ಸಾಲಿ ನಡುವೆ ಕೋಲ್ಡ್​ ವಾರ್!

Published On - 5:51 pm, Tue, 1 June 21

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ