ಹಲ್ಲೆ ಬಳಿಕ ಮೊದಲ ಬಾರಿಗೆ ಈವೆಂಟ್​ಗೆ ಬಂದ ಸೈಫ್ ಅಲಿ ಖಾನ್; ಕಾಣಿಸ್ತಿದೆ ಗಾಯದ ಗುರುತು

ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ದರೋಡೆ ಮತ್ತು ಹಲ್ಲೆಯನ್ನು ಎದುರಿಸಿದ ನಂತರ ತ್ವರಿತ ಚೇತರಿಕೆಯನ್ನು ತೋರಿಸಿದ್ದಾರೆ. ಆಸ್ಪತ್ರೆಯಿಂದ ಚೇತರಿಸಿಕೊಂಡು, ಅವರು ಮುಂಬೈನಲ್ಲಿ ನಡೆದ ನೆಟ್‌ಫ್ಲಿಕ್ಸ್ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗಿದೆ. ಸೈಫ್ ಅವರ ಚೇತರಿಕೆ ಅನೇಕರನ್ನು ಆಶ್ಚರ್ಯಗೊಳಿಸಿದೆ.

ಹಲ್ಲೆ ಬಳಿಕ ಮೊದಲ ಬಾರಿಗೆ ಈವೆಂಟ್​ಗೆ ಬಂದ ಸೈಫ್ ಅಲಿ ಖಾನ್; ಕಾಣಿಸ್ತಿದೆ ಗಾಯದ ಗುರುತು
ಸೈಫ್

Updated on: Feb 04, 2025 | 2:15 PM

ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಅವರ ಬಾಂದ್ರಾದ ಮನೆಗೆ ಬಂದ ಕಳ್ಳ ಸೈಫ್ ಮೇಲೆ ದಾಳಿ ಮಾಡಿದ್ದು ಅಲ್ಲದೆ, ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಫಿಟ್ ಆಗಿ ಬಂದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ಈವೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ‘ನೆಟ್​ಫ್ಲಿಕ್ಸ್’ ಮುಂಬೈನಲ್ಲಿ ಗ್ರ್ಯಾಂಡ್ ಈವೆಂಟ್ ಒಂದನ್ನು ಮಾಡಿದೆ. ಇದಕ್ಕೆ ಸೈಫ್ ಅಲಿ ಖಾನ್ ಅವರಿಗೂ ಆಹ್ವಾನ ಇತ್ತು. ‘ಜೆವೆಲ್ ಥೀಫ್: ದಿ ಹೇಸ್ಟ್ ಬಿಗಿನ್ಸ್’ ಸಿನಿಮಾದಲ್ಲಿ ಜೈದೀಪ್ ಅಹ್ಲಾವತ್ ಜೊತೆ ಸೈಫ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಾಣಲಿದೆ. ಇದಕ್ಕಾಗಿ ಸೈಫ್ ಅವರು ಈವೆಂಟ್​ಗೆ ಆಗಮಿಸಿದ್ದರು.

ಲೀಲಾವತಿ ಆಸ್ಪತ್ರೆಯವರು ನೀಡಿದ ಮಾಹಿತಿ ಪ್ರಕಾರ ಸೈಫ್ ಅಲಿ ಖಾನ್ ಅವರಿಗೆ ಕೈ, ಕತ್ತು ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ. ನೆಟ್​ಫ್ಲಿಕ್ಸ್​ ಈವೆಂಟ್​ನಲ್ಲಿ ಸೈಫ್ ಅವರ ಕತ್ತಿನ ಭಾಗದಲ್ಲಿ ಗಾಯ ಕಾಣಿಸಿದೆ. ಈ ಫೋಟೋಗಳನ್ನು ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಕೇಸ್​ನಲ್ಲಿ ಬಂಧನಕ್ಕೆ ಒಳಗಾದ ವ್ಯಕ್ತಿ ವಿರುದ್ಧ ಸಿಕ್ತು ದೊಡ್ಡ ಸಾಕ್ಷಿ

ಸೈಫ್ ಅಲಿ ಖಾನ್ ಅವರು ಈವೆಂಟ್​​ನಲ್ಲಿ ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಸಿಕೊಂಡಿದ್ದಾರೆ. 20 ದಿನಗಳ ಹಿಂದೆ ಸೈಫ್ ಆಸ್ಪತ್ರೆಯಲ್ಲಿ ದಾಖಲಾಗಿದೆ ಸರ್ಜರಿ ಮಾಡಿಸಿಕೊಳ್ಳುತ್ತಿದ್ದರು ಎಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅವರು ಫಿಟ್ ಆಗಿ ಜೈಲಿನಿಂದ ಹೊರ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.