AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ವರ್ಷಗಳ ಮುನಿಸು ಮರೆತು ಒಂದಾದ ಮಲ್ಲಿಕಾ ಶೆರಾವತ್, ಇಮ್ರಾನ್​ ಹಷ್ಮಿ

‘ಮರ್ಡರ್​’ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್​ ಹಾಗೂ ಇಮ್ರಾನ್​ ಹಷ್ಮಿ ತುಂಬಾ ಬೋಲ್ಡ್​ ಆಗಿ ನಟಿಸಿದ್ದರು. ಬೆಡ್​ರೂಮ್​ ದೃಶ್ಯದಲ್ಲಿ ಅವರು ಲಿಪ್​ ಲಾಕ್​ ಮಾಡಿದ್ದು ಬಾಲಿವುಡ್​ನಲ್ಲಿ ಹೊಸ ಸೆನ್ಸೇಷನ್​ ಸೃಷ್ಟಿಸಿತ್ತು. ತೆರೆಮೇಲೆ ಅಷ್ಟು ಆಪ್ತವಾಗಿ ನಟಿಸಿದ್ದ ಇಮ್ರಾನ್​ ಹಷ್ಮಿ ಹಾಗೂ ಮಲ್ಲಿಕಾ ಶೆರಾವತ್ ಅವರು ನಿಜ ಜೀವನದಲ್ಲಿ ಕಿರಿಕ್​ ಮಾಡಿಕೊಂಡಿದ್ದರು.

20 ವರ್ಷಗಳ ಮುನಿಸು ಮರೆತು ಒಂದಾದ ಮಲ್ಲಿಕಾ ಶೆರಾವತ್, ಇಮ್ರಾನ್​ ಹಷ್ಮಿ
ಇಮ್ರಾನ್​ ಹಷ್ಮಿ, ಮಲ್ಲಿಕಾ ಶರಾವತ್​
ಮದನ್​ ಕುಮಾರ್​
|

Updated on: Apr 12, 2024 | 7:03 PM

Share

2004ರಲ್ಲಿ ತೆರೆಕಂಡಿದ್ದ ‘ಮರ್ಡರ್​’ ಸಿನಿಮಾ (Murder Movie) ನೆನಪಿದೆಯಾ? ಆ ಸಿನಿಮಾ ಬಿಡುಗಡೆಯಾಗಿ 20 ವರ್ಷ ಕಳೆದಿದೆ. ಅಚ್ಚರಿ ಏನೆಂದರೆ, ಅದರಲ್ಲಿ ನಟಿಸಿದ್ದ ಇಮ್ರಾನ್​ ಹಷ್ಮಿ ಮತ್ತು ಮಲ್ಲಿಕಾ ಶೆರಾವತ್​ (Mallika Sherawat) ಅವರು ಕಳೆದ 20 ವರ್ಷಗಳಿಂದ ಪರಸ್ಪರ ಭೇಟಿ ಆಗಿರಲಿಲ್ಲ. ಇಬ್ಬರ ನಡುವೆ ಮುನಿಸು ಮನೆ ಮಾಡಿತ್ತು. ಆದರೆ ಈಗ ಅವರಿಬ್ಬರು ಮತ್ತೆ ಒಂದಾಗಿದ್ದಾರೆ. ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಮಲ್ಲಿಕಾ ಶೆರಾವತ್​ ಮತ್ತು ಇಮ್ರಾನ್ ಹಷ್ಮಿ (Emraan Hashmi) ಅವರನ್ನು ಮತ್ತೆ ಜೊತೆಯಾಗಿ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ.

ಮುಂಬೈನಲ್ಲಿ ಗುರುವಾರ (ಏಪ್ರಿಲ್​ 11) ನಿರ್ಮಾಪಕ ಆನಂದ್​ ಪಂಡಿತ್​ ಅವರ ಮಗಳ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಸಮಾರಂಭಕ್ಕೆ ಬಂದಿದ್ದಾಗ ಮಲ್ಲಿಕಾ ಶೆರಾವತ್​ ಮತ್ತು ಇಮ್ರಾನ್​ ಹಷ್ಮಿ ಅವರು ಭೇಟಿ ಆಗಿದ್ದಾರೆ. ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಮೂಲಕ ತಮ್ಮ ನಡುವೆ ಇದ್ದ 20 ವರ್ಷಗಳ ಮುನಿಸಿಗೆ ಪೂರ್ಣವಿರಾಮ ಹಾಕಿದ್ದಾರೆ.

ಇದನ್ನೂ ಓದಿ: ‘ಕಾಂಪ್ರಮೈಸ್ ಆಗುವಂತೆ ಹೇಳಿದ್ದರು’; ಮಲ್ಲಿಕಾ ಶೆರಾವತ್ ಎದುರಿಸಿದ ಕಷ್ಟ ಒಂದೆರಡಲ್ಲ..

‘ಮರ್ಡರ್​’ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್​ ಮತ್ತು ಇಮ್ರಾನ್​ ಹಷ್ಮಿ ಅವರು ಸಿಕ್ಕಾಪಟ್ಟೆ ಬೋಲ್ಡ್​ ಆಗಿ ನಟಿಸಿದ್ದರು. ಬೆಡ್​ರೂಮ್​ ದೃಶ್ಯದಲ್ಲಿ ಅವರು ಹಾಟ್​ ಆಗಿ ಕಾಣಿಸಿಕೊಂಡಿದ್ದರು. ಅವರಿಬ್ಬರು ಲಿಪ್​ ಲಾಕ್​ ಮಾಡಿಕೊಂಡಿದ್ದು ಬಾಲಿವುಡ್​ನಲ್ಲಿ ಹೊಸ ಸೆನ್ಸೇಷನ್​ ಸೃಷ್ಟಿ ಮಾಡಿತ್ತು. ತೆರೆಮೇಲೆ ಅಷ್ಟೆಲ್ಲ ಆಪ್ತವಾಗಿ ಕಾಣಿಸಿಕೊಂಡಿದ್ದ ಇಮ್ರಾನ್​ ಹಷ್ಮಿ ಮತ್ತು ಮಲ್ಲಿಕಾ ಶೆರಾವತ್ ಅವರು ರಿಯಲ್​ ಲೈಫ್​ನಲ್ಲಿ ಕಿರಿಕ್​ ಮಾಡಿಕೊಂಡಿದ್ದರು.

ಸಿನಿಮಾ ರಿಲೀಸ್​ ಆಗುವುದರೊಳಗೆ ಮಲ್ಲಿಕಾ ಶೆರಾವತ್​ ಮತ್ತು ಇಮ್ರಾನ್​ ಹಷ್ಮಿ ನಡುವಿನ ಕಿರಿಕ್​ ಜೋರಾಗಿತ್ತು. ಆ ಬಳಿಕ ಅವರು ಪರಸ್ಪರ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಆದರೆ 2021ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಮಲ್ಲಿಕಾ ಶೆರಾವತ್​ ಅವರು, ‘ಅದೊಂದು ಸಿಲ್ಲಿ ಜಗಳ. ತುಂಬ ಬಾಲಿಶವಾಗಿತ್ತು’ ಎಂದಿದ್ದರು. ಈಗ ಇಬ್ಬರ ನಡುವಿನ ಮನಸ್ತಾಪ ಮಾಯವಾಗಿದೆ. ಅವರಿಬ್ಬರು ಮತ್ತೆ ಜೋಡಿಯಾಗಿ ಸಿನಿಮಾ ಮಾಡಲಿ ಎಂದು ಅನೇಕರು ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ