ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾ ಕಪೂರ್​ನ ಹೊರಗಿಟ್ಟ ಸೈಫ್​ ಸಹೋದರಿ

|

Updated on: Apr 12, 2024 | 5:13 PM

ಅಸಲಿ ವಿಷಯ ಏನೇ ಇದ್ದರೂ ಸಹ ನಟಿ ಕರೀನಾ ಕಪೂರ್​ ಖಾನ್​ ಅವರ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಿದೆ. ಈ ರೀತಿ ಫ್ಯಾಮಿಲಿಯ ಫೋಟೋದಲ್ಲಿ ಅತ್ತಿಗೆಯನ್ನು ಹೊರಗಿಡುವ ಮೂಲಕ ಸೈಫ್​ ತಂಗಿ ಸೋನಾ ಅಲಿ ಖಾನ್​ ಅವರು ಅವಮಾನ ಮಾಡಿದ್ದಾರೆ ಎಂದು ಕರೀನಾ ಫ್ಯಾನ್ಸ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾ ಕಪೂರ್​ನ ಹೊರಗಿಟ್ಟ ಸೈಫ್​ ಸಹೋದರಿ
ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾ ಕಪೂರ್​ನ ಹೊರಗಿಟ್ಟ ಸೈಫ್​ ಸಹೋದರಿ
Follow us on

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈದ್ (Eid 2024) ಆಚರಣೆ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್​ ಆಗಿವೆ. ಅವುಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಸೈಫ್​ ಅಲಿ ಖಾನ್​ (Saif Ali Khan) ಅವರ ಫ್ಯಾಮಿಲಿ ಫೋಟೋ. ಈ ಫೋಟೋಗಳನ್ನು ಸೈಫ್​ ಸಹೋದರಿ, ನಟಿ ಸೋಹಾ ಅಲಿ ಖಾನ್​ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ವಿಲಕ್ಷಣ ಅಂಶವನ್ನು ನೆಟ್ಟಿಗರು ಗಮನಿಸಿದ್ದಾರೆ. ಸೈಫ್​ ಅವರ ಎರಡನೇ ಪತ್ನಿ ಕರೀನಾ ಕಪೂರ್​ ಖಾನ್​ (Kareena Kapoor Khan) ಅವರನ್ನು ಈ ಫೋಟೋದಲ್ಲಿ ಕ್ರಾಪ್​ ಮಾಡಲಾಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಸೋಹಾ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಅವರ ನಡುವೆ ಉತ್ತಮ ಒಡನಾಟವೇ ಇದೆ. ಹಾಗಿದ್ದರೂ ಕೂಡ ಅವರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಡಿಮೆ. ಈಗ ಸೋನಾ ಅಲಿ ಖಾನ್​ ಅವರು ಕರೀನಾ ಕಪೂರ್​ ಖಾನ್​ರ ಫೋಟೋವನ್ನು ಕ್ರಾಪ್​ ಮಾಡಿರುವುದರಿಂದ ಅತ್ತಿಗೆ-ನಾದಿನಿ ನಡುವೆ ಏನೋ ಕಿರಿಕ್​ ಆಗಿರಬಹುದೇ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು, ಕರೀನಾ ಮತ್ತು ಸೋಹಾ ನಡುವೆ ಕಿರಿಕ್​ ಆಗಿರಬಹುದು ಎಂಬ ಅನುಮಾನದಲ್ಲಿ ಹುರುಳಿಲ್ಲ. ಯಾಕೆಂದರೆ, ಸೋನಾ ಅಲಿ ಖಾನ್​ ಅವರು ಹಂಚಿಕೊಂಡ ಬೇರೆ ಫೋಟೋದಲ್ಲಿ ಕರೀನಾ ಕಪೂರ್​ ಖಾನ್​ ಕೂಡ ಇದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತುಕೊಂಡಿದ್ದಾರೆ. ಏನೋ ಕಣ್ತಪ್ಪಿನಿಂದ ಬೇರೆ ಫೋಟೋದಲ್ಲಿ ಕರೀನಾ ಅವರನ್ನು ಕ್ರಾಪ್​ ಮಾಡಲಾಗಿದೆ ಅಷ್ಟೇ.

ಅಸಲಿ ವಿಷಯ ಏನೇ ಇದ್ದರೂ ಕೂಡ ಕರೀನಾ ಕಪೂರ್​ ಖಾನ್​ ಅವರ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಿದೆ. ಈ ರೀತಿ ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆಯನ್ನು ಹೊರಗಿಡುವ ಮೂಲಕ ಸೋನಾ ಅಲಿ ಖಾನ್​ ಅವರು ಅವಮಾನ ಮಾಡಿದ್ದಾರೆ ಎಂದು ಕರೀನಾ ಫ್ಯಾನ್ಸ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ನೆಟ್ಟಿಗರು ಕಮೆಂಟ್​ಗಳ ಮೂಲಕ ಈದ್​ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಯಶ್​ ಜೊತೆ ನಟಿಸೋದಕ್ಕೂ ಮೊದಲೇ ಹೆಚ್ಚಿತು ಕರೀನಾ ಕಪೂರ್​ ಹವಾ

ಕರೀನಾ ಕಪೂರ್​ ಖಾನ್​ ಅವರಿಗೆ ಸಖತ್​ ಬೇಡಿಕೆ ಇದೆ. ಅವರು ನಟಿಸಿದ ‘ಕ್ರೂ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಯಶ್​ ನಟನೆ ‘ಟಾಕ್ಸಿಕ್​’ ಸಿನಿಮಾದಲ್ಲೂ ಕರೀನಾ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಗಾಸಿಪ್​ ಹರಿದಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.