ಪ್ರಶಸ್ತಿ ಸಮಾರಂಭಗಳ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದರಲ್ಲಿ ನೈತಿಕತೆ ಇರೋದಿಲ್ಲ ಅನ್ನೋದು ಅನೇಕರ ನಂಬಿಕೆ. ಇದಕ್ಕಾಗಿ ಆಮಿರ್ ಖಾನ್ ಅವರು ಯಾವುದೇ ಅವಾರ್ಡ್ ಫಂಕ್ಷನ್ಗೆ ಬರೋದಿಲ್ಲ. ವಿದ್ಯಾ ಬಾಲನ್ ಅವರು ಈ ಮೊದಲು ಶಾರುಖ್ ಖಾನ್ ಅವಾರ್ಡ್ ಖರೀದಿ ಮಾಡಿದ ಬಗ್ಗೆ ಟೀಕೆ ಮಾಡಿದ್ದರು. ಅದೇ ರೀತಿ ಸೈಫ್ ಅಲಿ ಖಾನ್ ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದರು.
ನೈತಿಕತೆಯ ಆಧಾರದ ಮೇಲೆ ಅವಾರ್ಡ್ ನೀಡುವುದಿಲ್ಲ ಅನ್ನೋದು ಸೈಫ್ ಅಲಿ ಖಾನ್ ಅವರ ಅಭಿಪ್ರಾಯ. ಅನುಪಮಾ ಚೋಪ್ರಾ ಬಳಿ ಸೈಫ್ ಮಾತನಾಡಿದ್ದರು. ‘ಅವಾರ್ಡ್ ಕಾರ್ಯಕ್ರಮದಲ್ಲಿ ಯಾವುದೇ ನೈತಿಕ ಆಧಾರತೆ ಇರುವುದಿಲ್ಲ’ ಎಂದು ಸೈಫ್ ಅಲಿ ಖಾನ್ ಹೇಳಿದ್ದರು. ಅಲ್ಲದೆ, ಚಾನೆಲ್ಗಳು ನೀಡುವ ಅವಾರ್ಡ್ ಫಂಕ್ಷನ್ ಅವರು ದೊಡ್ಡ ಜೋಕ್ ಎಂದು ಕರೆದಿದ್ದರು.
ಇದನ್ನೂ ಓದಿ:ಹೇಗಿದೆ ಗೊತ್ತಾ ಸೈಫ್ ಅಲಿ ಖಾನ್ ಐಷಾರಾಮಿ ಜೀವನ? ಇಲ್ಲಿದೆ ವಿವರ
‘ಮೋಸ್ಟ್ ಬ್ಯೂಟಿಫುಲ್ ಸ್ಮೈಲ್, ಗ್ಲಾಮರಸ್ ದಿವಾ ರೀತಿಯ ವಿಭಾಗಗಳನ್ನು ಅವಾರ್ಡ್ ಕಾರ್ಯಕ್ರಮದವರು ಸೃಷ್ಟಿ ಮಾಡುತ್ತಾರೆ. ಯಾರಿಗೆ ಅತ್ಯುತ್ತಮ ನಟ/ನಟಿ ಅವಾರ್ಡ್ ಸಿಕ್ಕಿದೆ ಎಂಬುದು ನೆನಪೂ ಇರುವುದಿಲ್ಲ. ಯಾರೂ ಜೋಕ್ ಹೇಳಿರುವುದಿಲ್ಲ. ಆದರೂ ಅವರು ನಗುತ್ತಾರೆ. ಕೆಟ್ಟ ಜೋಕ್ಗಳನ್ನು ಹೇಳಿದಾಗ ಇದು ನಗುವಂತಹ ಹಾಸ್ಯ ಅಲ್ಲ ಎಂದು ಮನೆಯಲ್ಲಿ ಕುಳಿತ ವೀಕ್ಷಕ ಹೇಳಿಕೊಳ್ಳುತ್ತಾನೆ’ ಎಂದಿದ್ದರು ಅವರು. ಈ ಮೂಲಕ ಇವರು ಮಾಡುವ ಡ್ರಾಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂದಿದ್ದರು.
‘ಮೋಸ ಆಗುತ್ತಿರುವುದು ವೀಕ್ಷಕರಿಗೆ. ಈ ಅವಾರ್ಡ್ ಫಂಕ್ಷನ್ ಅವರನ್ನು ಡಿಸ್ಟರ್ಬ್ ಮಾಡುತ್ತದೆ. ಇದು ಸಂಪೂರ್ಣವಾಗಿ ಸುಳ್ಳು. ಮನರಂಜನೆ ಮೇಲೆ ಹಣ ಹಾಕಲು ಅವರ ಬಳಿ ದುಡ್ಡಿಲ್ಲ’ ಎಂದಿದ್ದರು. ಈ ಮೂಲಕ ಈ ರೀತಿಯ ಕಾರ್ಯಕ್ರಮಗಳು ಬದಲಾಗಬೇಕು ಎಂದು ಅವರು ಹೇಳಿದ್ದರು. ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಬ್ಯುಸಿ ಆಗುತ್ತಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡಿದ್ದರು. ಈಗ ‘ದೇವರ’ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದರೆ. ಸೆಪ್ಟೆಂಬರ್ 27ರಂದು ಸಿನಿಮಾ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ