‘ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆದೆ’; ಅಚ್ಚರಿ ಮೂಡಿಸಿದ ಅಮಿತಾಭ್ ಹೇಳಿಕೆ

ಅಮಿತಾಭ್ ಬಚ್ಚನ್ ಕುಟುಂಬ ಐಶ್ವರ್ಯಾ ರೈ ಅವರನ್ನು ಬಿಟ್ಟು ತಾವಷ್ಟೇ ಅನಂತ್ ಅಂಬಾನಿ ಮದುವೆಗೆ ಬಂದಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಬಚ್ಚನ್ ಕುಟುಂಬದ ಜೊತೆ ಐಶ್ವರ್ಯಾ ಅವರ ಸಂಬಂಧ ಸರಿ ಇಲ್ಲ ಎನ್ನುವ ಮಾತು ಕೇಳಿಬಂತು. ಈಗ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಮಾತು ಜೋರಾಗಿದೆ. ಈ ಮಧ್ಯೆ ಅಮಿತಾಭ್ ಮಾಡಿರೋ ಪೋಸ್ಟ್ ವೈರಲ್ ಆಗಿದೆ.

‘ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆದೆ’; ಅಚ್ಚರಿ ಮೂಡಿಸಿದ ಅಮಿತಾಭ್ ಹೇಳಿಕೆ
‘ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆದೆ’; ಅಚ್ಚರಿ ಮೂಡಿಸಿದ ಅಮಿತಾಭ್ ಹೇಳಿಕೆ
Follow us
ರಾಜೇಶ್ ದುಗ್ಗುಮನೆ
|

Updated on: Aug 16, 2024 | 1:55 PM

ಅಮಿತಾಭ್ ಬಚ್ಚನ್ ಅವರ ಕುಟುಂಬದ ವಿಚಾರ ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಗ್ಗೆ ಅವರು ಮೌನ ಮುರಿದಿಲ್ಲ. ಈಗ ಅವರು ‘ಕೌನ್​ ಬನೇಗಾ ಕರೋಡ್ಪತಿ’ ಅವರ 16ನೇ ಸೀಸನ್​ನ ನಡೆಸಿಕೊಡುತ್ತಿದ್ದಾರೆ. ಇದರ ಶೂಟಿಂಗ್​ನಲ್ಲಿ ಅಮಿತಾಭ್ ಬ್ಯುಸಿ ಇದ್ದರು. ಈಗ ಅವರು ಬ್ರೇಕ್ ಪಡೆದಿದ್ದಾರೆ. ಕುಟುಂಬದ ಜೊತೆ ಅವರು ಸಮಯ ಕಳೆದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಅವರು ಸಮಯ ಸಿಕ್ಕಾಗ ತಮ್ಮದೇ ಶಬ್ದಗಳಲ್ಲಿ ಬ್ಲಾಗ್ ಬರೆಯುತ್ತಾರೆ. ಅವರು ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಈಗ ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಆಗಸ್ಟ್​ 15ರಂದು ಬ್ರೇಕ್ ಪಡೆದು ಕುಟುಂಬದ ಜೊತೆ ಸಮಯ ಕಳೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

‘ದೇಹದ ಬಗ್ಗೆ ಕಾಳಜಿ ವಹಿಸಿದೆ. ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆದಿದೆ. ಕಳೆದ ಕೆಲವು ದಿನ ಸ್ಟುಡಿಯೋದಲ್ಲಿ ಬ್ಯುಸಿ ಇದ್ದೆ’ ಎಂದು ಅವರು ಬ್ಲಾಗ್​ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈಗ 83 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ನವ ಯುವಕನಂತೆ ಕೆಲಸ ಮಾಡಲು ಬಯಸುತ್ತಾರೆ. ಅವರ ಡೆಡಿಕೇಷನ್ ಅನೇಕರಿಗೆ ಇಷ್ಟ ಆಗುತ್ತದೆ.

ಅಮಿತಾಭ್ ಬಚ್ಚನ್ ಅವರಿಂದಲೇ ಅಭಿಷೇಕ್ ಹಾಗೂ ಐಶ್ವರ್ಯಾ ಸಂಬಂಧ ಹಾಳಾಗಿದೆ ಎನ್ನುವ ಮಾತಿದೆ. ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಅವರು ಐಶ್ವರ್ಯಾ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ. ಐಶ್ವರ್ಯಾ ಅವರನ್ನು ಕಡೆಗಣಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾ ಅವಕಾಶ ನಿರಾಕರಿಸಿದ್ದ ಕೀರ್ತಿ ಸುರೇಶ್

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸಿದ್ದಾರೆ. ಅಶ್ವತ್ಥಾಮನಾಗಿ ಅವರು ಕಾಣಿಸಿಕೊಂಡಿದ್ದಾರೆ. ಮಹಾಭಾರತದ ಕಥೆಯನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.  ಈ ಚಿತ್ರಕ್ಕೆ ಸೀಕ್ವೆಲ್ ಬರಬೇಕಿದೆ. ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಶೀಘ್ರವೇ ಇದರ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.